
ಬಡ್ಡಿ ಹೆಚ್ಚಳ: ಗೃಹ, ವಾಹನ ಸಾಲ ಮತ್ತಷ್ಟು ತುಟ್ಟಿ
ಆರ್‌ಬಿಐನಿಂದ ಮತ್ತೊಮ್ಮೆ ರೆಪೋ ದರ ಏರಿಕೆ
Team Udayavani, Feb 9, 2023, 7:20 AM IST

ಮುಂಬಯಿ: ನಿರೀಕ್ಷೆಯಂತೆಯೇ ಭಾರತೀಯ ರಿಸರ್ವ್ ಬ್ಯಾಂಕ್ 25 ಮೂಲಾಂಶಗಳಷ್ಟು ರೆಪೋ ದರ ಏರಿಸಿದ್ದು, ಗೃಹ ಮತ್ತು ವಾಹನ ಸಾಲ ದುಬಾರಿಯಾಗಲಿದೆ.
ಆರ್‌ಬಿಐನ ಆರು ಸದಸ್ಯರ ಆರ್ಥಿಕ ಪರಾಮರ್ಶೆ ನೀತಿ ಸಮಿತಿ ಸಭೆಯಲ್ಲಿ ಬುಧವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ರೆಪೋ ದರ ಶೇ. 6.50ಕ್ಕೆ ಏರಿಕೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಆರನೇ ಬಾರಿಗೆ ಬಡ್ಡಿ ದರ ಏರಿಸಿದ್ದು, ಒಟ್ಟಾರೆ 250 ಮೂಲಾಂಶಗಳಷ್ಟು ಏರಿಸಲಾಗಿದೆ.
ಬಡ್ಡಿದರದಲ್ಲಿ ಏರಿಕೆ ಈಗ ಗೃಹ, ವಾಹನ ಸಾಲಗಳ ಬಡ್ಡಿದರ ಏರಿಕೆಯಾಗಿ, ಇಎಂಐ ಹೆಚ್ಚಳವಾಗಲಿದೆ. ಇದರಿಂದ ಮಧ್ಯಮ ವರ್ಗಕ್ಕೆ ಪೆಟ್ಟು ಬೀಳಲಿದೆ ಎನ್ನಲಾಗಿದೆ. ತಮ್ಮ ವಹಿವಾಟಿನ ಮೇಲೂ ಇದು ಅಡ್ಡ ಪರಿಣಾಮ ಬೀರೀತು ಎಂದು ರಿಯಲ್ ಎಸ್ಟೇಟ್ ವಲಯ ಆತಂಕ ವ್ಯಕ್ತಪಡಿಸಿದೆ. ಆದರೆ ಠೇವಣಿದಾರರಿಗೆ ಇದರಿಂದ ಲಾಭವಾಗಲಿದೆ.
ಟಾಪ್ ನ್ಯೂಸ್
