
ಯುಗಾದಿ ಬಳಿಕ ಪ್ರಕೃತಿ ವಿಕೋಪ: ಕೋಡಿಮಠ ಶ್ರೀ
Team Udayavani, Feb 5, 2023, 7:20 AM IST

ಬಾಗಲಕೋಟೆ: ಮುಂದಿನ ಯುಗಾದಿ ಹಬ್ಬದ ಬಳಿಕ ಪ್ರಕೃತಿ ವಿಕೋಪ ಸಂಭವಿಸಲಿದೆ ಎಂದು ಕೋಡಿಮಠದ ಡಾ| ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ಹೇಳಿದ್ದಾರೆ.
ಜಮಖಂಡಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಡಬಾರದ್ದನ್ನು ಮಾಡಿದರೆ, ಆಗಬಾರದ್ದು ಆಗುತ್ತದೆ. ಯಾರೇ ಆಗಲಿ, ತಪ್ಪು ಇರಲಿ-ಸರಿ ಇರಲಿ ನಾವು ಏನು ಮಾಡುತ್ತೇವೆ ಅದೇ ಆಗುತ್ತದೆ. ನಾವು ಏನು ಬಿತ್ತುತ್ತೇವೆಯೋ ಅದೇ ಬೆಳೆ ಬರುತ್ತದೆ ಎಂದರು.
ಮುಂದಿನ ಬಾರಿಯೂ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಎಲ್ಲ ಪಕ್ಷಗಳಲ್ಲೂ ಬೇರೆ ಬೇರೆಯಾಗುವ ಲಕ್ಷಣಗಳಿವೆ. ಚುನಾವಣೆವರೆಗೂ ಪಕ್ಷಾಂತರಗಳು ಇರುತ್ತವೆ. ರಾಜಕೀಯ ಪಕ್ಷಗಳು ಒಡೆಯುತ್ತವೆ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ. ಎಷ್ಟು ಸುಖವಿದೆಯೋ, ಅಷ್ಟೇ ಕಷ್ಟವಿದೆ. ಒಲೆ ಹತ್ತಿ ಉರಿಯುತ್ತಿದ್ದರೆ ನಿಲ್ಲಬಹುದು. ಧರೆ ಹೊತ್ತಿ ಉರಿದರೆ ನಿಲ್ಲಲು ಸಾಧ್ಯವಿಲ್ಲ ಎಂದರು.
ಟಾಪ್ ನ್ಯೂಸ್
