ಗೆಲುವಿನ ಟ್ರ್ಯಾಕ್‌ಗೆ ಮರಳಲು ರಾಜಸ್ಥಾನ್‌ ರಾಯಲ್ಸ್‌ ಪ್ರಯತ್ನ

Team Udayavani, May 7, 2022, 7:30 AM IST

ಗೆಲುವಿನ ಟ್ರ್ಯಾಕ್‌ಗೆ ಮರಳಲು ರಾಜಸ್ಥಾನ್‌ ರಾಯಲ್ಸ್‌ ಪ್ರಯತ್ನ

ಮುಂಬಯಿ: ರಾಜಸ್ಥಾನ್‌ ರಾಯಲ್ಸ್‌ ಶನಿವಾರದ ಮೊದಲ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

ಈ ಪಂದ್ಯದಲ್ಲಿ ತನ್ನ ಅಭಿಯಾನವನ್ನು ಮರಳಿ ಟ್ರ್ಯಾಕ್‌ಗೆ ತರಬೇಕಾದರೆ ತಂಡವು ಬ್ಯಾಟಿಂಗ್‌ನಲ್ಲಿ ಮಿಂಚಲೇಬೇಕಾದ ಅಗತ್ಯವಿದೆ.

ಇದೇ ವೇಳೆ ಅಸ್ಥಿರ ಪ್ರದರ್ಶನ ನೀಡುತ್ತಿರುವ ಪಂಜಾಬ್‌ ಗೆಲುವಿನತ್ತ ಮುಖ ಮಾಡಬೇಕಾಗಿದೆ.
ರಾಜಸ್ಥಾನ್‌ ತಂಡವು ಒಂದು ಹಂತದಲ್ಲಿ ಅಂಕಪಟ್ಟಿಯ ಅಗ್ರಸ್ಥಾನ ಕ್ಕಾಗಿ ಗುಜರಾತ್‌ ಟೈಟಾನ್ಸ್‌ಗೆ ತೀವ್ರ ಪೈಪೋಟಿ ನೀಡಿತ್ತು. ಆದರೆ ಮಾಜಿ ಚಾಂಪಿಯನ್‌ ಆಗಿರುವ ರಾಜಸ್ಥಾನ್‌ ಇದೀಗ ಚಿಕ್ಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಸತತ ಎರಡು ಸೋಲಿನ ಬಳಿಕ ತಂಡವು ಪಂಜಾಬ್‌ ಸವಾಲಿಗೆ ಸಿದ್ಧವಾಗಿದೆ. ಈ ಹಿಂದಿನ ಪಂದ್ಯಗಳಲ್ಲಿ ತಂಡವು ಕೆಕೆಆರ್‌ ಮತ್ತು ಮುಂಬೈ ವಿರುದ್ಧ ಸೋತಿತ್ತು.

ಇನ್ನೊಂದು ಕಡೆ ಪಂಜಾಬ್‌ ತಂಡವು ಈ ಹಿಂದಿನ ಪಂದ್ಯದಲ್ಲಿ ಅಗ್ರ ಸ್ಥಾನಿ ಗುಜರಾತ್‌ ಟೈಟಾನ್ಸ್‌ ತಂಡ ವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಹುಮ್ಮಸ್ಸಿನಲ್ಲಿದೆ. ಪ್ಲೇ ಆಫ್ಗೆ ತೇರ್ಗಡೆಯಾಗಬೇಕಾದರೆ ತಂಡವು ಗೆಲುವಿನ ಟ್ರ್ಯಾಕ್‌ನಲ್ಲಿಯೇ ಇರಬೇಕಾಗಿದೆ.

ಮಾಯಾಂಕ್‌ ಅಗರ್ವಾಲ್‌ ನೇತೃತ್ವದ ಪಂಜಾಬ್‌ ತಂಡ ಗೆಲುವಿನ ಉತ್ಸಾಹವನ್ನು ರಾಜಸ್ಥಾನ್‌ ವಿರುದ್ಧವೂ ಮುಂದು ವರಿಸಲು ಬಯಸಿದೆ.

