ನನೆಗುದಿಗೆ ಬಿದ್ದಿರುವ ಕೆಂಪೇಗೌಡ ಅಧ್ಯಯನ ಕೇಂದ್ರ : ಶಂಕುಸ್ಥಾಪನೆಗೆ ಮಾತ್ರ ಸೀಮಿತವಾದ ಯೋಜನೆ

2016ರಲ್ಲಿ ಘೋಷಿಸಿದ ಯೋಜನೆ 6 ವರ್ಷವಾದ್ರೂ ಇನ್ನೂ ಆರಂಭವಾಗಿಲ್ಲ

Team Udayavani, Dec 9, 2021, 12:58 PM IST

ನನೆಗುದಿಗೆ ಬಿದ್ದಿರುವ ಕೆಂಪೇಗೌಡ ಅಧ್ಯಯನ ಕೇಂದ್ರ : ಶಂಕುಸ್ಥಾಪನೆಗೆ ಮಾತ್ರ ಸೀಮಿತವಾದ ಯೋಜನೆ

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಇತಿಹಾಸ, ಆಡಳಿತ, ಸಾಧನೆ ಅವರು ನೀಡಿದ ಕೊಡುಗೆಗಳನ್ನು ನಾಡಿನ ಜನರಿಗೆ ತಿಳಿಸಿಕೊಡುವ ಉದ್ದೇಶದಿಂದ ನಿರ್ಮಿಸಲು ಉದ್ದೇಶಿಸಿರುವ ಕೆಂಪೇಗೌಡ ಅಧ್ಯಯನ ಕೇಂದ್ರವು ಶಂಕುಸ್ಥಾಪನೆಗಷ್ಟೇ ಸೀಮಿತವಾದಂತಾಗಿದ್ದು, ಯೋಜನೆ ನನೆಗುದಿಗೆ ಬಿದ್ದಿದೆ. ಜ್ಞಾನಭಾರತಿ ಆವರಣದಲ್ಲಿ ಮೂರು ಎಕರೆ ಪ್ರದೇಶ ದಲ್ಲಿ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಅಧ್ಯಯನ ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿತ್ತು.

2016ರಲ್ಲಿ ಯೋಜನೆ ಘೋಷಿಸಿದ್ದು, ಇಲ್ಲಿಯವರೆಗೂ ಯಾವುದೊಂದು ಅಭಿವೃದ್ಧಿ ಕಾರ್ಯಗಳು ಕೂಡ ನಡೆದಿಲ್ಲ. ಜ್ಞಾನಭಾರತಿ ಆವರಣದಲ್ಲಿ 3 ಎಕರೆ ಜಾಗ ಕೂಡ ನಿಗದಿ ಮಾಡಲಾಗಿದೆ. ಹೀಗಿದ್ದರೂ ಸರ್ಕಾರ ಅನಗತ್ಯವಾಗಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಅಧ್ಯಯನ ಕೇಂದ್ರ ಶಂಕುಸ್ಥಾಪನೆ ವೇಳೆ ಜ್ಞಾನಭಾರತಿ ಆವರಣದಲ್ಲಿ ಆರಂಭವಾದ ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಯೋಜನೆ ಪೂರ್ಣಗೊಂಡಿದೆ. ಆದರೆ, ಕೆಂಪೇಗೌಡ ಅಧ್ಯಯನ ಕೇಂದ್ರ ಮಾತ್ರ ಇನ್ನೂ ಆರಂಭವಾಗಿಲ್ಲ. ಈ ಕುರಿತು ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯಿ
ಸಿದರೂ ಕೆಲಸಗಳು ಮಾತ್ರ ಆರಂಭಗೊಂಡಿಲ್ಲ. ಬಿಬಿಎಂಪಿ ಆಯುಕ್ತರಿಗೆ ಸಾಕಷ್ಟು ಬಾರಿ ಗಮನಕ್ಕೆ ತಂದಿದ್ದರೂ ಟೆಂಡರ್‌ ಕಾರ್ಯ ಪೂರ್ಣಗೊಳಿಸಿ ಅಧ್ಯಯನ ಕೇಂದ್ರ ನಿರ್ಮಿಸುವ ಯಾವುದೇ ಮನಸ್ಸು ಮಾಡಿಲ್ಲ ಎಂದು ಕೆಂಪೇಗೌಡ ಅಭಿವೃದ್ಧಿ ಕೇಂದ್ರದ ಸಮಿತಿ ಸದಸ್ಯ ಮಾಗಡಿ ರಂಗಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ.

