
ತಂಗಿ ಜತೆ ನನ್ನನ್ನು ಬಲವಂತವಾಗಿ ಜೈಲಿಗಟ್ಟಿದ್ದರು: ದೂರು ದಾಖಲಿಸಿದ ಸ್ಯಾಂಟ್ರೋ ಪತ್ನಿ
Team Udayavani, Jan 25, 2023, 10:17 PM IST

ಬೆಂಗಳೂರು: ಸ್ಯಾಂಟ್ರೋ ರವಿಗೆ ಮತ್ತೂಂದು ಸಂಕಷ್ಟ ಎದುರಾಗಿದೆ. ತನ್ನ ಹಾಗೂ ಸಹೋದರಿ ವಿರುದ್ಧ ಸುಳ್ಳು ದೂರು ದಾಖಲಿಸಿರುವುದಾಗಿ ಆತನ ಪತ್ನಿಯೇ ರಿಜಿಸ್ಟರ್ ಪೋಸ್ಟ್ ಮೂಲಕ ಕಾಟನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾಳೆ.
ನನ್ನ ಹಾಗೂ ನನ್ನ ತಂಗಿ ವಿರುದ್ಧ ಬೋಗಸ್ ಕೇಸ್ ಹಾಕಿದ್ದರು. ಬಲವಂತ ವಾಗಿ ಕೇಸ್‌ನಲ್ಲಿ ಬಂಧಿಸಿ ಜೈಲು ಸೇರಿಸಿ ದ್ದರು. ನಮ್ಮ ಹೇಳಿಕೆಯನ್ನು ಪೊಲೀಸರೇ ದಾಖಲಿಸಿಕೊಂಡಿದ್ದಾರೆ. 10ಕ್ಕೂ ಹೆಚ್ಚು ಪೊಲೀಸರು ನಮಗೆ ತೊಂದರೆ ಕೊಟ್ಟಿದ್ದಾರೆ. ಪ್ರಕರಣ ನಡೆದಾಗ ನಾನು ಮೈಸೂರಿನಲ್ಲಿದ್ದೆ. ಮೈಸೂರಿನಲ್ಲಿ ನನ್ನನ್ನು ಹಾಗೂ ನನ್ನ ತಂಗಿಯನ್ನು ಬಂಧಿಸಿ ಬೆಂಗಳೂರಿನಲ್ಲಿ ಬಂಧಿಸಿರುವುದಾಗಿ ದಾಖಲೆ ಸಿದ್ಧಪಡಿಸಿದ್ದರು.
ಈ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್ ಪ್ರವೀಣ್ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಯಾಂಟ್ರೋ ರವಿ ಹಾಗೂ ಇನ್‌ಸ್ಪೆಕ್ಟರ್ ಪ್ರವೀಣ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
