ಜೆಇಇ-ಮೇನ್ಸ್: 20 ಅಭ್ಯರ್ಥಿಗಳಿಗೆ 100ಕ್ಕೆ 100 ಅಂಕ
Team Udayavani, Feb 7, 2023, 10:25 PM IST
ನವದೆಹಲಿ: ಜೆಇಇ-ಮೇನ್ಸ್ ಜನವರಿ ಆವೃತ್ತಿಯ ಪರೀಕ್ಷೆಯ ಫಲಿತಾಂಶವು ಮಂಗಳವಾರ ಪ್ರಕಟವಾಗಿದ್ದು, 20 ಅಭ್ಯರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ. ವಿಶೇಷವಾಗಿ ಈ ಬಾರಿ 100ಕ್ಕೆ 100 ಅಂಕ ಪಡೆದವರೆಲ್ಲರೂ ಪುರುಷ ಅಭ್ಯರ್ಥಿಗಳಾಗಿದ್ದಾರೆ.
100 ಅಂಕ ಗಳಿಸಿರುವವರ ಪೈಕಿ 14 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದ್ದು, 4 ಮಂದಿ ಒಬಿಸಿ ಹಾಗೂ ತಲಾ ಒಬ್ಬರು ಜನರಲ್-ಇಡಬ್ಲ್ಯುಎಸ್ ಮತ್ತು ಪರಿಶಿಷ್ಟ ಜಾತಿಯ ಕೋಟಾಗೆ ಸೇರಿದವರಾಗಿದ್ದಾರೆ.
ದಿವ್ಯಾಂಗರ ಕೋಟಾದಲ್ಲಿ ಮೊಹಮ್ಮದ್ ಸಾಹೀಲ್ ಅಖ್ತರ್(99.98) ಮೊದಲ ಸ್ಥಾನ ಪಡೆದಿದ್ದಾರೆ. ಎಸ್‌ಸಿ ಕೋಟಾದಲ್ಲಿ ದೇಶಾಂಕ್ ಪ್ರತಾಪ್ ಸಿಂಗ್(100) ಮತ್ತು ಎಸ್‌ಟಿ ಕೋಟಾದಲ್ಲಿ ಧೀರಾವತ್ ತನುಜ್(99.99) ಪ್ರಥಮ ಸ್ಥಾನ ಗಳಿಸಿದ್ದಾರೆ.
ಜನವರಿ ಆವೃತ್ತಿಯಲ್ಲಿ 8.23 ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆ ಬರೆದಿದ್ದರು. 2ನೇ ಆವೃತ್ತಿಯ ಪರೀಕ್ಷೆ ಏಪ್ರಿಲ್‌ನಲ್ಲಿ ನಡೆಯಲಿದೆ. ಬಳಿಕ ಅಭ್ಯರ್ಥಿಗಳ ರ್‍ಯಾಂಕ್ ಪಟ್ಟಿ ಬಿಡುಗಡೆಯಾಗಲಿದೆ. ಜೆಇಇ-ಮೇನ್ಸ್ ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಗರಿಷ್ಠ ಅಂಕ ಗಳಿಸಿದ ಅಗ್ರ 2.6 ಲಕ್ಷ ಮಂದಿ ಜೆಇಇ-ಮೇನ್ಸ್ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…
ಗೋವಾ ಸಮುದ್ರ ತೀರದಲ್ಲಿ ಮದುವೆಯಾಗುವ ಕನಸು ಕಾಣುತ್ತಿದ್ದವರಿಗೆ ಇನ್ನು ಹೆಚ್ಚು ಖರ್ಚು
ಏರ್ ಇಂಡಿಯಾ ಮತ್ತು ನೇಪಾಳ ಏರ್‌ಲೈನ್ಸ್ ವಿಮಾನಗಳು ಢಿಕ್ಕಿ ಹೊಡೆಯುತ್ತಿವು!!
ಕೊಚ್ಚಿನ್ ನಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ
‘ಅನರ್ಹ ಸಂಸದ’ ಎಂದು ಟ್ವಿಟರ್ ನಲ್ಲಿ ಹಾಕಿಕೊಂಡ ರಾಹುಲ್ ಗಾಂಧಿ