
ಗ್ರಾ.ಪಂ. ಚುನಾವಣಾ ವಿಚಾರ ಅಕ್ಟೋಬರ್ ನಲ್ಲಿ ತೀರ್ಮಾನ
ರಾಜ್ಯ ಚುನಾವಣಾ ಆಯೋಗದಿಂದ ಹೈಕೋರ್ಟಿಗೆ ಮಾಹಿತಿ
Team Udayavani, Jul 3, 2020, 6:59 AM IST

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಘೋಷಿಸುವ ಸಂಬಂಧ 2020ರ ಅಕ್ಟೋಬರ್ ಮೊದಲ ವಾರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಚುನಾವಣ ಆಯೋಗ ಹೈಕೋರ್ಟ್‌ಗೆ ತಿಳಿಸಿದೆ.
ಮೀಸಲಾತಿ ಅವಧಿ 10 ವರ್ಷಗಳಿಗೆ ಹೆಚ್ಚಿಸಿ ಸರಕಾರ ಹೊರಡಿಸಿರುವ ಅಧ್ಯಾದೇಶ ಪ್ರಕಾರ ಮೀಸ ಲಾತಿ ಮತ್ತು ಆವರ್ತನೆ ಮರು ನಿಗದಿ ಪಡಿಸಬೇಕಾಗಿದ್ದು, ಇದನ್ನು ಜು. 25ರೊಳಗೆ ಪೂರ್ಣಗೊಳಿಸಿ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗುವುದು.
ಅಕ್ಟೋಬರ್ ಮೊದಲ ವಾರದಲ್ಲಿ ಚುನಾವಣೆ ಸಂಬಂಧ ಸೂಕ್ತ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದಿದೆ.
ಟಾಪ್ ನ್ಯೂಸ್
