ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್ನಲ್ಲಿ ಘಟನೆ
Team Udayavani, Dec 5, 2021, 10:30 PM IST
ಜಾವಾ : ಇಂಡೋನೇಷ್ಯಾದ ದ್ವೀಪವಾದ ಜಾವಾ ದ್ವೀಪದ ಪೂರ್ವಭಾಗದಲ್ಲಿರುವ ಲುಮಾಜಂಗ್ ಜಿಲ್ಲೆಯಲ್ಲಿರುವ ಮೌಂಟ್ ಸೆಮೆರು ಜ್ವಾಲಾಮುಖಿ ಪರ್ವತದಿಂದ ಶನಿವಾರದಂದು ದಿಢೀರನೆ ಜ್ವಾಲಾಮುಖೀ ಸ್ಫೋಟಗೊಂಡಿದೆ. ಲಾವಾರಸವು ಧಾರಾಕಾರವಾಗಿ ಸುತ್ತಲಿನ ಹಳ್ಳಿಗಳಿಗೆ ಆವರಿಸಿದ್ದು, ಈ ದುರ್ಘಟನೆಯಲ್ಲಿ 13 ಜನರು ಸಾವಿಗೀಡಾಗಿದ್ದಾರೆ.
ಸ್ಫೋಟದ ಭೀಕರತೆಗೆ ಜ್ವಾಲಾಮುಖೀಯ ಪರ್ವದ ಬಾಯಿಯಿಂದ ಸುಮಾರು 12,000 ಮೀಟರ್ಗಳಷ್ಟು ಎತ್ತರಕ್ಕೆ ಧೂಮ ಚಿಮ್ಮಿದ್ದು, ಅದರ ಬೆನ್ನಿಗೇ ಲಾವಾರಸವು ಜ್ವಾಲಾಮುಖಿ ಪರ್ವತದಿಂದ ಹರಿಯಲಾರಂಭಿಸಿತು. ಲಾವಾದಿಂದಾಗಿ, ಲುಮಾಜಂಗ್ನೊಂದಿಗೆ ಹತ್ತಿರದ ಮಾಲಂಗ್ ಜಿಲ್ಲೆಗೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿರುವ ಸೇತುವೆಯು ನಾಶವಾಗಿದೆ. ಇದರಿಂದಾಗಿ, ಲುಮಾಜಂಗ್ಗೆ ಸಂಪರ್ಕ ನಿಲುಗಡೆಯಾಗಿದೆ.
ಸುತ್ತಲಿನ ಹಳ್ಳಿಗಳಲ್ಲೆಲ್ಲಾ ಹಾರುಬೂದಿ ಆವರಿಸಿಕೊಂಡಿತ್ತು, ಅದರ ಬೆನ್ನಿಗೇ ಅಗಾಧ ಮಳೆ ಸುರಿಯಲಾರಂಭಿಸಿದೆ. ಮಳೆಯಿಂದಾಗಿ ತಣ್ಣಗಾಗಿರುವ ಲಾವಾರಸವು ಸುತ್ತಲಿನ ಹಳ್ಳಿಗಳಲ್ಲೆಲ್ಲಾ ದೈತ್ಯ ಬೂದಿಯ ಪದರವಾಗಿ ಬದಲಾಗಿದ್ದು ಅದರ ಅವಶೇಷಗಳಲ್ಲಿ ಬದುಕುಳಿದಿರಬಹುದಾದ ಜನರನ್ನು ಪತ್ತೆ ಹಚ್ಚುವ ಕಾರ್ಯ ಆರಂಭಿಸಲಾಗಿದೆ.
ಇದನ್ನೂ ಓದಿ : ಸೇವೆಗೆ ಸೇರಿದ 3 ತಿಂಗಳಲ್ಲೇ ಮುದ್ದೇಬಿಹಾಳದ ಯೋಧ ಆತ್ಮಹತ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