16ನೇ ಶತಮಾನದ ಕೆಂಪೇಗೌಡರ ಸಾಮ್ರಾಜ್ಯ:
ಅಧ್ಯಯನ ಕೇಂದ್ರದ ಆಕರ್ಷಣೆಯಾಗಿ ಕೆಂಪೇಗೌಡರ ಕಾಲದ ಶಾಸನಗಳು, ಶಿಲ್ಪಕಲೆ, ಗೋಪುರಗಳು, ದೇವಸ್ಥಾನ, ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ 16ನೇ ಶತಮಾನದ ನಗರವನ್ನು ಮರುಸೃಷ್ಟಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಸುಮಾರು 15 ಕೋಟಿ ವೆಚ್ಚದಲ್ಲಿ ಹಳೆ ಬೆಂಗಳೂರಿನ ಮರು ಸೃಷ್ಟಿ ಮಾಡುವ ಯೋಜನೆ ನಿರ್ಮಿಸಲಾಗಿದೆ. ಕೆಂಪೇಗೌಡರ ಕಾಲದಲ್ಲಿ ನಗರದಲ್ಲಿ ನಿರ್ಮಿಸಲಾಗಿದ್ದ ಅರಳೇಪೇಟೆ, ಬಳೇಪೇಟೆ, ಕುಂಬಾರಪೇಟೆ, ಗಾಣಿಗರಪೇಟೆ, ಕಬ್ಬನ್‌ ಪೇಟೆ, ತಿಗಳರ ಪೇಟೆ ಸೇರಿದಂತೆ 22 ಪೇಟೆಗಳ ಮಾದರಿಗಳು ಈ ಬಯಲು ವಸ್ತುಸಂಗ್ರಹಾಲಯದಲ್ಲಿ ನಿರ್ಮಿಸುವ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ : ನೈಟ್ ಕರ್ಫ್ಯೂ ಬಗ್ಗೆ ಸದ್ಯದಲ್ಲೇ ನಿರ್ಧಾರ: ಸಿಎಂ ಬೊಮ್ಮಾಯಿ

ಕೆಂಪೇಗೌಡರು ಆಳ್ವಿಕ ನಡೆಸಿದ ಬೆಂಗಳೂರು, ತುಮಕೂರು, ಕೋಲಾರ, ಮಾಗಡಿ, ನೆಲಮಂಗಲ, ಕನಕಪುರ ಹಲವು ಪ್ರದೇಶಗಳ ಮಾದರಿ ನಿರ್ಮಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಆಲೋಚನೆ ಕೂಡ ಇದೆ.

ಸಂಶೋಧನಾ ವಿದ್ಯಾರ್ಥಿಗಳಿಗೆ ಕೆಂಪೇಗೌಡರ ಇತಿಹಾಸ, ಆಡಳಿತ ಮತ್ತು ಕೊಡುಗೆಗಳ ಸಂಪೂರ್ಣ ಮಾಹಿತಿ ಸಿಗಬೇಕು ಎಂಬುದು ಅಧ್ಯಯನ ಕೇಂದ್ರದ ಉದ್ದೇಶಗಳಲ್ಲಿ ಒಂದಾಗಿದೆ. ಆದರೆ, ಟೆಂಡರ್‌ ಪ್ರಕ್ರಿಯೆ ನಿಂತಲ್ಲೇ ನಿಂತಿರುವುದರಿಂದ ಯೋಜನೆ ಜಾರಿಯಾಗದಂತಾಗಿದೆ.

