ರಾಸುಗಳ ಅಕ್ರಮ ಸಾಗಾಣೆ: ಗೂಡ್ಸ್ ಆಟೋ ಸಹಿತ ಇಬ್ಬರ ಬಂಧನ
Team Udayavani, Apr 12, 2023, 7:56 PM IST
ಹುಣಸೂರು: ಗೂಡ್ಸ್ ಆಟೋದಲ್ಲಿ ಮೈಸೂರು ಕಡೆಗೆ ಅಕ್ರಮವಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹಸುಗಳನ್ನು ರಕ್ಷಿಸಿರುವ ಬಿಳಿಕೆರೆ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಹುಣಸೂರು ತಾಲೂಕಿನ ರತ್ನಪುರಿಯ ಆಟೋ ಚಾಲಕ ನಜೀರ್ ಷರೀಫ್ ಹಾಗೂ ನಯಾಜ್ ಬಂಧಿತ ಆರೋಪಿಗಳು.
ಹುಣಸೂರು ಗ್ರಾಮಾಂತರ ಠಾಣೆ ಪಿಎಸ್ಐ ಅನ್ನಪೂರ್ಣ ಹಾಗೂ ಸಿಬ್ಬಂದಿಗಳು ಮುಂಜಾನೆ ರೌಂಡ್ಸ್ನಲ್ಲಿದ್ದ ವೇಳೆ ಗದ್ದಿಗೆ-ಮೈಸೂರು ರಸ್ತೆಯ ಕುಟ್ಟುವಾಡಿ ಸರ್ಕಲ್ ಬಳಿ ಗೋಡ್ಸ್ ಆಟೋದಲ್ಲಿ ರಾಸುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಆಟೋ ಮತ್ತು ಮೂರು ರಾಸುಗಳನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿ ಬಿಳಿಕೆರೆ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅದ್ಯಾದೇಶ-೨೦೨೦ರಂತೆ ಪ್ರಕರಣ ದಾಖಲಿಸಿ, ರಾಸುಗಳನ್ನು ಪಿಂಜಾರಾಪೋಲ್ಗೆ ಕಳುಹಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.