ಬಡ್ಡಿ ದರ ಏರಿಕೆ ಸರಣಿ ನಿಂತರೆ ಎಲ್ಲರಿಗೂ ಅನುಕೂಲ


Team Udayavani, Feb 7, 2023, 6:00 AM IST

ಬಡ್ಡಿ ದರ ಏರಿಕೆ ಸರಣಿ ನಿಂತರೆ ಎಲ್ಲರಿಗೂ ಅನುಕೂಲ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಪರಾಮರ್ಶೆ ಸಭೆ ಸೋಮವಾರ ಆರಂಭವಾಗಿದ್ದು, ಬುಧವಾರ ಮುಗಿಯಲಿದೆ. ಬಜೆಟ್‌ ನಿರೀಕ್ಷೆಯಂತೆಯೇ ಈಗ ಜನ ಹಣಕಾಸು ನೀತಿ ಪರಾಮರ್ಶೆ ಸಭೆ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇದಕ್ಕೆ ಕಾರಣಗಳೂ ಇವೆ. 2019ರ ಜೂನ್‌ 6ರಿಂದ 2022ರ ಡಿಸೆಂಬರ್‌ 7ರ ವರೆಗೆ ಆರ್‌ಬಿಐನ ರೆಪೋ ದರ ಗಣನೀಯ ಪ್ರಮಾಣದಲ್ಲಿ ಏರಿಕೆ ಮತ್ತು ಇಳಿಕೆಯ ಹಾದಿಯಲ್ಲಿದೆ.

ಕೊರೊನೋತ್ತರದಲ್ಲಿ ಮಾರುಕಟ್ಟೆಯ ಚೇತರಿಕೆಗಾಗಿ ಆರ್‌ಬಿಐ, ರೆಪೋದರವನ್ನು ಇಳಿಕೆ ಮಾಡಿ ಖರೀದಿಗೆ ಉತ್ತೇಜನ ನೀಡಿತ್ತು. ಅಂದರೆ 2019ರ ಆರ್ಥಿಕ ವರ್ಷದಲ್ಲಿ ಶೇ.6.35ರಷ್ಟಿದ್ದ ರೆಪೋ ದರ 2020ರ ಹಣಕಾಸು ವರ್ಷಕ್ಕೆ ಶೇ.4.40ಕ್ಕೆ ಇಳಿಕೆಯಾಗಿತ್ತು. ಅಷ್ಟೇ ಅಲ್ಲ ಅದೇ ವರ್ಷದ ಮೇ ತಿಂಗಳಲ್ಲಿ ತೀರಾ ಕನಿಷ್ಠವೆಂದರೆ ಶೇ.4ಕ್ಕೆ ಇಳಿಕೆಯಾಗಿತ್ತು. ರಿಸರ್ವ್‌ ಬ್ಯಾಂಕ್‌ನ ಈ ನಿರ್ಧಾರದಿಂದಾಗಿ ಗೃಹ ಮತ್ತು ವಾಹನ ಸಾಲದ ಮೇಲಿನ ಬಡ್ಡಿ ದರವೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ, ಖರೀದಿದಾರರ ಮುಖದಲ್ಲಿ ಸಂತಸ ಮೂಡಿತ್ತು. ಅಷ್ಟೇ ಅಲ್ಲ ಮಾರುಕಟ್ಟೆ ಕೂಡ ಉತ್ತಮವಾಗಿ ಚೇತರಿಸಿಕೊಂಡಿತ್ತು.

