ಸಾರಿಗೆ ನೌಕರರಿಗೆ ಅರ್ಧದಷ್ಟೇ ವೇತನ : ತರಬೇತಿ ಅವಧಿ ಸಿಬ್ಬಂದಿಗೆ 4 ಸಾವಿರಕ್ಕೂ ಕಡಿಮೆ ಸಂಬಳ

Team Udayavani, Jan 18, 2021, 12:55 PM IST

ಸಾರಿಗೆ ನೌಕರರಿಗೆ ಅರ್ಧದಷ್ಟೇ ವೇತನ : ತರಬೇತಿ ಅವಧಿ ಸಿಬ್ಬಂದಿಗೆ 4 ಸಾವಿರಕ್ಕೂ ಕಡಿಮೆ ಸಂಬಳ

ಹುಬ್ಬಳ್ಳಿ: ವೇತನ ತಾರತಮ್ಯ ವಿರೋಧಿಸಿ ಸಾರಿಗೆ ಸೇವೆ ಸ್ಥಗಿತಗೊಳಿಸಿ ಹೋರಾಟಕ್ಕಿಳಿದಿದ್ದ ಸಾರಿಗೆ ನೌಕರರು ಇದೀಗ ಅರ್ಧ ವೇತನ ಪಡೆಯುವಂತಹ ಸ್ಥಿತಿಗೆ ಬಂದು ತಲುಪಿದ್ದಾರೆ. ಸರಕಾರ ಮಾತು ತಪ್ಪಿದ ಹಿನ್ನೆಲೆಯಲ್ಲಿ ತರಬೇತಿ ಸಿಬ್ಬಂದಿ ಇದೀಗ ಕೇವಲ 4 ಸಾವಿರ ರೂ.ಗೂ ಕಡಿಮೆ ಪಡೆಯುವಂತಾಗಿದ್ದು, ಇಷ್ಟರಲ್ಲಿ ಜೀವನ ನಡೆಸುವುದಾದರೂ ಹೇಗೆ ಎನ್ನುವ ಪ್ರಶ್ನೆ ನೌಕರರದ್ದಾಗಿದೆ.

ಕೋವಿಡ್‌-19 ಪರಿಣಾಮ ಸಾರಿಗೆ ಸಂಸ್ಥೆಗಳಿಗೆ ಇಂಧನ, ಇನ್ನಿತರೆ ಖರ್ಚುಗಳನ್ನು ನಿರ್ವಹಿಸುವುದು ದುಸ್ತರವಾಗಿದ್ದ ಸಂದರ್ಭದಲ್ಲಿ ಸರಕಾರ ದೊಡ್ಡ ಮನಸ್ಸು ಮಾಡಿ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ರಿಯಾಯಿತಿ ಬಸ್‌ ಪಾಸ್‌ಗಳಿಗೆ ಸರಕಾರ ತನ್ನ ವಂತಿಗೆಯನ್ನು ಮುಂಗಡವಾಗಿ ನೀಡಿ ವೇತನಕ್ಕೆ ಪಾವತಿಗೆ ನೆರವಾಗಿತ್ತು. 2020 ಡಿಸೆಂಬರ್‌ ತಿಂಗಳ
ಅಂತ್ಯದವರೆಗೂ ಶೇ.50 ವೇತನ ನೀಡುವುದಾಗಿ ಭರವಸೆ ನೀಡಿತ್ತಾದರೂ ಅದು ಸಾಧ್ಯವಾಗಿಲ್ಲ.

ನಾಲ್ಕು ಸಾವಿರ ರೂ.ಗೂ ಕಡಿಮೆ: ಕೆಎಸ್‌ಆರ್‌ ಟಿಎಸ್‌ ಲೆಕ್ಕಪತ್ರ ಶಾಖೆಯ ಸೂಚನೆಯ ಮೇರೆಗೆ ಪ್ರತಿಯೊಬ್ಬರಿಗೂ ನಿವ್ವಳ ವೇತನದ ಅರ್ಧದಷ್ಟು ಮಾತ್ರ ವೇತನ ಪಾವತಿಸಲಾಗಿದೆ. ಆದರೆ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿರುವ ಸುಮಾರು 10 ಸಾವಿರಕ್ಕೂ ಹೆಚ್ಚು ನೌಕರರು ತರಬೇತಿ ಅವ ಧಿಯಲ್ಲಿದ್ದು, ಇವರಿಗೆ 9500 ರೂ. ಗೌರವಧನ ನೀಡಲಾಗುತ್ತದೆ.

ಇದನ್ನೂ ಓದಿ:ಪಾಕಿಸ್ತಾನ ಸಿಂಧ್ ಪ್ರಾಂತ್ಯ; ಸ್ವಾತಂತ್ರ್ಯ ಪರ ರಾಲಿಯಲ್ಲಿ ಪ್ರಧಾನಿ ಮೋದಿ ಪೋಸ್ಟರ್!

ಇವರಿಗೂ ಕೂಡ ಅರ್ಧದಷ್ಟು ವೇತನ ಪಾವತಿಸಿದ್ದು, ಎಲ್‌ಐಸಿ ಶಿಸ್ತು ಪ್ರಕರಣಗಳಲ್ಲಿ ವೇತನ ಕಡಿತಗೊಂಡರೆ ಕಡಿತಗೊಂಡು 3 ಸಾವಿರ ರೂ. ಕಡಿಮೆ ವೇತನ ಪಡೆದವರು ಇದ್ದಾರೆ.

