ನಾಗ್ಪುರ ಟೆಸ್ಟ್ ಪಂದ್ಯಕ್ಕೆ ಹೇಝಲ್ವುಡ್ ಇಲ್ಲ
Team Udayavani, Feb 5, 2023, 11:22 PM IST
ಹೊಸದಿಲ್ಲಿ: ಆಸ್ಟ್ರೇಲಿಯದ ಪ್ರಮುಖ ವೇಗಿ ಜೋಶ್ ಹೇಝಲ್ವುಡ್ ಭಾರತದೆದುರಿನ ಪ್ರಥಮ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದು ಖಾತ್ರಿಯಾಗಿದೆ. ಅವರು ದ್ವಿತೀಯ ಟೆಸ್ಟ್ಗೂ ಲಭಿಸುವುದು ಅನುಮಾನ ಎನ್ನಲಾಗಿದೆ.
ಇದರಿಂದ ಆಸ್ಟ್ರೇಲಿಯಕ್ಕೆ ಅವಳಿ ಆಘಾತ ಎದುರಾ ದಂತಾಯಿತು. ವೇಗಿ ಮಿಚೆಲ್ ಸ್ಟಾರ್ಕ್ ಕೈಬೆರಳಿನ ಗಾಯದಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಈಗಾಗಲೇ ಬೇರ್ಪಟ್ಟಿದ್ದಾರೆ.
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಸಿಡ್ನಿಯಲ್ಲಿ ನಡೆದೆ ಮಳೆಪೀಡಿತ ನ್ಯೂ ಇಯರ್ ಟೆಸ್ಟ್ ವೇಳೆ ಹೇಝಲ್ವುಡ್ ಎಡಗಾಲಿಗೆ ಏಟಾಗಿತ್ತು. ಇದರ ನೋವು ಇನ್ನೂ ವಾಸಿಯಾಗಿಲ್ಲ.
“ಮೊದಲ ಟೆಸ್ಟ್ ಆಡುವ ಬಗ್ಗೆ ಖಾತ್ರಿ ಇಲ್ಲ. ಇದಕ್ಕೆ ಇನ್ನೂ ಕೆಲವು ದಿನಗಳಿವೆ. ನೋವು ವಾಸಿ ಯಾಗುತ್ತಿದೆ. ಮಂಗಳವಾರದ ಅಭ್ಯಾಸದಲ್ಲಿ ಬೌಲಿಂಗ್ ನಡೆಸಲಿದ್ದೇನೆ’ ಎಂದು ಹೇಝಲ್ವುಡ್ ಅವರು ಹೇಳಿದರು.