ವೇಗ ಹೆಚ್ಚಳ; 50 ನಿಮಿಷ ಮೊದಲೇ ಗಮ್ಯಕ್ಕೆ
Team Udayavani, Jan 24, 2022, 7:00 AM IST
ಕುಂದಾಪುರ: ವಾರಕ್ಕೆ ಮೂರು ದಿನ ಓಡಾಡುವ ಯಶವಂತಪುರ-ಕಾರವಾರ ರೈಲು ಕೊಂಕಣ ರೈಲ್ವೇ ಮಾರ್ಗದಲ್ಲಿ ಮಂಗಳೂರು ಜಂಕ್ಷನ್‌ನಿಂದ ಕಾರವಾರ ನಡುವೆ ವಿದ್ಯುತ್ ಚಾಲಿತ ಪ್ರಯಾಣಿಕರ ರೈಲಾಗಿ ಜ. 21ರಂದು ಓಡಾಟ ಪ್ರಾರಂಭಿ ಸಿದೆ. ಕೊಂಕಣ ರೈಲು ಮಾರ್ಗ ದಲ್ಲಿ ಆರಂಭವಾದ ಕರಾವಳಿ ಕರ್ನಾಟಕದ ಮೊದಲ ಪ್ರಯಾ ಣಿಕರ ವಿದ್ಯುತ್ ರೈಲೆಂಬ ಹೆಗ್ಗಳಿಕೆ ಪಡೆದಿರುವ ಇದು ಜ. 24ರಿಂದ ಮಂಗಳೂರು ಜಂಕ್ಷನ್- ಕಾರವಾರ ನಡುವೆ 50 ನಿಮಿಷ ವೇಗ ಹೆಚ್ಚಿಸಿ ರಾತ್ರಿ 11.20ರ ಬದಲು 10.30ಕ್ಕೆ ತಲುಪಲಿದೆ.
ಅರ್ಧದ ವರೆಗೆ ಡೀಸೆಲ್ ಎಂಜಿನ್
ಬೆಂಗಳೂರಿನಿಂದ ಕಾರವಾರಕ್ಕೆ ಚಲಿಸುವ ಹಗಲು ರೈಲು, ದಕ್ಷಿಣ ರೈಲ್ವೇ ಮತ್ತು ಕೊಂಕಣ ರೈಲ್ವೇ ಪಥದಲ್ಲಿ ಓಡಾಟ ನಡೆಸಬೇಕಿದೆ. ಮಂಗಳೂರು- ಕಾರವಾರದ ಕೊಂಕಣ ರೈಲ್ವೇ ಪಥ ಮಾತ್ರ ವಿದ್ಯುದೀ ಕರಣ ಆಗಿರುವುದ ರಿಂದ ಬೆಂಗಳೂರು- ಮಂಗಳೂರು ನಡುವಿನ ಮಾರ್ಗದಲ್ಲಿ ರೈಲು ಡೀಸೆಲ್ ಎಂಜಿನ್ ಬಳಸುತ್ತದೆ. ಮಂಗಳೂರಿ ನಲ್ಲಿ ಎಂಜಿನ್ ಬದಲಿಸಲಾಗುತ್ತದೆ. ತೋಕೂರು ಮತ್ತು ಕಾರವಾರ ನಡುವಿನ 240 ಕಿ.ಮೀ. ಕೆಆರ್‌ಸಿಎಲ್ ನೆಟ್‌ವರ್ಕ್ ವಿದ್ಯುದೀಕರಣಗೊಂಡಿದ್ದು, ಎಲೆಕ್ಟ್ರಿಕ್ ಲೋಕೋ ಮೂಲಕ ಸರಕು ಸಾಗಣೆ ರೈಲುಗಳನ್ನು ಕಳೆದ ಮೇ ತಿಂಗಳಿನಿಂದ ಕಾರವಾರದ ವರೆಗೆ ನಿರ್ವಹಿಸಲಾಗಿದೆ.
6 ವರ್ಷಗಳ ಹಿಂದೆ ಒಪ್ಪಿಗೆ
2015ರಲ್ಲಿ ಶಂಕುಸ್ಥಾಪನೆ ಮಾಡಲಾದ ಈ ಯೋಜನೆ ಯಡಿ ಕೊಂಕಣ ಪಥ ವನ್ನು ವಿದ್ಯುದೀ ಕರಣಗೊಳಿಸಲು ರೈಲ್ವೇ ಸಚಿವಾಲಯ 2016ರಲ್ಲಿ ಒಪ್ಪಿತ್ತು. ರೈಲ್ವೇ ವಿದ್ಯು ದೀಕರಣ ಹಾಗೂ ಪಥ ದ್ವಿಗುಣಗೊಳಿಸಲು ಚಾಲನೆ ನೀಡಿದ್ದರೂ ಪಥ ದ್ವಿಗುಣ ನಿರೀಕ್ಷಿತ ಮಟ್ಟದಲ್ಲಿ ಸಾಗಿಲ್ಲ.