3-4 ಸಾವಿರ ರೂ. ವೇತನದಲ್ಲಿ ಮನೆ ಬಾಡಿಗೆ ಕೊಡಲು ಸಾಧ್ಯವಿಲ್ಲ. ಮಡದಿ, ಮಕ್ಕಳ ಹೊಟ್ಟೆಗೆ ಹಿಟ್ಟಿನ ಗತಿ ಏನು? ಎನ್ನುವ ಚಿಂತೆ ನೌಕರರಲ್ಲಿ ಮೂಡಿದೆ. ಈ ಸಂಕಷ್ಟ ಇನ್ನೆಷ್ಟು ತಿಂಗಳು ಮುಂದುವರಿಯಲಿದೆ ಎನ್ನುವ ಆತಂಕವೂ ಶುರುವಾಗಿದೆ.
ಸರಕಾರ ಮಾತು ತಪ್ಪಿತೆ?: 2020 ಸೆಪ್ಟಂಬರ್‌ ತಿಂಗಳಾಂತ್ಯಕ್ಕೆ ಸಾರಿಗೆ ಆದಾಯ ಸಹಜ ಸ್ಥಿತಿಗೆ ಆಗಮಿಸದ ಹಿನ್ನೆಲೆಯಲ್ಲಿ ಸರಕಾರ ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ ತಿಂಗಳಿಗೆ ಶೇ.50 ರಷ್ಟು ವೇತನ ಸರಕಾರದಿಂದ ನೀಡಲಾಗುವುದು ಎಂದು ಭರವಸೆ ನೀಡಿತ್ತು. ನಾಲ್ಕು ಸಂಸ್ಥೆಗಳಿಗೆ ಪ್ರತಿ ತಿಂಗಳು ವೇತನಕ್ಕೆ ಬೇಕಾಗುವ 364 ಕೋಟಿ ರೂ. ಶೇ.50 ನೀಡುವುದಾಗಿ ಘೋಷಣೆ ಮಾಡಿತ್ತು. ಸಾರಿಗೆ ಸಂಸ್ಥೆಗಳ ಆದಾಯ ಸಹಜ ಸ್ಥಿತಿಗೆ ಬರುತ್ತಿದ್ದು, ನೀವೇ ವೇತನ ಪಾವತಿ ಮಾಡಿ ಎಂದು ಕೈ ಎತ್ತಿದೆ. ಡಿಸೆಂಬರ್‌ ತಿಂಗಳಿಗೂ ಅರ್ಧದಷ್ಟು ವೇತನ ನೀಡುವುದಾಗಿ ಮಾತು ನೀಡಿದ್ದ ಸರಕಾರ ಮಾತು ತಪ್ಪಿದೆ ಎನ್ನುವುದು ಸಾರಿಗೆ ನೌಕರರ
ಅಸಮಾಧಾನವಾಗಿದೆ. ತರಬೇತಿ ನೌಕರರ ಸಂಕಷ್ಟ ಒಂದೆಡೆಯಾದರೆ ಇನ್ನೂ ಸಣ್ಣ ವೇತನದವರು ಬ್ಯಾಂಕ್‌ ಸಾಲ, ಮನೆ ಬಾಡಿಗೆ, ಮಕ್ಕಳ ಓದಿನ ಖರ್ಚು, ಕುಟುಂಬ ನಿರ್ವಹಣೆ, ಆರೋಗ್ಯ ಸೇರಿದಂತೆ ಇನ್ನಿತರೆ ಖರ್ಚು ವೆಚ್ಚ ಹೇಗೆ ಎಂದು ತಲೆ ಮೇಲೆ ಕೈಹೊತ್ತುಕೊಳ್ಳುವಂತಾಗಿದೆ.

ಇನ್ನಷ್ಟು ತಿಂಗಳು ಇದೇ ಪರಿಸ್ಥಿತಿ ಮುಂದುವರಿದರೆ ಖಾಸಗಿದಾರರ ಬಳಿ ಸಾಲ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಾರೆ ಸಂಸ್ಥೆ ನೌಕರರು. ಕನಿಷ್ಠ ಮಾರ್ಚ್‌ ತಿಂಗಳವರೆಗಾದರೂ ವೇತನಕ್ಕೆ ಆರ್ಥಿಕ ನೆರವು ನೀಡಬೇಕು ಎನ್ನುವುದು ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಬೇಡಿಕೆಯಾಗಿದೆ. ಆದರೆ ಡಿಸೆಂಬರ್‌ ಅಂತ್ಯಕ್ಕೆ ಸಾರಿಗೆ ಆದಾಯ ಉತ್ತಮವಾಗಿದ್ದು, ನೀವೇ ಪಾವತಿಸಿಕೊಳ್ಳಿ ಎಂದು ಹಣಕಾಸು ಇಲಾಖೆ ಸಾರಿಗೆ ಸಂಸ್ಥೆಯ ಕಡತ ಮರಳಿಸಿದೆ ಎನ್ನಲಾಗಿದೆ.

– ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.