ಬೆಳೆ ಸಂರಕ್ಷಣೆಗೆ ಇದೇ ಸಕಾಲ

ಮಳೆಗಾಲಕ್ಕೂ ಮುನ್ನ ರೈತರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ

Team Udayavani, May 7, 2020, 6:13 AM IST

ಬೆಳೆ ಸಂರಕ್ಷಣೆಗೆ ಇದೇ ಸಕಾಲ

ಸಾಂದರ್ಭಿಕ ಚಿತ್ರ.

ಉಡುಪಿ: ತೆಂಗು, ಅಡಿಕೆ, ಗೇರುಬೀಜ ಮುಂತಾದ ಬೆಳೆ ಸಂರಕ್ಷಣೆಗೆ ಮಳೆಗಾಲಕ್ಕೂ ಮೊದಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತೋಟಗಾರಿಕಾ ಇಲಾಖೆ ಸಾಂದರ್ಭಿಕ ಸಲಹೆಗಳನ್ನು ನೀಡಿದೆ.

ಮಳೆಗಾಲ ಬಂತೆಂದರೆ ಬೆಳೆಗಳನ್ನು ರೋಗ-ಕೀಟಗಳಿಂದ ಸಂರಕ್ಷಿಸುವುದು ಸವಾಲು. ಯಾವುದೇ ನಿಯಂತ್ರಣ ಕ್ರಮ ಕೈಗೊಂಡರೂ, ಅತಿಯಾದ ಮಳೆಯ ಕಾರಣದಿಂದ ಸಮಸ್ಯೆಯಾಗುತ್ತದೆ. ರೋಗ-ಕೀಟಗಳ ಹಾವಳಿ ಪ್ರಾರಂಭವಾದರೇ ಮತ್ತೆ ಅವುಗಳನ್ನು ನಿಯಂತ್ರಿಸುವುದು ಕಷ್ಟ. ಮುಂಜಾಗ್ರತೆ ವಹಿಸುವುದೊಂದೇ ಈಗಿರುವ ದಾರಿ.

ಮಳೆಯ ಆರಂಭಕ್ಕೆ ಕೆಲವೇ
ದಿನ ಬಾಕಿ
ಮುಂಗಾರು ಮಳೆ ಆರಂಭಕ್ಕೆ ಇನ್ನು ಕೆಲ ದಿನಗಳಷ್ಟೆ ಇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅದರ ಆಧಾರದಲ್ಲಿ ನಿಯಂತ್ರಣ ಕೈಗೊಳ್ಳಲು ಅವಕಾಶವಿದೆ. ಈ ಸಮ ಯದಲ್ಲಿ ಕೆಲವೊಂದು ರೋಗ, ಕೀಟದಿಂದಾಗಿ ಹಾನಿ ಲಕ್ಷಣಗಳು ಕಾಣಲು ಪ್ರಾರಂಭವಾಗುತ್ತವೆ.

ರೋಗ ನಿಯಂತ್ರಣಕ್ಕೆ ಕ್ರಮಗಳು
ತೆಂಗು, ಅಡಿಕೆ ಕೊಳೆರೋಗ ಮತ್ತು ಕೊಕ್ಕೋ ಕಾಯಿ ಕೊಳೆ ರೋಗ ನಿಯಂತ್ರ ಣಕ್ಕೆ ಮುಂಜಾಗ್ರತೆಯಾಗಿ ಶೇ.1ರ ಬೋಡೋ ದ್ರಾವಣ (100 ಲೀ.ನೀರಿಗೆ 1 ಕೆ.ಜಿ. ಮೈಲುತುತ್ತು ಮತ್ತು 1 ಕೆ.ಜಿ. ಸುಣ್ಣ ಸೇರಿಸಿದ ದ್ರಾವಣ) ಅಡಕೆ ಗೊನೆಗೆ ಸಿಂಪ ಡಿಸಬೇಕು. ಜಾಸ್ತಿ ಕೊಳೆ ರೋಗ ಕಂಡು ಬರುವ ಪ್ರದೇಶದಲ್ಲಿ ಔಷಧ ಸಿಂಪಡಣೆಯ ಅನಂತರ ಗೊನೆಗಳನ್ನು ಪ್ಲಾಸ್ಟಿಕ್‌ ಹಾಳೆ (200 ಗೇಜ್‌)ಯಿಂದ ಮುಚ್ಚಿ ನೀರು ಬೀಳದಂತೆ, ಗಾಳಿಯಾಡುವಂತೆ ಕಟ್ಟುವುದು ಉತ್ತಮ.

