
“ವಂದೇ ಮೆಟ್ರೋ’ಗೆ ನಮೋ ಕರೆ! 100 ಕಿ.ಮೀ. ವ್ಯಾಪ್ತಿಯ 2 ನಗರಗಳ ನಡುವೆ ಸಂಚಾರಕ್ಕೆ ಯೋಜನೆ
Team Udayavani, Feb 5, 2023, 7:40 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕನಸಿನ ವಂದೇ ಭಾರತ್ ರೈಲು ಯಶಸ್ವಿ ಓಡಾಟದ ನಡುವೆಯೇ, ಪ್ರಾದೇಶಿಕ ನಗರಗಳ ನಡುವೆ ಸಂಚರಿಸಲು “ವಂದೇ ಮೆಟ್ರೋ’ಗಳನ್ನು ಅಭಿವೃದ್ಧಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಸೂಚನೆ ನೀಡಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ, ಪ್ರಾದೇಶಿಕ ಮಟ್ಟದಲ್ಲಿ ವಂದೇ ಭಾರತ್ ಕಾರ್ಯನಿರ್ವಹಿಸಬೇಕು ಎಂಬುದು ಪ್ರಧಾನಿ ಅವರ ಯೋಜನೆ. ಆದರೆ, ಇದು ವಂದೇ ಭಾರತ್ ರೈಲ್ವೆ ಪರಿಕಲ್ಪನೆಗಿಂತ ಭಿನ್ನವಾಗಿ, ಮೆಟ್ರೋ ರೂಪದಲ್ಲಿರಬೇಕು ಎಂಬುದು ಅವರ ಆಶಯ. ಅಂದರೆ, 100 ಕಿ.ಮೀ. ವ್ಯಾಪ್ತಿಯಲ್ಲಿರುವ 2 ನಗರಗಳನ್ನು ಬೆಸೆಯುವಂತೆ ವಂದೇ ಮೆಟ್ರೋಗಳನ್ನು ಅಭಿವೃದ್ಧಿ ಪಡಿಸಲು ರೈಲ್ವೆ ಸಚಿವಾಲಯಕ್ಕೆ ಪ್ರಧಾನಿ ತಿಳಿಸಿದ್ದಾರೆ ಎಂದು ವೈಷ್ಣವ್ ಹೇಳಿದ್ದಾರೆ.
ಅಲ್ಲದೇ, ಈ ಕಾರ್ಯವನ್ನು 2023ರಲ್ಲೇ ಆರಂಭಿಸಬೇಕು ಎನ್ನುವ ಗುರಿಯನ್ನೂ ಮೋದಿ ಅವರು ನೀಡಿದ್ದು, ಅದರ ಭಾಗವಾಗಿ ರೈಲ್ವೆ ಮುಂದಿನ 12 ರಿಂದ 16 ತಿಂಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದ್ದು, ಆ ಬಳಿಕ 1 ವರ್ಷದ ಒಳಗೆ ವಂದೇ ಮೆಟ್ರೋಗಳನ್ನು ಹೊರತರಲಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮನವಮಿ: ದೇವಾಲಯದ ಬಾವಿಯ ಸಿಮೆಂಟ್ ಹಾಸು ಕುಸಿದು 13 ಭಕ್ತರ ಮೃತ್ಯು

ಹೆತ್ತವರನ್ನೇ ಹತ್ಯೆಗೈದಿದ್ದ 15ರ ಬಾಲಕಿ ಖಾಕಿ ಬಲೆಗೆ

ರಾಜಕೀಯ ವಿವಾದ; ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು!

ಜೋಸ್ ಆಲುಕ್ಕಾಸ್‌ನ ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ಆರ್. ಮಾಧವನ್ ಆಯ್ಕೆ

ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…