
ಕೆ.ಸತ್ಯನಾರಾಯಣ ರಾಜು ಕೆನರಾ ಬ್ಯಾಂಕ್‌ನ ನೂತನ ಎಂಡಿ, ಸಿಇಒ
Team Udayavani, Feb 8, 2023, 6:30 AM IST

ಬೆಂಗಳೂರು: ಕೆನರಾ ಬ್ಯಾಂಕ್‌ನ ನೂತನ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಕೆ.ಸತ್ಯ ನಾರಾಯಣ ರಾಜು ಅವರನ್ನು ನೇಮಿಸಲಾಗಿದೆ.
2022 ಡಿ.31ಕ್ಕೆ ಎಲ್.ವಿ. ಪ್ರಭಾಕರ್ ಅವರಿಂದ ತೆರವಾದ ಕಾರ್ಯ ನಿರ್ವಹಣಾ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಫೆ.7ರಂದು ಭಾರತ ಸರ್ಕಾರವು ಕೆ.ಸತ್ಯ ನಾರಾಯಣ ರಾಜು ಅವರನ್ನು ನಿಯೋಜಿಸಿದೆ.
2021 ಮಾ.10ರ ವರೆಗೆ ಕೆ.ಸತ್ಯನಾರಾಯಣ ರಾಜು ಅವರು ಕೆನರಾ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪರಿಣತಿ: ರಾಜು ಅವರು ಭೌತಶಾಸ್ತ್ರ ಪದವೀಧರರಾಗಿದ್ದು, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬ್ಯಾಂಕಿಂಗ್ ಮತ್ತು ಹಣಕಾಸು) ಮತ್ತು ಸಿಎಐಐಬಿ ಯ ಸ್ನಾತಕೋತ್ತರ ಪದವೀಧರರಾಗಿದ್ದಾರೆ. 1988 ರಲ್ಲಿ ವಿಜಯಾ ಬ್ಯಾಂಕ್‌ನಲ್ಲಿ ಕೆಲಸ ಆರಂಭಿಸಿದ ಇವರು, ಬ್ಯಾಂಕ್ ಆಫ್ ಬರೋಡಾದಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಸೇರಿದಂತೆ 33 ವರ್ಷಗಳ ಸುದೀರ್ಘ ಬ್ಯಾಂಕಿಂಗ್ ವೃತ್ತಿಜೀವನದಲ್ಲಿ ವಿವಿಧ ಹುದ್ದೆ ನಿಭಾಯಿಸಿದ್ದರು. ಕಾರ್ಪೊರೇಟ್ ಬ್ಯಾಂಕಿಂಗ್ ಶಾಖೆ ಸೇರಿದಂತೆ 12 ವರ್ಷಗಳ ಕಾಲ ವಿವಿಧ ಶಾಖೆಗಳಿಗೆ ಮುಖ್ಯಸ್ಥರಾಗಿದ್ದರು ಎಂದು ಕೆನರಾ ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
