
ISRO: ಶುಕ್ರನತ್ತ ಹೋಗಲು ಇಸ್ರೋ ಸಿದ್ಧತೆ
Team Udayavani, Sep 27, 2023, 11:30 PM IST

ನವದೆಹಲಿ: ಚಂದ್ರಯಾನ-3 ಮತ್ತು ಆದಿತ್ಯಯಾನದ ಯಶಸ್ಸಿನಲ್ಲಿರುವ ಇಸ್ರೋ, ಸದ್ಯದಲ್ಲೇ ಶುಕ್ರಯಾನ ನಡೆಸಲು ಸರ್ವ ತಯಾರಿಯನ್ನೂ ನಡೆಸಿದ್ದು, ಈಗಾಗಲೇ ಪೇಲೋಡ್‌ಗಳನ್ನೂ ಅಭಿವೃದ್ಧಿ ಪಡಿಸಿದೆ.
ಹೌದು, ಸ್ವತಃ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ. ದೆಹಲಿಯ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, “ಇಸ್ರೋ ಹಲವಾರು ಬಾಹ್ಯಾಕಾಶ ಯೋಜನೆಗಳನ್ನು ಹೊಂದಿದೆ. ಈಗಾಗಲೇ ಶುಕ್ರ ಯೋಜನೆಯನ್ನು ರೂಪಿಸಲಾಗಿದೆ’ ಎಂದಿದ್ದಾರೆ.
ಶುಕ್ರ ಒಂದು ಅತ್ಯಂತ ಆಸಕ್ತಿಕರ ಗ್ರಹವಾಗಿದೆ. ವೈಜ್ಞಾನಿಕ ದೃಷ್ಟಿಯಿಂದಲೂ ಶುಕ್ರನ ಅಧ್ಯಯನ ತುಂಬಾ ಅಗತ್ಯವಾಗಿದೆ ಶುಕ್ರನಲ್ಲಿ ಆ್ಯಸಿಡ್ ಪ್ರಮಾಣ ಹೆಚ್ಚಾಗಿದ್ದು, ಅದರ ಮೇಲ್ಮೆ„ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಹೀಗಾಗಿ ಅದರ ಅಧ್ಯಯನ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