2016ರಲ್ಲಿ ಶಂಕು ಸ್ಥಾಪನೆ
ಜ್ಞಾನಭಾರತಿ ಆವರಣದಲ್ಲಿ ಮೂರು ಎಕರೆ ಪ್ರದೇಶದಲ್ಲಿ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಅಧ್ಯಯನ ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅದರಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ 2016ರಲ್ಲಿ ಯೋಜನೆಯನ್ನು ಘೋಷಿಸಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದ ನಂತರ ಮತ್ತೂಮ್ಮೆ 2018ರಲ್ಲಿ ಅಧ್ಯಯನ ಕೇಂದ್ರದ ಉಪಾಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಶಂಕುಸ್ಥಾಪನೆ ನೆರವೇರಿಸಿ ಟೆಂಡರ್‌ ಕರೆಯಲಾಗಿತ್ತು. ತಾಂತ್ರಿಕ ಕಾರಣಗಳಿಂದ ಟೆಂಡರ್‌ ರದ್ದುಗೊಂಡಿದೆ. ಪರಿಣಾಮ, ಸಂಶೋಧನಾ ಕೇಂದ್ರ ನಿರ್ಮಿಸುವ ಸರ್ಕಾರದ ಯೋಜನೆ ಕೂಡ ಅಲ್ಲಿಗೇ ಸ್ಥಗಿತಗೊಂಡಿದೆ.

ಟಾಪ್ ನ್ಯೂಸ್

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಉಮ್ಮತ್ತೂರು ಗ್ರಾಮ ಪಂಚಾಯತ್ ವರಿಷ್ಟಗಾದಿಗೆ ಅವಿರೋಧ ಆಯ್ಕೆ

ಉಮ್ಮತ್ತೂರು ಗ್ರಾಮ ಪಂಚಾಯತ್ ವರಿಷ್ಠ ಗಾದಿಗೆ ಅವಿರೋಧ ಆಯ್ಕೆ

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿ

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿ

r ashok

ಸವಲತ್ತು ಮನೆ ಬಾಗಿಲಿಗೆ: ರೈತರ ಪರವಾಗಿ ಕಂದಾಯ ಇಲಾಖೆ ಮಹತ್ವದ ನಿರ್ಧಾರ

Kanavi

ಕವಿ ಚನ್ನವೀರ ಕಣವಿ ಅವರ ಆಸ್ಪತ್ರೆ ವೆಚ್ಚ ಭರಿಸಲು ಸರ್ಕಾರ ನಿರ್ಧಾರ

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಈ ಬಾರಿ 50 ಕೋಟಿ ರೂ.ಬಜೆಟ್‌

ಈ ಬಾರಿ 50 ಕೋಟಿ ರೂ.ಬಜೆಟ್‌

ಸಣ್ಣ ನೀರಾವರಿಯಲ್ಲಿ ಶೇ.100; ಕೃಷಿಯಲ್ಲಿ  ಶೇ. 65 ಸಾಧನೆ

ಸಣ್ಣ ನೀರಾವರಿಯಲ್ಲಿ ಶೇ.100; ಕೃಷಿಯಲ್ಲಿ ಶೇ. 65 ಸಾಧನೆ

ಬಿದ್ಕಲ್‌ಕಟ್ಟೆ: ರಾ.ಹೆ.ಯಲ್ಲಿ ವಿದ್ಯಾರ್ಥಿಗಳ ಪಯಣ; ಅಪಾಯ ಸಾಧ್ಯತೆ

ಬಿದ್ಕಲ್‌ಕಟ್ಟೆ: ರಾ.ಹೆ.ಯಲ್ಲಿ ವಿದ್ಯಾರ್ಥಿಗಳ ಪಯಣ; ಅಪಾಯ ಸಾಧ್ಯತೆ

ವಾರಕ್ಕೆರಡು ದಿನ ಮಾತ್ರ ಸೇವೆ; ಬಾಕಿ ದಿನ ಬೀಗ

ವಾರಕ್ಕೆರಡು ದಿನ ಮಾತ್ರ ಸೇವೆ; ಬಾಕಿ ದಿನ ಬೀಗ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.