ಹಳ್ಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಪೊಲೀಸರಿಂದ ತನಿಖೆ
Team Udayavani, Feb 8, 2023, 9:20 PM IST
ಕುಣಿಗಲ್: ತಾಲೂಕಿನ ನೀಲತ್ತಹಳ್ಳಿ ತೊರೆ ಹಳ್ಳದಲ್ಲಿ ಪುರುಷನ ಅಪರಿಚಿತ ಶವ ಪತ್ತೆಯಾಗಿದೆ.
ಮೃತನಿಗೆ ಸುಮಾರು 33 ವರ್ಷ ಎನ್ನಲಾಗಿದ್ದು ವಿಳಾಸ ತಿಳಿದು ಬಂದಿಲ್ಲ, ನೀಲತಹಳ್ಳಿ ಗ್ರಾಮದ ಬಳಿ ಇರುವ ತೊರೆ ಹಳ್ಳದಲ್ಲಿ ಮುತ್ತುರಾಯನ ಮಡುಬಳಿ ಇಂದು ಬೆಳಿಗ್ಗೆ ಶವ ಪತ್ತೆಯಾಗಿದ್ದು ಮೃತನ ಎಡಗೈ ಮೊಣಕೈನಲ್ಲಿ ದೇವಮ್ಮ ಮತ್ತು ಹಾರ್ಟ್ ಸಿಂಬಲ್ ಅಚ್ಚೆ ಗುರುತು ಇರುತ್ತೆ ಬಲಗೈ ಮೊಣಕೈ ಬಳಿ ಅಮ್ಮ ಗಂಗಾ ಮತ್ತು ದೇವರ ತ್ರಿಶೂಲದ ಅಚ್ಚೆ ಗುರುತು ಹಾಕಿಲಾಗಿದೆ, ಮೃತನ ಬಲಕಣಕಾಲು ಬಳಿ ಮತ್ತೆ ಬಲಕೈ ಮೊಣಕೈ ಬಳಿ ಕಪ್ಪು ದಾರ ಕಟ್ಟಿರುತ್ತಾನೆ ಮೃತನು ಹೀಗೆ ಎರಡು ಮೂರು ದಿವಸಗಳ ಹಿಂದೆಯೇ ನೀರಿನಲ್ಲಿ ಬಿದ್ದು ಮೃತಪಟ್ಟಿರ ಬಹುದು ಎನ್ನಲಾಗಿದ್ದು. ನೀಲ ತಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಕುಣಿಗಲ್ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಣಿಗಲ್ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಳೆ ಬಂದಾಗ ಅಣಬೆ ಹುಟ್ಟುತ್ತದೆ…. ಶಾಸಕ ಮಠಂದೂರು ಹೇಳಿಕೆಗೆ ಪುತ್ತಿಲ ಬೆಂಬಲಿಗರ ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಮೀನು,ಚಿನ್ನ,ಟ್ರ್ಯಾಕ್ಟರ್, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು
ಬಳ್ಳಾರಿ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ ನ ತ್ರಿವೇಣಿ ಆಯ್ಕೆ,ಜಾನಕಿ ಉಪಮೇಯರ್
ಅಳಿಯನೇ ಪಕ್ಷದ ಅಭ್ಯರ್ಥಿಯಾಗಿರುವಾಗ ಭಿನ್ನಮತದ ಮಾತೆಲ್ಲಿ: ಕಾಗೋಡು ಪ್ರಶ್ನೆ
ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ: 10.65 ಲಕ್ಷ ರೂ.ಸಂಗ್ರಹ
ಆಮೆ ಮತ್ತು ಮೊಲದ ಓಟ : ಅತೀ ಉತ್ಸಾಹವೇ ಈತನಿಗೆ ಮುಳುವಾಯ್ತು!!