Boxing: ಜೂ. ವಿಶ್ವ ಬಾಕ್ಸಿಂಗ್ ಭಾರತಕ್ಕೆ 3 ಚಿನ್ನ
Team Udayavani, Dec 5, 2023, 11:41 PM IST
ಹೊಸದಿಲ್ಲಿ: ಯುವ ಬಾಕ್ಸರ್ಗಳಾದ ಪಾಯಲ್, ನಿಶಾ ಮತ್ತು ಅಕಾಂಕ್ಷಾ ಅವರು ಅರ್ಮೇನಿಯಾದ ಯೆರೆವಾನ್ನಲ್ಲಿ ನಡೆಯುತ್ತಿರುವ ಐಬಿಎ ಜೂನಿಯರ್ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಉತ್ತಮ ನಿರ್ವಹಣೆ ನೀಡಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಒಟ್ಟಾರೆ 17 ಪದಕಗಳೊಂದಿಗೆ ಭಾರತ ಅಮೋಘ ನಿರ್ವಹಣೆಯೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ.
ಈ ಚಾಂಪಿಯನ್ಶಿಪ್ನಲ್ಲಿ ಭಾರತೀಯ ತಂಡ ಮೂರು ಚಿನ್ನ ವಲ್ಲದೇ 9 ಬೆಳ್ಳಿ ಮತ್ತು ಐದು ಕಂಚಿನ ಪದಕ ಜಯಿಸಿದೆ.
ಬಾಲಕಿಯರ 49 ಕೆ.ಜಿ. ವಿಭಾಗದಲ್ಲಿ ಸ್ಥಳೀಯ ಫೇವರಿಟ್ ಪೆಟ್ರೊಸಿಯಾನ್ ಹೆಗೈನ್ ಅವರನ್ನು ಸುಲಭವಾಗಿ ಮಣಿಸಿದ ಪಾಯಲ್ ಭಾರತಕ್ಕೆ ಮೊದಲ ಚಿನ್ನ ದೊರಕಿಸಿಕೊಟ್ಟರು. ಆಬಳಿಕ ಏಷ್ಯನ್ ಯೂತ್ ಚಾಂಪಿಯನ್ ನಿಶಾ ಮತ್ತು ಅಕಾಂಕ್ಷಾ ನಿರೀಕ್ಷೆಯಂತೆ ಅಮೋಘ ನಿರ್ವಹಣೆ ನೀಡಿ ಚಿನ್ನ ಗೆದ್ದು ಸಂಭ್ರಮಿಸಿದರು.