ಅಕ್ಸ್ಫರ್ಡ್ ಯುನಿವರ್ಸಿಟಿ ಆಸ್ಪತ್ರೆಗೆ ಮೇಘನಾ ಸಿಇಒ
Team Udayavani, Feb 19, 2023, 7:55 AM IST
ಲಂಡನ್: ಇಂಗ್ಲೆಂಡ್ನ ಪ್ರಖ್ಯಾತ ಅಕ್ಸ್ಫರ್ಡ್ ಯುನಿವರ್ಸಿಟಿ ಆಸ್ಪತ್ರೆಯ ರಾಷ್ಟ್ರೀಯ ಆರೋಗ್ಯ ಸೇವೆ(ಎನ್ಎಚ್ಎಸ್) ಫೌಂಡೇಶನ್ ಟ್ರಸ್ಟ್ನ ಸಿಇಒ ಆಗಿ ಭಾರತ ಮೂಲದ ಪ್ರೊ. ಮೇಘನ ಪಂಡಿತ್ ನೇಮಕವಾಗಿದ್ದಾರೆ.
ಈ ಮೂಲಕ ಮೇಘನ ಪಂಡಿತ್ ಅವರು ಟ್ರಸ್ಟ್ನ ಮೊದಲ ಮಹಿಳಾ ಮುಖ್ಯಸ್ಥರಾಗಿದ್ದಾರೆ. ಅಲ್ಲದೇ ಶೆಫೋರ್ಡ್ ಗ್ರೂಪ್ನ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್ನ ಮೊದಲ ಭಾರತ ಮೂಲದ ಸಿಇಒ ಆಗಿದ್ದಾರೆ.
2022ರ ಜುಲೈನಿಂದ ಅಕ್ಸ್ಫರ್ಡ್ ಯುನಿವರ್ಸಿಟಿ ಆಸ್ಪತ್ರೆಯ ಪ್ರಭಾರಿ ಸಿಇಒ ಆಗಿ ಪ್ರೊ. ಮೇಘನ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಸ್ಪರ್ಧಾತ್ಮಕ ಪ್ರಕ್ರಿಯೆ ಮೂಲಕ ಅವರನ್ನು ಆ ಹುದ್ದೆಗೆ ಶಾಶ್ವತವಾಗಿ ನೇಮಿಸಲಾಗಿದೆ.
ಈ ಹಿಂದೆ ಅವರು ಅಮೆರಿಕದ ಮಿಂಚಿಗನ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕಿ ಆಗಿದ್ದರು. ನಂತರ ಎನ್ಎಚ್ಎಸ್ ಟ್ರಸ್ಟ್ನ ಮುಖ್ಯ ವೈದ್ಯಕೀಯ ಅಧಿಕಾರಿ(ಸಿಎಂಒ) ಆಗಿ ಕಾರ್ಯ ನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು