ನಿಧಾನಗತಿಯ ಬೌಲಿಂಗ್: ಕೇನ್ ವಿಲಿಯಮ್ಸನ್ಗೆ 12 ಲಕ್ಷ ರೂ. ದಂಡ
Team Udayavani, Mar 30, 2022, 11:00 PM IST
ಪುಣೆ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮಂಗಳವಾರದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ದಾಳಿ ಸಂಘಟಿಸಿದ್ದಕ್ಕೆ ಸನ್ರೈಸರ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಏಕಮುಖವಾಗಿ ಸಾಗಿದ ಈ ಪಂದ್ಯದಲ್ಲಿ ರಾಜಸ್ಥಾನ್ ತಂಡ 61 ರನ್ನುಗಳಿಂದ ಗೆಲುವು ಸಾಧಿಸಿತ್ತು.
ಇದನ್ನೂ ಓದಿ:ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಅನುಮಾನ ಬೇಡ: ಎಬಿಡಿ
ಇದು ಹೈದರಾಬಾದ್ ತಂಡದ ಈ ಋತುವಿನ ಮೊದಲ “ಅಪರಾಧ’ವಾಗಿದ್ದರಿಂದ ನಿಧಾನಗತಿಯ ಬೌಲಿಂಗ್ ಅಪರಾಧಕ್ಕೆ ಸಂಬಂಧಿಸಿ ಐಪಿಎಲ್ನ ನೀತಿ ಸಂಹಿತೆಯಂತೆ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ನ ಪ್ರಕಟನೆ ತಿಳಿಸಿದೆ.