ರೋಗ ನಿಯಂತ್ರಣ ಅಗತ್ಯ
ಕಾಳುಮೆಣಸಿನ ಬಳ್ಳಿಯ ಸೊರಗು ರೋಗ ನಿಯಂತ್ರಣಕ್ಕೆ ಬುಡದ ಸುತ್ತಲೂ ಅರ್ಧ ಕೆ.ಜಿ. ಬೇವಿನ ಹಿಂಡಿಯನ್ನು ಟ್ರೈಕೋಡರ್ಮಾವನ್ನು ಕೊಟ್ಟಿಗೆ ಗೊಬ್ಬರದ ಜತೆ ಸೇರಿಸಿ ಹಾಕಬೇಕು. ಕಾಳುಮೆಣಸಿನ ಬಳ್ಳಿಯ ನೆಲದ ಮೇಲೆ ಹಬ್ಬಿರುವ ಭಾಗ ಕತ್ತರಿಸಿ ತೆಗೆಯಬೇಕು. ಶೇ.0.03ರ ಕಾಪರ್‌ ಆಕ್ಸಿಕ್ಲೋರೈಡ್‌ ದ್ರಾವಣವನ್ನು ಬಳ್ಳಿಯ ಬುಡಕ್ಕೆ ಕಾಂಡದ ವರೆಗೆ ಸುರಿಯಬೇಕು ಮತ್ತು ಶೇ.1ರ ಬೋರ್ಡೊ ದ್ರಾವಣವನ್ನು ಪೂರ್ತಿ ಬಳ್ಳಿಗೆ ಸಿಂಪಡಿಸಬೇಕು.

ಕೃಷಿ ಸಾಮಗ್ರಿ ಖರೀದಿಗೆ
ಆಧಾರ್‌ ಕಾರ್ಡ್‌ ಬಳಕೆ
ಮಳೆಗಾಲದಲ್ಲಿ ಬೆಳೆಯಬಹುದಾದ ತೋಟಗಾರಿಕೆ ಬೆಳೆಗಳಿಗೆ ಬಳಸುವ ಕೀಟ ನಾಶಕ ಮೈಲುತುತ್ತು. ಬೋರ್ಡೊ ದ್ರಾವಣ ಅಂಗಡಿಗಳಲ್ಲಿ ದೊರಕುತ್ತವೆ. ಲೈಸೆನ್ಸ್‌ ಪಡೆದ ಅಂಗಡಿ ಗಳಿಂದ ಕೊಂಡುಕೊಳ್ಳುವುದು ರೈತರಿಗೆ ಸೂಕ್ತ ಆಯ್ಕೆ. ಗುಣಮಟ್ಟದ ವಸ್ತುಗಳು ದೊರಕುತ್ತವೆ. ಲಾಕ್‌ಡೌನ್‌ ಇರುವುದರಿಂದ ಕೀಟನಾಶಕ, ಕಚ್ಚಾ ವಸ್ತು ಪಡೆಯಲು ಬಯೊಮೆಟ್ರಿಕ್‌ ಸಿಸ್ಟಮ್‌ ಬದಲಿ ಆಧಾರ್‌ ಕಾರ್ಡ್‌, ಗುರುತಿನ ಚೀಟಿ ತೋರಿಸಿ ಪಡೆದುಕೊಳ್ಳಬಹುದು.

ಕೃಷಿ ಚಟುವಟಿಕೆಗೆ ಸ್ಕೀಮ್‌ ಬಳಕೆ
ಮಳೆಗಾಲದ ಆರಂಭದ ಈ ಸಂದರ್ಭದಲ್ಲಿ ಲಾಕ್‌ಡೌನ್‌ ಇರುವುದರಿಂದ ಸರಕಾರ ತೋಟಗಾರಿಕೆಗೆ ಪೂರಕವಾಗಿ ವಿಶೇಷ ಯೋಜನೆಗಳನ್ನು ಘೋಷಿಸಿಲ್ಲ. ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಸಂದರ್ಭ ಅಗತ್ಯವಿದ್ದಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕರನ್ನು ಬಳಸಿಕೊಳ್ಳಲು ಅವಕಾಶವಿದೆ. ತೆಂಗು, ಅಡಿಕೆ ಕೃಷಿ ಜತೆ ಉಡುಪಿ ಮಲ್ಲಿಗೆ, ವಾಣಿಜ್ಯ ಗೇರು ಕೃಷಿಗೂ ಯೋಜನೆಯಲ್ಲಿ ಕಾರ್ಮಿಕರನ್ನು ಬಳಸಿಕೊಳ್ಳಬಹುದಾಗಿದೆ.

