Kushtagi: ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನ

Team Udayavani, Jun 8, 2023, 11:47 AM IST

3-kushtagi

ಕುಷ್ಟಗಿ: ಪಟ್ಟಣದ ಹೃದಯ ಭಾಗದ ಬಸವೇಶ್ವರ ವೃತ್ತದ ಬಳಿ ಸರಣಿ ನಾಲ್ಕು ಅಂಗಡಿಗಳಲ್ಲಿ ಕಳವಾದ ಘಟನೆ ಜೂ.8ರ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಕಳ್ಳರು ಅಂಗಡಿಯ ತಗಡಿನ ಮೇಲ್ಚಾವಣೆ ಕೊರೆದು ಗುಟ್ಕಾ ಸಿಗರೇಟ್ ಸೇರಿದಂತೆ ಕೆಲ ವಸ್ತುಗಳಿಗೆ ಕನ್ನ ಹಾಕಿದ್ದಾರೆ ಎನ್ನಲಾಗಿದೆ.

ಕುಷ್ಟಗಿ ಬಸವೇಶ್ವರ ವೃತ್ತದಿಂದ ಕೂಗಳತೆಯ ದೂರದಲ್ಲಿರುವ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ಸೇರಿದ ಶ್ರೀ ವೀರಭದ್ರೇಶ್ವರ ಎಲೆಕ್ಟ್ರಿಕಲ್, ಸಿದ್ದರಾಮಯ್ಯ ಹಿರೇಮಠ ಅವರಿಗೆ ಸೇರಿದ ಸಿದ್ದರಾಮೇಶ್ವರ ಹಾರ್ಡವೇರ್, ಮುಸ್ತಾಫಾ ಅನಾಸುರ್ ಅವರ ಅಹ್ಮದ್ ಸ್ವಿಟ್ಸ್, ಮಲ್ಲಿಕಾರ್ಜುನ ಗೌಡ ಕೋಳೂರು ಅವರ ಚಂದಾಲಿಂಗೇಶ್ವರ ಗೊಬ್ಬರ ಅಂಗಡಿಗಳಲ್ಲಿ ಕಳವಾಗಿದೆ.

ಈ ಪೈಕಿ ಅಹ್ಮದ್ ಸ್ವೀಟ್ಸ್ ಅಂಗಡಿಯಲ್ಲಿ 4,500ರೂ. ಮೌಲ್ಯದ ಆರ್ ಎಂ ಡಿ 4 ಬಾಕ್ಸ್, 6,500 ರೂ. ಮೌಲ್ಯದ ಕಿಂಗ್ ಸಿಗರೇಟ್ 40‌ ಪ್ಯಾಕೇಟ್‌, 17,000 ರೂ. ವಿಮಲ್ 1500 ಪ್ಯಾಕೇಟ್‌ ಕಳವಾಗಿದ್ದು, ಇನ್ನುಳಿದ ಅಂಗಡಿಗಳ ಗಲ್ಲ ಪೆಟ್ಟಿಗೆಯಲ್ಲಿ ಹಣಕ್ಕಾಗಿ ತಡಕಾಡಿದ್ದಾರೆ.

ಗುಟ್ಕಾ ತಿಂದು ಉಗುಳಿರುವ ಕಳ್ಳರು: ಮುಖ್ಯರಸ್ತೆಯಲ್ಲಿರುವ ಈ ಅಂಗಡಿಗಳಲ್ಲಿ ಈ ಮೊದಲು ಬೀಗ ಮುರಿದು, ಶಟರ್ಸ್‌ ಎಬ್ಬಿಸಿ ಕಳ್ಳತನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮೇಲ್ಚಾವಣೆ ಕೊರೆದು, ಕಳವು ಮಾಡಿರುವುದು ವಿಶೇಷ.

ಶ್ರೀ ವೀರಭದ್ರೇಶ್ವರ ಎಲೆಕ್ಟ್ರಿಕಲ್ ಗೆ ಪ್ರಯತ್ನಿಸಿದ್ದ ಮೇಲ್ಚಾವಣೆಯ ತಗಡಿನ ಅಡಿಯಲ್ಲಿ ಪ್ಲೈವುಡ್ ಬಂದೋಬಸ್ತ್‌ ಹಿನ್ನೆಲೆಯಲ್ಲಿ ವಿಫಲರಾಗಿದ್ದಾರೆ. ಸಿದ್ದರಾಮೇಶ್ವರ ಹಾರ್ಡವೇರ್ ನಲ್ಲಿ ಹಗ್ಗ ಬಳಸಿ ಅಂಗಡಿಯೊಳಗೆ ಇಳಿದು ಅಹ್ಮದ್ ಸ್ವೀಟ್ಸ್ ನಲ್ಲಿ ಸಿಗರೇಟು, ಗುಟ್ಕಾ ಕಳವು ಮಾಡಿದ್ದು, ಮಾತ್ರವಲ್ಲದೇ  ಗುಟ್ಕಾ ತಿಂದು ಉಗುಳಿದಿದ್ದಾರೆ. ಚಂದಾಲಿಂಗೇಶ್ವರ ಗೊಬ್ಬರ ಅಂಗಡಿಯಲ್ಲಿ ಗಲ್ಲ ಪೆಟ್ಟಿಗೆಯಲ್ಲಿ ಹುಡುಕಾಡಿದ್ದರೂ ಏನೂ ಸಿಕ್ಕಿಲ್ಲ.