ಆದರೆ 2022ರ ಹಣಕಾಸು ವರ್ಷದಲ್ಲಿ ಜಾಗತಿಕ ಕಾರಣಗಳಿಂದಾಗಿ ಹಣದುಬ್ಬರದ ಪ್ರಮಾಣ ತೀರಾ ಹೆಚ್ಚಳವಾಯಿತು. ಹೀಗಾಗಿ ಭಾರತ, ಅಮೆರಿಕ, ಇಂಗ್ಲೆಂಡ್‌, ಐರೋಪ್ಯ ಒಕ್ಕೂಟ ಸೇರಿದಂತೆ ಬಹುತೇಕ ರಾಷ್ಟ್ರಗಳು ಅನಿವಾರ್ಯ ಕಾರಣಗಳಿಂದಾಗಿ ಬಡ್ಡಿದರ ಏರಿಕೆಯ ಮೊರೆ ಹೋದವು. ಹೀಗಾಗಿ ಬ್ಯಾಂಕ್‌ಗಳೂ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಲು ಶುರು ಮಾಡಿದವು.

ಈಗ ಭಾರತದಲ್ಲಿ ಶೇ.6.25ರಷ್ಟು ರೆಪೋ ದರವಿದೆ. ಈಗ ಆರಂಭವಾಗಿರುವ ಎಂಪಿಸಿ ಸಭೆಯಲ್ಲಿ 0.25 ಅಂಶಗಳಷ್ಟು ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಅಂದರೆ ಈ ಆರ್ಥಿಕ ವರ್ಷದ ಕಡೇ ಎಂಪಿಸಿ ಸಭೆಯಾಗಿದ್ದು, ಆರ್‌ಬಿಐ ತೀರಾ ಕನಿಷ್ಠ ಎಂದರೆ  0.25 ಅಂಶಗಳಷ್ಟು ರೆಪೋ ದರ ಹೆಚ್ಚಳ ಮಾಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗೆಯೇ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಎಸ್‌ಬಿಐನ ಸಂಶೋಧನ ವರದಿಯೂ ಇದೇ ಅಂಶವನ್ನು ಉಲ್ಲೇಖೀಸಿದೆ. ಈ ಎಂಪಿಸಿ ಸಭೆಯಲ್ಲಿ 0.25 ಅಂಶ ರೆಪೋ ದರ ಏರಿಸಬಹುದು ಅಥವಾ ರೆಪೋ ದರ ಏರಿಕೆಯ ನಿರ್ಧಾರವನ್ನು ತೆಗೆದುಕೊಳ್ಳದೇ ಇರಬಹುದು ಎಂದಿದೆ. ಸದ್ಯದ ಈ ನಿರೀಕ್ಷೆಗೆ ಕಾರಣಗಳೂ ಇವೆ. ಸದ್ಯ ಭಾರತದಲ್ಲಿ ಹಣದುಬ್ಬರ ಸ್ಥಿತಿ ನಿಯಂತ್ರಕ ಹಂತಕ್ಕೆ ಬಂದು ತಲುಪಿದೆ. ಮುಂದಿನ ದಿನಗಳಲ್ಲಿ ಹಣದುಬ್ಬರ ಪ್ರಮಾಣ ಇನ್ನಷ್ಟು ಇಳಿಯುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಇತ್ತೀಚೆಗಷ್ಟೇ ಬಜೆಟ್‌ನಲ್ಲಿ ಮತ್ತು ಆರ್ಥಿಕ ಸಮೀಕ್ಷೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಒಂದು ವೇಳೆ ಹಣದುಬ್ಬರ ನಿಯಂತ್ರಣಕ್ಕೆ ಬಂದರೆ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಇರಿಸಿಕೊಂಡು ಹೋಗುವ ಸಾಧ್ಯತೆ ಇದೆ. ಅಲ್ಲದೆ ಕೆಲವು ವಿಶ್ಲೇಷಕರ ಪ್ರಕಾರ, ಶೇ.6.25 ರೆಪೋದರ  ಸಮರ್ಪಕವಾಗಿದೆ. ಅಂದರೆ ಒಂದು ರೀತಿಯಲ್ಲಿ ಅದು ಹೆಚ್ಚಾ ಅಲ್ಲ, ಕಡಿಮೆಯೂ ಅಲ್ಲದ ಸ್ಥಿತಿ ಎನ್ನುತ್ತಿದ್ದಾರೆ. ಆದರೂ ಮಾರುಕಟ್ಟೆ ಚೇತರಿಕೆಗೆ ಶೇ.6.25 ರೆಪೋ ದರ ಒಂದಷ್ಟು ಏರಿಕೆಯಂತೇ ಇದೆ. ತೀರಾ ಶೇ.4ಕ್ಕೆ ಹೋಗಲಾಗದಿದ್ದರೂ ಶೇ.5ರ ಆಚೀಚೆಗೆ ತಂದು ನಿಲ್ಲಿಸಬಹುದು. ಆಗ ಗೃಹ, ವಾಹನ ಸೇರಿದಂತೆ ಸಾಲ, ವಾಹನ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಗಳು ಇನ್ನಷ್ಟು ಚೇತರಿಕೆಯಾಗಬಹುದು. ಮಧ್ಯಮ ವರ್ಗದ ಕನಸಿಗೂ ರೆಕ್ಕೆ ಪುಕ್ಕ ಸಿಗಬಹುದಾಗಿದೆ. ಹೀಗಾಗಿ ಈ ಎಂಪಿಸಿಯಲ್ಲಿ ಆರ್‌ಬಿಐ ಬಡ್ಡಿದರ ಯಥಾಸ್ಥಿತಿ ಕಾಪಾಡಿಕೊಂಡು ಹೋಗಲಿ ಎಂಬುದು ಜನಸಾಮಾನ್ಯರ ನಿರೀಕ್ಷೆಯಾಗಿದೆ.

