
ಹುಣಸೂರು: 50ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ
Team Udayavani, Apr 1, 2023, 10:19 AM IST

ಹುಣಸೂರು: ನಗರದ ಶಬ್ಬೀರ್ ನಗರ ಹಾಗೂ ಒಂಟೆಪಾಳ್ಯ ಬೋರೆಯ 50 ಕ್ಕೂ ಹೆಚ್ವು ಮುಸ್ಲಿಂ ಯುವಕರು ಕಾಂಗ್ರೆಸ್ ತೊರೆದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್ ಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.
ನಗರದ ಪುರಸಭೆ ಮಾಜಿ ಅಧ್ಯಕ್ಷ ಹಜರತ್ ಜಾನ್ ನೇತೃತ್ವದಲ್ಲಿ ಅವರ ಅಭಿಮಾನಿಗಳು ಹಾಗೂ ಒಂಟೆಪಾಳ್ಯಬೋರೆ ಮತ್ತು ಶಬ್ಬೀರ್ ನಗರ ಹಾಗೂ ಮುಸ್ಲಿಂ ಬ್ಲಾಕ್ ನ 50 ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ತೊರೆದು ಹರೀಶ್ ಗೌಡರಿಂದ ಹೆಗಲಿಗೆ ಜೆಡಿಎಸ್ ಶಾಲನ್ನು ಹಾಕಿಸಿಕೊಂಡು ಸೇರ್ಪಡೆಗೊಂಡರು.
ಹರೀಶ್ ಗೌಡರು ಹಳೇ ಬಸ್ ನಿಲ್ದಾಣದ ಬಳಿ ಬರುತ್ತಿದ್ದಂತೆ ಹೂವಿನ ಅಂಗಡಿಯವರು ಹೂಮಳೆ ಸುರಿಸಿ ಸ್ವಾಗತಿಸಿ, ಅಭಿಮಾನ ಮೆರೆದರು.
ಈ ವೇಳೆ ಜಿ.ಪಂ. ಮಾಜಿ ಸದಸ್ಯ ಸುರೇಂದ್ರ, ಮುಖಂಡರಾದ ರಿಜ್ವಾನ್, ಫಾರೂಕ್, ಫಜಲುಲ್ಲಾ, ಫಜಲ್, ಹರವೆ ಶ್ರೀಧರ್, ಪ್ರಭು ಇತರರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