ಯೋಜನೆಯ ಅನುಷ್ಠಾನಕ್ಕೆ ಸಾವಿರಾರು ಕೋಟಿ ರೂ. ಅನುದಾನ ಆವಶ್ಯಕತೆ ಇದ್ದುದರಿಂದ ಲಭ್ಯ ಅನುದಾನ ಬಳಸಿ ಸದ್ಯಕ್ಕೆ ಆಯ್ದ ಕಡೆ ವಿದ್ಯುದೀಕರಣಕ್ಕೆ ಆದ್ಯತೆ ನೀಡಲಾಗಿದೆ. ರೋಹಾದಿಂದ ವೆರ್ನಾವರೆಗೆ ಹಾಗೂ ವೆರ್ನಾದಿಂದ ತೋಕೂರು ವರೆಗೆ ಎರಡು ಪ್ಯಾಕೇಜ್ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅಂದಾಜು 1,287 ಕೋ.ರೂ. ವೆಚ್ಚದಲ್ಲಿ ಕೊಂಕಣ ರೈಲ್ವೇ ಪಥಕ್ಕೆ ಸಂಬಂಧಿ ಸಿ 741 ಕಿ.ಮೀ. ಮಾರ್ಗ ಜಾಲದಲ್ಲಿ ವಿದ್ಯುದೀಕರಣ ಈ ಮಾರ್ಚ್ ವೇಳೆಗೆ ನಡೆಯಲಿದೆ.
ಸುರಂಗದಲ್ಲಿ ಅಪೂರ್ಣ
ತೋಕೂರು-ವೆರ್ನಾ ವರೆಗಿನ ಪಥ ವಿದ್ಯುದೀಕರಣ ಅಂತಿಮವಾಗಿದೆ. ವೆರ್ನಾ- ರೋಹಾ ನಡುವಿನ ಕಾಮಗಾರಿ ಪ್ರಗತಿಯಲ್ಲಿದೆ. ಕೊಂಕಣ ರೈಲ್ವೇ ಪಥದಲ್ಲಿ ಶೇ. 87 ಕಾಮಗಾರಿ ಮುಗಿದಿದೆ. ಸುರಂಗ ಮಾರ್ಗದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಕ್ಷಿಪ್ರಗತಿಯಲ್ಲಿ ಪೂರೈಸಲು ಗಮನ ನೀಡಲಾಗುತ್ತಿದೆ. ಕಾರವಾರ-ತೋಕೂರು ವರೆಗೆ ವಿದ್ಯುದೀಕರಣ ವ್ಯವಸ್ಥೆ ಪೂರ್ತಿಗೊಂಡಿದ್ದರಿಂದ ಮೇ ತಿಂಗಳಿನಿಂದಲೇ ಗೂಡ್ಸ್ ರೈಲುಗಳ ಪ್ರಾಯೋಗಿಕ ಓಡಾಟ ನಡೆಯುತ್ತಿದೆ.
ಮಹಾರಾಷ್ಟ್ರದ ರೋಹಾ- ರತ್ನಗಿರಿಯ 204 ಕಿ.ಮೀ. ಹಾಗೂ ಕರ್ನಾಟಕದ ತೋಕೂರು-ಕಾರವಾರದ 239 ಕಿ.ಮೀ. ಸಹಿತ ಒಟ್ಟು 443 ಕಿ.ಮೀ. ದೂರ ವಿದ್ಯುದೀಕರಣವಾಗಿದೆ. ಉಳಿದ ಕಾಮಗಾರಿ ಶೀಘ್ರ ಪೂರ್ಣ ವಾಗಲಿದೆ.
– ಸುಧಾ ಕೃಷ್ಣಮೂರ್ತಿ
ಪಿಆರ್‌ಒ, ಕೊಂಕಣ ರೈಲ್ವೇ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೆರೆ, ಪ್ರಾಕೃತಿಕ ವಿಕೋಪಗಳಲ್ಲಿ ತುರ್ತು ಪರಿಹಾರ ಕಾರ್ಯ: ಜಿಲ್ಲಾಧಿಕಾರಿ ಕರೆ
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ನಾರಾಯಣ ಗುರುಗಳ ಪಠ್ಯ ಕೈಬಿಟ್ಟರೆ ಚಳವಳಿ: ಲೋಬೋ
ಮಗಳನ್ನೇ ಹತ್ಯೆಗೈದ ಪ್ರಕರಣ : ಕೊನೆಗೂ ಇಂದ್ರಾಣಿ ಮುಖರ್ಜಿಗೆ ಜಾಮೀನು
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