ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ ಬಿಸಿಲು, ಸೆಕೆ; ಬೆಂಕಿ ಅವಘಡ

ಅರಣ್ಯ, ಕೃಷಿ ಭೂಮಿಗೆ ಅಪಾಯ!

Team Udayavani, Apr 18, 2020, 6:15 AM IST

ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ ಬಿಸಿಲು, ಸೆಕೆ; ಬೆಂಕಿ ಅವಘಡ

ಸಾಂದರ್ಭಿಕ ಚಿತ್ರ..

ವಿಶೇಷ ವರದಿ-ಮಂಗಳೂರು / ಸುಳ್ಯ: ಅಬ್ಬಬ್ಟಾ… ಎಂಥಾ ಸೆಕೆ ಮಾರಾಯ್ರೆ! ಇದು ಕರಾವಳಿ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಎಲ್ಲರ ಬಾಯಿಯಿಂದ ಕೇಳಿ ಬರುತ್ತಿರುವ ಮಾತು.

ಇದರ ಜತೆಗೇ ಅರಣ್ಯ, ರಬ್ಬರ್‌ ತೋಟಗಳಲ್ಲಿ ಬೆಂಕಿ ಅವಘಡ ಪ್ರಕರಣಗಳು ಹೆಚ್ಚಾಗುತ್ತಿವೆ. ವಿದ್ಯುತ್‌ ಸಹಿತ ಹಲವು ಕಾರಣಗಳಿಂದ ಬೆಂಕಿ ಕಿಡಿ ಹಸುರು ಸಂಪತ್ತನ್ನು ದಹಿಸುತ್ತಿದೆ.

ಹಲವು ಪ್ರಕರಣ
ಸುಳ್ಯ ತಾಲೂಕಿನ ಹತ್ತಕ್ಕೂ ಅಧಿಕ ಕಡೆಗಳಲ್ಲಿ ಈಗಾಗಲೇ ಬೆಂಕಿ ಅವಘಡ ಸಂಭವಿಸಿದೆ. ಅರಂತೋಡು ಭಾಗದಲ್ಲಿ ಅರಣ್ಯ ಪ್ರದೇಶ, ಕನಕಮಜಲು, ಐವರ್ನಾಡು, ಪೆರುವಾಜೆ ಮೊದಲಾದೆಡೆ ರಬ್ಬರ್‌, ಗೇರು ತೋಟಗಳು ಬೆಂಕಿಗೆ ಆಹುತಿ ಆಗಿವೆ.

ಹೆಚ್ಚಿನ ಸಂದರ್ಭಗಳಲ್ಲಿ ಬೀಡಿ, ಸಿಗರೇಟ್‌ ಸೇದಿ ಎಲ್ಲೆಂದರಲ್ಲಿ ಎಸೆಯುವುದೇ ಮೊದಲಾದ ಮನುಷ್ಯನ ನಿರ್ಲಕ್ಷ್ಯ ಬೆಂಕಿ ಅವಘಡಕ್ಕೆ ಕಾರಣವಾಗುತ್ತದೆ. ಕೆಲವು ಬಾರಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳಿಂದ ಸಿಡಿಯುವ ಬೆಂಕಿ ಕಿಡಿ ಅಥವಾ ವಿದ್ಯುತ್‌ ತಂತಿಗಳು ಬೆಸೆದು ಸೃಷ್ಟಿಯಾಗುವ ಕಿಡಿಯಿಂದ ಕೃಷಿ ಮತ್ತು ಅರಣ್ಯ ಪ್ರದೇಶ ಆಹುತಿಯಾಗುವುದೂ ಇದೆ. ಆದರೆ ಟ್ರಾನ್ಸ್‌ಫಾರ್ಮರ್‌ಗಳಿಂದ ಕಿಡಿ ಹಬ್ಬಿರುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ ಎನ್ನುತ್ತಾರೆ ಸುಳ್ಯ ಮೆಸ್ಕಾಂ ಎಇ ಹರೀಶ್‌ ಅವರು.

ಈ ಬಾರಿ ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡದ ಒಂದು ಪ್ರಕರಣ ಕಂಡುಬಂದಿದ್ದು, ಅದನ್ನು ತತ್‌ಕ್ಷಣ ತಹಬದಿಗೆ ತಂದಿದ್ದೇವೆ ಎನ್ನುತ್ತಾರೆ ಸುಳ್ಯ ವಲಯ ಅರಣ್ಯಧಿಕಾರಿ ಮಂಜುನಾಥ ಎನ್‌.

