ಪಿಎಸ್‌ಐ ಕೇಸ್: ಸಿಐಡಿ ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಕೆ
Team Udayavani, Feb 3, 2023, 9:51 PM IST
ಬೆಂಗಳೂರು: ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಐಡಿ ಪೊಲೀಸರು 8 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಪ್ರಕರಣದ ಮೊದಲ ಆರೋಪಿ ಕುಶಾಲ್ ಕುಮಾರ್, ಮಧ್ಯವರ್ತಿ ದರ್ಶನ್ ಗೌಡ, ಮೈಸೂರಿನ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ (ಆರ್‌ಪಿಐ) ಮಧು, ನೇಮಕಾತಿ ವಿಭಾಗದ ಸಿಬಂದಿ ಹರ್ಷ, ಶ್ರೀಧರ್, ಶ್ರೀನಿವಾಸ್, ಡಿವೈಎಸ್‌ಪಿ ಶಾಂತಕುಮಾರ್ ಹಾಗೂ 8ನೇ ಆರೋಪಿಯಾಗಿ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ವಿರುದ್ಧ ಒಟ್ಟು 1,300ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಮಾಗಡಿ ಮೂಲದ ಆರೋಪಿ ಕುಶಾಲ್ ಕುಮಾರ್‌ಗೆ ಮಧ್ಯವರ್ತಿ ದರ್ಶನ್ ಗೌಡ ಹಾಗೂ ಆರ್‌ಪಿಐ ಮಧು ಸಂಪರ್ಕಕ್ಕೆ ಸಿಕ್ಕಿ ಪಿಎಸ್‌ಐ ಆಗಬೇಕಾದರೆ 40 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಪರೀಕ್ಷೆ ಮುನ್ನವೇ 20 ಲಕ್ಷ ರೂ. ಅನ್ನು ಕೆಂಗೇರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಕುಶಾಲ್ ಮಧ್ಯವರ್ತಿಗಳಿಗೆ ಕೊಟ್ಟಿದ್ದ. ಬಳಿಕ ಹಲಸೂರಿನ ಸೈಂಟ್ ಜಾನ್ಸ್ ಗಲ್ಸ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ. ಉತ್ತರಪತ್ರಿಕೆಯಲ್ಲಿ ಕೇವಲ 11 ಪ್ರಶ್ನೆಗಳಿಗೆ ಮಾತ್ರ ಕುಶಾಲ್ ಕುಮಾರ್ ಉತ್ತರ ಬರೆದಿದ್ದರೂ, 99 ಅಂಕ ಗಳಿಸಿದ್ದ. ಪರೀಕ್ಷೆಯಲ್ಲಿ ಬರೆದಿದ್ದ ಡಾಟ್ ಪೆನ್, ಒಎಂಆರ್ ಶೀಟ್ ನಕಲು ಪ್ರತಿ ಹಾಗೂ ಕಾರ್ಬನ್ ಕಾಪಿಯನ್ನು ಪೊಲೀಸ್ ನೇಮಕಾತಿ ವಿಭಾಗದ ಶ್ರೀನಿವಾಸ್‌ಗೆ ಕೊಟ್ಟಿದ್ದ. ಶ್ರೀಧರ್, ಶ್ರೀನಿವಾಸ್ ಉತ್ತರಪತ್ರಿಕೆ ಇಡಲಾಗಿದ್ದ ಸ್ಟ್ರಾಂಗ್ ರೂಮ್‌ಗೆ ಪ್ರವೇಶಿಸಿ, ಕುಶಾಲ್ ಬಳಸಿದ್ದ ಡಾಟ್ ಪೆನ್ ಹಾಗೂ ಒಎಂಆರ್ ಶೀಟ್, ಕಾರ್ಬನ್ ಮೂಲಕ ಉತ್ತರ ಬರೆದಿದ್ದರು ಎಂಬ ಅಂಶವನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ
ಕೆಕೆಆರ್ ಟಿಸಿ ಗೆ 802 ಬಸ್ ಸೇರ್ಪಡೆ: 28ರಂದು ಸೇಡಂದಲ್ಲಿ ಲೋಕಾರ್ಪಣೆ
ಕುತೂಹಲ ಮೂಡಿಸಿದ ಭೇಟಿ: ಸಿಎಂ ಬೊಮ್ಮಾಯಿ ಜತೆ ಒಂದು ಗಂಟೆ ಚರ್ಚಿಸಿದ ಸಾಹುಕಾರ್
ಬಿಸಿಲ ಬೇಗೆಗೆ ರಾಜ್ಯದ ಜನ ತತ್ತರ! ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ…
ಕೋವಿಡ್ ಮಹಾಮಾರಿ ಮತ್ತೆ ಸದ್ದು; ರಾಜ್ಯದಲ್ಲಿ 155 ಹೊಸ ಪ್ರಕರಣ ಪತ್ತೆ
MUST WATCH
ಹೊಸ ಸೇರ್ಪಡೆ
ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ
ಮಾಸ್ ಲುಕ್ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್ ರಾಜ್
ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ
ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ
ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್