ತಾಪಮಾನ ಹೆಚ್ಚಳ: ದಕ್ಷಿಣ ಅಂಟಾರ್ಟಿಕಾದಲ್ಲಿ ಸಾಕ್ಷಿ!
Team Udayavani, May 2, 2022, 7:35 AM IST
ನವದೆಹಲಿ: ಜಾಗತಿಕ ತಾಪಮಾನದಿಂದಾಗಿ ಭೂಮಿಯ ತುತ್ತತುದಿಗಳಲ್ಲೊಂದಾದ ದಕ್ಷಿಣ ಅಂಟಾರ್ಟಿಕಾದಲ್ಲಿ ಗಂಟೆಗಟ್ಟಲೆ ಮಳೆ ಸುರಿಯಲಾರಂಭಿಸಿದೆ.
ಹೀಗೆಂದು ನವದೆಹಲಿಯ ಸಂಶೋಧಕ ರೋಜಿಟಾ ಸಿಂಗ್ ಹೇಳಿದ್ದಾರೆ. ಅವರು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಯೋಜನೆಗಳ (ಯುಎನ್ಡಿಪಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆ್ಯಕ್ಸೆಲೆರೇಟರ್ ಲ್ಯಾಬ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅಂಟಾರ್ಟಿಕಾದಲ್ಲಿ ಆಗಾಗ ಮಳೆ ಸುರಿಯುವುದು ಸಾಮಾನ್ಯವಾದರೂ ಅದು ಮಂಜಿನ ರೂಪದಲ್ಲಿ ಸುರಿಯುತ್ತದೆ. ಆದರೆ, ಇತ್ತೀಚೆಗೆ ಸಂಶೋಧಕರ ತಂಡದೊಂದಿಗೆ ಅಲ್ಲಿಗೆ ಭೇಟಿ ನೀಡಿದ್ದಾಗ ಅಲ್ಲಿ ನೀರಿನ ಹನಿಗಳ ಮಳೆ ಸುರಿದಿದೆ. ಇದಕ್ಕೆ, ಭೂಮಿಯ ತಾಪಮಾನ ಹೆಚ್ಚಾಗುತ್ತಿರುವುದೇ ಕಾರಣ.
ತಾಪಮಾನ ಹೆಚ್ಚಾಗಿರುವುದರಿಂದ ಮಳೆ ಹನಿಗಳು ಘನೀಕೃತಗೊಂಡು ಮಂಜಿನ ರೂಪದಲ್ಲಿ ಬೀಳದೇ ನೀರಿನ ರೂಪದಲ್ಲೇ ಅಂಟಾರ್ಟಿಕಾದಲ್ಲಿ ಧರೆಗಿಳಿಯುತ್ತದೆ ಎಂದರೆ ಅದು ನಿಜಕ್ಕೂ ಆತಂಕಕಾರಿ ವಿಚಾರ ಎಂದು ಸಿಂಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