ಸಿಸಿ ಕ್ಯಾಮರಾ ಸುಳಿವು?: ಕಳವಾದ ಅಂಗಡಿಗಳ ಹಿಂದೆ ಹಂಪನಾಳ ಶರಣಪ್ಪ ಅವರ ವೈನ್ಸ್ ಶಾಪ್ ಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಇದರಿಂದ ಕಳ್ಳರ ಸುಳಿವು ಗೊತ್ತಾಗುವ ಸಾದ್ಯತೆಗಳಿವೆ.

ಚಂದಾಲಿಂಗೇಶ್ವರ ಗೊಬ್ಬರದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಇದ್ದರೂ ಕೆಲ ದಿನಗಳ ಹಿಂದೆ ಕ್ಯಾಮರಾ ವೈಯರ್ ತುಂಡಾಗಿದ್ದು, ಮಾಲೀಕರು ಮರುದುರಸ್ಥಿ ಮಾಡಿಸಿಲ್ಲ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಕಳ್ಳರ ಪತ್ತೆಗೆ ಕ್ರಮ ವಹಿಸಿದ್ದಾರೆ. ಈ ಅಂಗಡಿಗಳ ಕಳ್ಳತನ ವರ್ಷದಲ್ಲಿ ಒಂದಲ್ಲ ಎರಡು ಅಂಗಡಿಗಳಲ್ಲಿ ಕಳವಾಗುವುದು ಸಾಮಾನ್ಯವಾಗಿದೆ. ಈ ಭಾಗದ ಅಂಗಡಿಗಳಿಗೆ ಕಳ್ಳರು ಬೀಗರು ಬಂದಂತೆ ಬಂದು ಹೋಗುತ್ತಿರುವುದು ಅಂಗಡಿ ಮಾಲೀಕರಲ್ಲಿ ನಿರಾಸೆ ಮೂಡಿಸಿದೆ.

ಟಾಪ್ ನ್ಯೂಸ್

AAP: ಲೋಕಸಭೆ ಚುನಾವಣೆ – ಗೋವಾದಲ್ಲಿ ನೂತನ ಕಾರ್ಯಕಾರಿ ಸಮಿತಿ ಪ್ರಕಟಿಸಿದ ಆಪ್‌

1-csadasd

Cauvery Water; ಕಾಂಗ್ರೆಸ್‌ ಸರ್ಕಾರ ಅಸಮರ್ಥ: ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ

vatal

September 29 ರಂದು ಕರ್ನಾಟಕ ಬಂದ್‌ ; ನೂರಾರು ಸಂಘಟನೆಗಳ ಬೆಂಬಲ

Goa; ಈ ಕಾರಣಕ್ಕೆ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

Goa; ಈ ಕಾರಣಕ್ಕಾಗಿ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

1-sasad-s

Muslim ಮಹಿಳೆಯರ ಪರವಾಗಿ ಏಕೆ ನಿಲ್ಲಲಿಲ್ಲ?: ವಿಪಕ್ಷಗಳ ವಿರುದ್ಧ ಪ್ರಧಾನಿ ಕಿಡಿ

1-fs-sad

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

ವಿದ್ಯುತ್ ಸಂಪರ್ಕದ ವೇಳೆ ಎಡವಟ್ಟು: 50ಕ್ಕೂ ಹೆಚ್ಚಿನ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ

Kustagi: ವಿದ್ಯುತ್ ಸಂಪರ್ಕದ ವೇಳೆ ಎಡವಟ್ಟು: ಹಲವು ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ

Gangavathi ಕೊಲೆ ಆರೋಪ- ಪತ್ನಿಯನ್ನು ಕಾಲುವೆಗೆ ತಳ್ಳಿದ ಪತಿ: ದೂರು ದಾಖಲು

Gangavathi ಕೊಲೆ ಆರೋಪ- ಪತ್ನಿಯನ್ನು ಕಾಲುವೆಗೆ ತಳ್ಳಿದ ಪತಿ: ದೂರು ದಾಖಲು

Kushtagi: ಹತ್ತಿಗೆ ಯೋಗ್ಯ ಬೆಲೆ; ವಿಸ್ತಾರಗೊಳ್ಳುತ್ತಿದೆ ಕ್ಷೇತ್ರ

Kushtagi: ಹತ್ತಿಗೆ ಯೋಗ್ಯ ಬೆಲೆ; ವಿಸ್ತಾರಗೊಳ್ಳುತ್ತಿದೆ ಕ್ಷೇತ್ರ

7-dotihala

Dotihala Crime: ವ್ಯಕ್ತಿಯ ಕೊಲೆಗೈದು ಪರಾರಿಯಾದ ದುಷ್ಕರ್ಮಿಗಳು

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

AAP: ಲೋಕಸಭೆ ಚುನಾವಣೆ – ಗೋವಾದಲ್ಲಿ ನೂತನ ಕಾರ್ಯಕಾರಿ ಸಮಿತಿ ಪ್ರಕಟಿಸಿದ ಆಪ್‌

1-csadasd

Cauvery Water; ಕಾಂಗ್ರೆಸ್‌ ಸರ್ಕಾರ ಅಸಮರ್ಥ: ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ

vatal

September 29 ರಂದು ಕರ್ನಾಟಕ ಬಂದ್‌ ; ನೂರಾರು ಸಂಘಟನೆಗಳ ಬೆಂಬಲ

Goa; ಈ ಕಾರಣಕ್ಕೆ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

Goa; ಈ ಕಾರಣಕ್ಕಾಗಿ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

1-sasad-s

Muslim ಮಹಿಳೆಯರ ಪರವಾಗಿ ಏಕೆ ನಿಲ್ಲಲಿಲ್ಲ?: ವಿಪಕ್ಷಗಳ ವಿರುದ್ಧ ಪ್ರಧಾನಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.