ಕಾಸರಗೋಡು: ಇಬ್ಬರಿಗೆ ಸೋಂಕು ದೃಢ
Team Udayavani, Jun 27, 2020, 5:40 AM IST
ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರಿಗೆ ಕೋವಿಡ್ ಪಾಸಿಟಿವ್ ಮತ್ತು ಒಬ್ಬರಿಗೆ ನೆಗೆಟಿವ್ ಬಂದಿದೆ.
ಸೋಂಕು ಖಚಿತಗೊಂಡವರು ವಿದೇಶದಿಂದ ಬಂದವರು ಎಂದು ಜಿಲ್ಲಾ ವೈದ್ಯಾ ಧಿಕಾರಿ ಡಾ| ಎ.ವಿ.ರಾಮದಾಸ್ ತಿಳಿಸಿದರು.
150 ಮಂದಿಗೆ ಸೋಂಕು ರಾಜ್ಯದಲ್ಲಿ ಶುಕ್ರವಾರ 150 ಮಂದಿಗೆ ಕೋವಿಡ್ ವೈರಸ್ ಸೋಂಕು ದೃಢೀಕರಿಸಲಾಗಿದೆ.
ರೋಗ ಬಾಧಿತರಲ್ಲಿ 91 ಮಂದಿ ವಿದೇಶದಿಂದ ಹಾಗೂ 48 ಮಂದಿ ಇತರ ರಾಜ್ಯಗಳಿಂದ ಬಂದವರು. 10 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಇದೇ ಸಂದರ್ಭ 65 ಮಂದಿ ಗುಣಮುಖರಾಗಿದ್ದಾರೆ.