ಗ್ರೀನ್‌ ಕಾರ್ಡ್‌ ಹೊಂದಿರಬೇಕಿಲ್ಲ
ಮಳೆಗಾಲದ ಪೂರ್ವಭಾವಿಯಾಗಿ ಕೃಷಿಯಲ್ಲಿ ತೊಡಗುವ ರೈತರು ಕಚ್ಚಾ ಸಾಮಗ್ರಿ ಹಾಗೂ ಬೆಳೆಗಳಿಗೆ ಸ‌ಂಬಂಧಿಸಿ ಯಂತ್ರೋಪಕರಣ ಖರೀದಿ ಇನ್ನಿತರ ಚಟುವಟಿಕೆ, ಸಾಗಾಟ ಮಾಡಲು ಗ್ರೀನ್‌ ಕಾರ್ಡ್‌ ಹೊಂದಿರಬೇಕಾದ ಆವಶ್ಯಕತೆಯಿಲ್ಲ. ಕೃಷಿಕ ರಿಗೆ ಸಂಬಂಧಿಸಿ ದಾಖಲೆ ಪತ್ರಗಳಿದ್ದಲ್ಲಿ ಸಾಕಾಗುತ್ತದೆ.

ಇವುಗಳನ್ನು ಪಾಲಿಸುವುದು ಅವಶ್ಯ
-ಕೃಷಿಕರು ಕೃಷಿ ಚಟುವಟಿಕೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
-ಮಾಸ್ಕ್ ಧರಿಸಿರಬೇಕು.
-ಸ್ಯಾನಿಟೈಸರ್‌, ಸಾಬೂನುಗಳಿಂದ ಆಗಾಗ ಕೈ ತೊಳೆಯುತ್ತಿರಬೇಕು.
-ಸುರಕ್ಷತೆಗೆ ಸಾಧನಗಳನ್ನು ಅಳವಡಿಸಿಕೊಳ್ಳಬೇಕು.
– ಕೈಗವಸು ಬಳಸಬೇಕು.

ಮಾಹಿತಿಗೆ
ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ ಉಡುಪಿ) : 0820-2531950
ಮಾಹಿತಿ ಮತ್ತು ಸಲಹಾ ಕೇಂದ್ರ ಉಡುಪಿ: 0820-2520590
ಹಿ.ಸ. ತೋಟಗಾರಿಕೆ ನಿರ್ದೇಶಕರು ಉಡುಪಿ ತಾ| : 0820-2522837
ಹಿ.ಸ.ತೋಟಗಾರಿಕೆ ನಿರ್ದೇಶಕರು-ಕುಂದಾಪುರ : 08254-230813
ಹಿ.ಸ. ತೋಟಗಾರಿಕೆ ನಿರ್ದೇಶಕರು-ಕಾರ್ಕಳ : 08258-230288

ಮಳೆಗಾಲದಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತರು ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಇದರಿಂದ ರೋಗ ಬಾಧೆಯನ್ನು ತಡೆದು ಬೆಳೆಗಳನ್ನು ಸಂರಕ್ಷಿಸಿಕೊಳ್ಳಬಹುದು. ಸಂಶಯಗಳಿದ್ದಲ್ಲಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡಕೊಳ್ಳಬಹುದು.
– ಭುವನೇಶ್ವರಿ, ಉಪನಿರ್ದೇಶಕಿ
ತೋಟಗಾರಿಕೆ ಇಲಾಖೆ, ಉಡುಪಿ

ಪ್ರತಿ ಗುರುವಾರ ರೈತಸೇತು
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಮ್ಮ ಬೆಳೆಗಳನ್ನು ಮಾರಲಾಗದೆ ಸಂಕಷ್ಟದಲ್ಲಿರುವ ರೈತರಿಗೆ ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಉದಯವಾಣಿಯು ಆರಂಭಿಸಿದ ರೈತಸೇತುಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವಾರು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಇದನ್ನು ಮುಂದೆ ವಾರಕ್ಕೊಮ್ಮೆಯಾದರೂ ಪ್ರಕಟಿಸುವಂತೆ ರೈತರು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ಗುರುವಾರ ರೈತಸೇತು ಪ್ರಕಟವಾಗಲಿದೆ. ಅಡಿಕೆ, ಕಾಳುಮೆಣಸು ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳನ್ನು ಹೊರತುಪಡಿಸಿದ ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಪ್‌ಗೆ ಕಳುಹಿಸಬೇಕು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ.

ವಾಟ್ಸಪ್‌ ಸಂಖ್ಯೆ: 76187 74529

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.