ರಾಜಸ್ಥಾನ್‌ ಇದೀಗ ಅಂಕ ಪಟ್ಟಿ ಯಲ್ಲಿ ಮೂರನೇ ಸ್ಥಾನದಲ್ಲಿದೆ. ಜಾಸ್‌ ಬಟ್ಲರ್‌ ಅವರ ಸಾಹಸದಿಂದ ತಂಡ ಈ ಸಾಧನೆ ಮಾಡುವಂತಾಗಿದೆ. ಇಂಗ್ಲೆಂಡಿನ ಬಟ್ಲರ್‌ (588 ರನ್‌) ಈ ಐಪಿಎಲ್‌ನ ಗರಿಷ್ಠ ರನ್‌ ಗಳಿಸಿದ ಸಾಧಕರಾಗಿದ್ದಾರೆ. ಮುಂಬೈ ವಿರುದ್ದ ಅವರೊಬ್ಬರೇ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಆದರೆ ಕೆಕೆಆರ್‌ ವಿರುದ್ಧ ಉತ್ತಮವಾಗಿ ಆಡಲು ವಿಫ‌ಲರಾಗಿದ್ದರು. ಈ ಎರಡು ಪಂದ್ಯಗಳಲ್ಲಿ ರಾಜಸ್ಥಾನ್‌ ಸೋತಿತ್ತು.

ಅಗ್ರ ಕ್ರಮಾಂಕದಲ್ಲಿ ತಂಡದ ಇನ್ನುಳಿದ ಆಟಗಾರರಾದ ನಾಯಕ ಸಂಜು ಸ್ಯಾಮ್ಸನ್‌ ಮತ್ತು ದೇವದತ್ತ ಪಡಿಕ್ಕಲ್‌ ಇನ್ನಷ್ಟು ಹೆಚ್ಚಿನ ಜವಾಬ್ದಾರಿ ವಹಿಸಿ ಆಡಬೇಕಾದ ಅಗತ್ಯವಿದೆ. ಅವ ರಿಬ್ಬರ ಜತೆ ಹಿಟ್ಟರ್‌ ಶಿಮ್ರನ್‌ ಹೆಟ್‌ಮೈರ್‌ ಸಿಡಿದರೆ ತಂಡವು ಉತ್ತಮ ನಿರ್ವಹಣೆ ನೀಡಲು ಸಾಧ್ಯ.

ಪಂಜಾಬ್‌ ತಂಡದ ಬೌಲಿಂಗ್‌ ಬಲಷ್ಠವಾಗಿದೆ. ಕಾಗಿಸೊ ರಬಾಡ ಬೌಲಿಂಗ್‌ ದಾಳಿಯ ನೇತೃತ್ವ ವಹಿಸಿದ್ದಾರೆ. ಕಳೆದ ಎರಡು ಪಂದ್ಯ ಗಳಲ್ಲಿ ಅವರು ನಾಲ್ಕು ವಿಕೆಟ್‌ ಸಾಧನೆ ಮಾಡಿದ್ದಾರೆ. ಈ ಋತುವಿನಲ್ಲಿ ಅರ್ಷದೀಪ್‌ ಸಿಂಗ್‌ ಕೂಡ ಅಮೋಘ ದಾಳಿ ಸಂಯೋಜಿಸಿದ್ದಾರೆ. 23ರ ಹರೆಯದ ಅವರು ಹೆಚ್ಚಿನ ವಿಕೆಟ್‌ ಪಡೆಯದಿದ್ದರೂ ನಿಯಂತ್ರಿತ ದಾಳಿಯಿಂದ ಎದುರಾಳಿಗೆ ರನ್‌ವೇಗಕ್ಕೆ ಕಡಿವಾಣ ಹಾಕಿದ್ದಾರೆ.

ಟಾಪ್ ನ್ಯೂಸ್

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

1-ewqew

KKR ಸೋಲಿನ ಮೇಲೆ ಬರೆ : ಶ್ರೇಯಸ್‌ ಅಯ್ಯರ್‌ಗೆ 12 ಲಕ್ಷ ರೂ. ದಂಡ

Hockey

Hockey; ಕುಂಡ್ಯೋಳಂಡ ಟೂರ್ನಿ: ಕಣ್ಣಂಡ ತಂಡಕ್ಕೆ ಜಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.