ಟಾಪ್ ನ್ಯೂಸ್

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಷ್ಯಾದ ಅಮಾನುಷ ರಣನೀತಿಗೆ ವಿದೇಶಿ ಪ್ರಜೆಗಳು ಬಲಿಪಶು!

ರಷ್ಯಾದ ಅಮಾನುಷ ರಣನೀತಿಗೆ ವಿದೇಶಿ ಪ್ರಜೆಗಳು ಬಲಿಪಶು!

Bi-annual Admission: Pros and Cons Let’s discuss

Editorial: ವರ್ಷಕ್ಕೆರಡು ಬಾರಿ ಪ್ರವೇಶಾತಿ: ಸಾಧಕ-ಬಾಧಕ ಚರ್ಚೆಯಾಗಲಿ

Editorial: ಜನತೆಯ ಸಮತೋಲಿತ ತೀರ್ಪನ್ನು ಪಕ್ಷಗಳು ಗೌರವಿಸಲಿ

Editorial: ಜನತೆಯ ಸಮತೋಲಿತ ತೀರ್ಪನ್ನು ಪಕ್ಷಗಳು ಗೌರವಿಸಲಿ

ಪ್ರಜಾತಂತ್ರದ ಮುಕುಟಕ್ಕೆ ಜಾಗತಿಕ ದಾಖಲೆಯ ಗರಿ

ಪ್ರಜಾತಂತ್ರದ ಮುಕುಟಕ್ಕೆ ಜಾಗತಿಕ ದಾಖಲೆಯ ಗರಿ

Exam 2

Public Examination: ವಿವೇಕಯುತ ನಡೆ ಇರಲಿ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

police crime

ಗೇಮಿಂಗ್‌ ಜೋನ್‌ ದುರಂತ: ಇನ್ನೂ ಇಬ್ಬರು ಪೊಲೀಸ್‌ ವಶಕ್ಕೆ

police USA

ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌: ಇಬ್ಬರು ಸಾವು

arrested

ಸಲ್ಮಾನ್‌ ಮನೆ ಹೊರಗೆ ಗುಂಡಿನ ದಾಳಿ: ರಾಜಸ್ಥಾನದ ವ್ಯಕ್ತಿ ಸೆರೆ

baby

UP ಕ್ಷುಲ್ಲಕ ಕಾರಣಕ್ಕೆ 2 ವರ್ಷದ ಮಗಳನ್ನು ಕಾಲುವೆಗೆಸೆದ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.