ಬೆಂಕಿ ರೇಖೆ
ಅರಣ್ಯದಲ್ಲಿ ಅಲ್ಲಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸುವುದರಿಂದ ಕಾಳಿYಚ್ಚು ವ್ಯಾಪಿಸುವುದನ್ನು ತಡೆಯಬಹುದು. ಪದೇ- ಪದೇ ಇದರ ಪರಿಶೀಲನೆ ಅಗತ್ಯ ಇದೆ. ತರೆಗೆಲೆಗಳು ಬೆಂಕಿ ರೇಖೆಯನ್ನು ಮುಚ್ಚುವುದರಿಂದ ಬೆಂಕಿ ಹರಡಲು ಕಾರಣವಾಗಬಹುದು.

ಈಗ ಲಾಕ್‌ಡೌನ್‌ ಪರಿಶೀಲನೆಗೆ ಅಡ್ಡಿ ಆಗುತ್ತಿದೆ ಎನ್ನುತ್ತಾರೆ ಕಾಡಿನ ಸನಿಹದ ನಿವಾಸಿಗಳು.ವಿದ್ಯುತ್‌ ತಂತಿ, ಟ್ರಾನ್ಸ್‌ಫಾರ್ಮರ್‌ ಅಳವಡಿಸಿರುವಲ್ಲಿ ಅಪಾಯ ಹೆಚ್ಚು. ಅಲ್ಲಿರುವ ಒಣ ಗಿಡ, ಮರ, ಎಲೆಗಳನ್ನು ತೆರವು ಮಾಡಬೇಕು. ಆ ಕಾರ್ಯವನ್ನು ಯಾರು ಮಾಡಬೇಕು ಎಂಬ ಗೊಂದಲ ಇದೆ. ಮೆಸ್ಕಾಂಗೆ ನಿತ್ಯವೂ ಅದನ್ನು ಗಮನಿಸಲು ಅಸಾಧ್ಯವಾಗಿರುವ ಕಾರಣ ಸ್ಥಳೀಯಾಡಳಿತ ನಿಗಾ ಇರಿಸಬೇಕಿದೆ.

ಬಿಸಿ ಹೆಚ್ಚಿಸಿದ ಲಾಕ್‌ಡೌನ್‌
ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಮನೆಯೊಳಗಡೆಯೇ ಇರುವುದು ಜನರಿಗೆ ಅನಿವಾರ್ಯವಾಗಿದೆ. ಕಚೇರಿಗಳಲ್ಲಿ, ಕೆಲವು ಮನೆಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇದ್ದರೂ ಕೋವಿಡ್ 19 ಮುನ್ನೆಚ್ಚರಿಕೆಯಾಗಿ ಅದನ್ನು ಬಳಸುತ್ತಿಲ್ಲ. ತಂಪು ಪಾನೀಯಗಳ ಮಳಿಗೆಗಳು, ಕ್ರೀಂ ಪಾರ್ಲರ್‌ಗಳು ಬಂದ್‌ ಆಗಿರುವುದರಿಂದ ಹಣ್ಣುಗಳನ್ನು ಮನೆಗೊಯ್ದು ಹಾಗೆಯೇ ಅಥವಾ ಜ್ಯೂಸ್‌ ತಯಾರಿಸಿ ಕುಡಿದು ಹೊಟ್ಟೆಯನ್ನು ತಣ್ಣಗಾಗಿಸಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಗರಗಳಲ್ಲಿ ಡೋರ್‌ ಡೆಲಿವರಿ ಇರುವುದರಿಂದ ಕೆಲವರು ತಂಪು ಪಾನೀಯ, ಜ್ಯೂಸ್‌, ಐಸ್‌ಕ್ರೀಂಗಳನ್ನು ಮನೆಗೇ ತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಕಲ್ಲಂಗಡಿ, ಕಬೂìಜ, ದಾಳಿಂಬೆ, ದ್ರಾಕ್ಷಿ, ಸೇಬು, ಬಾಳೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ.

