
ಭಾರತ-ಕೊರಿಯಾ ಪಂದ್ಯ ರದ್ದು: ಭಾರತ ವನಿತಾ ಹಾಕಿ ತಂಡಕ್ಕೆ ಕೋವಿಡ್ ಆಘಾತ
ವೇಳಾಪಟ್ಟಿ ಅತಂತ್ರ
Team Udayavani, Dec 9, 2021, 5:00 AM IST

ಡೋಂಗೆ (ದಕ್ಷಿಣ ಕೊರಿಯಾ): ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಕೊರಿಯಾಕ್ಕೆ ಬಂದಿದ್ದ ಭಾರತ ವನಿತಾ ಹಾಕಿ ತಂಡ ಕೊರೊನಾಘಾತಕ್ಕೆ ಸಿಲುಕಿದೆ.
ತಂಡದ ಓರ್ವ ಆಟಗಾರ್ತಿಗೆ ಕೋವಿಡ್-19 ದೃಢಪಟ್ಟಿದ್ದು, ಇದರಿಂದ ಬುಧವಾರ ನಡೆಯ ಬೇಕಿದ್ದ ಭಾರತ-ಕೊರಿಯಾ ನಡು ವಿನ ಪಂದ್ಯ ರದ್ದುಗೊಂಡಿದೆ.
“ಮಂಗಳವಾರದ ಕೋವಿಡ್ ಪರೀಕ್ಷೆಯ ವರದಿಯಲ್ಲಿ ಭಾರತದ ಓರ್ವ ಆಟಗಾರ್ತಿಯ ಫಲಿತಾಂಶ ಪಾಸಿಟಿವ್ ಬಂದಿದೆ. ಹೀಗಾಗಿ ಭಾರತವಿಂದು ಕೊರಿಯಾ ವಿರುದ್ಧ ಆಡಲಿಳಿಯುವುದಿಲ್ಲ.
ಮುಂದಿನ ಮಾಹಿತಿಯನ್ನು ಶೀಘ್ರದಲ್ಲಿ ನೀಡ ಲಾಗುವುದು’ ಎಂದು ಎಎಚ್‌ಎಫ್ ಟ್ವೀಟ್ ಮಾಡಿದೆ. ಆಟಗಾರ್ತಿಯ ಹೆಸರನ್ನು ಬಹಿರಂಗಗೊಳಿಸಿಲ್ಲ.
ಭಾರತದ ಉಳಿದ ಪಂದ್ಯಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ. ವೇಳಾಪಟ್ಟಿ ಯಂತೆ ಗುರುವಾರ ಭಾರತ ತಂಡ ಚೀನವನ್ನು ಎದುರಿಸಬೇಕಿದೆ.
ಇದನ್ನೂ ಓದಿ:ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್
ಈ ಕೂಟಕ್ಕೆ ಸೋಮವಾರ ದಿಂದಲೇ ಕೋವಿಡ್-19 ಕಾಟ ತಟ್ಟಿತ್ತು. ಮಲೇಶ್ಯ ತಂಡದ ನುರುಲ್ ಫೇಝಾ ಶಫೀಖ್ ಖಲೀಂ ಅವರ ಫಲಿತಾಂಶ ಪಾಸಿಟಿವ್ ಬಂದಿತ್ತು. ಹೀಗಾಗಿ ಸೋಮವಾರ ಮಲೇಶ್ಯ-ಭಾರತ ನಡುವಿನ ಪಂದ್ಯವೂ ರದ್ದುಗೊಂಡಿತ್ತು.
ಈಗ ಮಲೇಶ್ಯನ್ ತಂಡ ಕ್ವಾರಂಟೈನ್‌ನಲ್ಲಿದೆ. ಭಾರತ ಕೂಡ ಇದೇ ಮಾರ್ಗ ಅನುಸರಿಸುವುದು ಬಹುತೇಕ ಖಚಿತ. ಥಾಯ್ಲೆಂಡ್ ವಿರುದ್ಧ ಏಕೈಕ ಪಂದ್ಯವಾಡಿರುವ ಭಾರತ, ಇದನ್ನು 13-0 ಅಂತರ ದಿಂದ ಗೆದ್ದಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ

Asia Cup ಶ್ರೀಲಂಕಾದಲ್ಲಿ ಆಡಿ, ಇಲ್ಲವಾದರೆ ಬಿಟ್ಟುಹೋಗಿ: ಪಾಕಿಸ್ಥಾನಕ್ಕೆ BCCI ಚಾಟಿಯೇಟು

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್

IPL Final: ಮೋಹಿತ್ ಜತೆ ಮಾತನಾಡಿದ್ದು ಹಾರ್ದಿಕ್ ಮಾಡಿದ ತಪ್ಪು: ಸೆಹವಾಗ್ ಕಿಡಿ

ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್- ಟೀಮ್ ಇಂಡಿಯಾ ಕಠಿನ ಅಭ್ಯಾಸ