ಅಲ್ಪಸ್ವಲ್ಪ ಮಳೆಯಿಂದ
ಸೆಕೆ ಹೆಚ್ಚಳ
ಕರಾವಳಿಯ ಕೆಲವೆಡೆ ಇತ್ತೀಚೆಗೆ ಅಲ್ಪಸ್ವಲ್ಪ ಮಳೆ ಬರುತ್ತಿರುವುದೂ ಸೆಕೆ ಹೆಚ್ಚಾಗಲು ಕಾರಣ. ಮಂಗಳೂರಿನಲ್ಲಿ ಗುರುವಾರ ಗರಿಷ್ಠ ಉಷ್ಣಾಂಶ 36ರಿಂದ 37 ಡಿಗ್ರಿ ಸೆಲ್ಸಿಯಸ್‌ ಇತ್ತು. 3-4 ದಿನಗಳಿಂದ ಇದೇ ಮಟ್ಟದಲ್ಲಿದೆ.

ಟಾಪ್ ನ್ಯೂಸ್

AIMIM leader arrested for derogatory comment on Shivling

ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

astro

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮುಚ್ಚಿದ ಬಾಗಿಲಿನ ಹಿಂದೆ ಆರ್‌ಸಿಬಿ: ಗುಜರಾತ್‌ ಟೈಟಾನ್ಸ್‌ ವಿರುದ್ಧ ಇಂದು ಅಂತಿಮ ಪಂದ್ಯ

ಮುಚ್ಚಿದ ಬಾಗಿಲಿನ ಹಿಂದೆ ಆರ್‌ಸಿಬಿ: ಗುಜರಾತ್‌ ಟೈಟಾನ್ಸ್‌ ವಿರುದ್ಧ ಇಂದು ಅಂತಿಮ ಪಂದ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋರಿಕೆಗೆ ಸ್ಪಂದಿಸಿದ ಅಮ್ಮಂದಿರು: ಎದೆಹಾಲಿಲ್ಲದೆ ಕಂಗೆಟ್ಟಿದ್ದ ತಾಯಿಗೆ ನೆರವು!

ಕೋರಿಕೆಗೆ ಸ್ಪಂದಿಸಿದ ಅಮ್ಮಂದಿರು: ಎದೆಹಾಲಿಲ್ಲದೆ ಕಂಗೆಟ್ಟಿದ್ದ ತಾಯಿಗೆ ನೆರವು!

ಗ್ರಾಮ ಪಂಚಾಯತ್‌ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್‌ ಟ್ರ್ಯಾಕಿಂಗ್ !ಗ್ರಾಮ ಪಂಚಾಯತ್‌ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್‌ ಟ್ರ್ಯಾಕಿಂಗ್ !

ಗ್ರಾಮ ಪಂಚಾಯತ್‌ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್‌ ಟ್ರ್ಯಾಕಿಂಗ್ !

ನಾರಾಯಣ ಗುರುಗಳ ಪಠ್ಯ ಕೈಬಿಟ್ಟರೆ ಚಳವಳಿ: ಲೋಬೋ

ನಾರಾಯಣ ಗುರುಗಳ ಪಠ್ಯ ಕೈಬಿಟ್ಟರೆ ಚಳವಳಿ: ಲೋಬೋ

ಹಳ್ಳಿ ಹಳ್ಳಿಯಲ್ಲೂ ಡಿಜಿಟಲ್‌ ಸಾಕ್ಷರತೆ: ನಳಿನ್‌ ಕುಮಾರ್‌ ಕಟೀಲು

ಹಳ್ಳಿ ಹಳ್ಳಿಯಲ್ಲೂ ಡಿಜಿಟಲ್‌ ಸಾಕ್ಷರತೆ: ನಳಿನ್‌ ಕುಮಾರ್‌ ಕಟೀಲು

ದ.ಕ. ಜಿಲ್ಲೆಯಾದ್ಯಂತ ಉತ್ತಮ ಮಳೆ; ಇಂದು “ಆರೆಂಜ್‌ ಅಲರ್ಟ್‌’

ದ.ಕ. ಜಿಲ್ಲೆಯಾದ್ಯಂತ ಉತ್ತಮ ಮಳೆ; ಇಂದು “ಆರೆಂಜ್‌ ಅಲರ್ಟ್‌’

MUST WATCH

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

ಹೊಸ ಸೇರ್ಪಡೆ

AIMIM leader arrested for derogatory comment on Shivling

ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.