ಆರೋಗ್ಯ: ದೊಡ್ಡ ಕರುಳಿನ ಕ್ಯಾನ್ಸರ್‌ ಬಗ್ಗೆ ಅರಿಯಿರಿ


Team Udayavani, Mar 23, 2023, 8:00 AM IST

large-intestine–health

ಕೊಲೊರೆಕ್ಟಲ್‌ ಅಥವಾ ದೊಡ್ಡಕರುಳು-ಗುದನಾಳದ ಕ್ಯಾನ್ಸರ್‌ ದೊಡ್ಡ ಕರುಳು ಅಥವಾ ಗುದನಾಳದಲ್ಲಿ ಉಂಟಾಗುತ್ತದೆ. ಅಲ್ಲಿಯ ಜೀವಕೋಶಗಳು ಅಸಹಜ ಬೆಳವಣಿಗೆ ಕಂಡು ಅನಿಯಂತ್ರಿತವಾಗಿ ಬೆಳವಣಿಗೆ ಕಾಣುವ ಮೂಲಕ ಗಡ್ಡೆ ಉಂಟಾಗುತ್ತದೆ.

ಭಾರತದಲ್ಲಿ; ಕೊಲೊರೆಕ್ಟಲ್‌ ಕ್ಯಾನ್ಸರ್‌

ಭಾರತದಲ್ಲಿ ದೊಡ್ಡ ಕರುಳು ಮತ್ತು ಗುದನಾಳದ ಕ್ಯಾನ್ಸರ್‌ ವಾರ್ಷಿಕವಾಗಿ ಕಂಡುಬರುವ ಅಂಕಿಅಂಶಗಳನ್ನು ಗಮನಿಸಿದರೆ, ಅದು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಉಂಟಾಗುತ್ತಿರುವುದು ತಿಳಿಯುತ್ತದೆ. ಭಾರತೀಯರು, ಅಮೆರಿಕನ್ನರು ಮತ್ತು ಅಲಾಸ್ಕಾ ಮೂಲದವರಲ್ಲಿ ಕ್ಯಾನ್ಸರ್‌ನಿಂದ ಉಂಟಾಗುವ ಮರಣಗಳಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್‌ ದ್ವಿತೀಯ ಪ್ರಧಾನ ಕಾರಣವಾಗಿದೆ.

ಯಾರು ಕೊಲೊರೆಕ್ಟಲ್‌ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಅಧಿಕ?

ವಯಸ್ಸು: ವಯಸ್ಸು ಹೆಚ್ಚಿದಂತೆ ಕೊಲೊರೆಕ್ಟಲ್‌ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಈ ಕಾಯಿಲೆ ಯಾವುದೇ ವಯಸ್ಸಿನಲ್ಲಿ ಉಂಟಾಗಬಹುದಾದರೂ ಕೊಲೊರೆಕ್ಟಲ್‌ ಕ್ಯಾನ್ಸರ್‌ಗೆ ತುತ್ತಾಗುವವರಲ್ಲಿ ಹೆಚ್ಚಿನವರು 50 ವರ್ಷಕ್ಕಿಂತ ಮೇಲ್ಪಟ್ಟವರು.
ಪಾಲಿಪ್ಸ್‌: ದೊಡ್ಡ ಕರುಳು ಅಥವಾ ಗುದನಾಳದ ಒಳಭಿತ್ತಿಯಿಂದ ಬೆಳೆದು ಹೊರಚಾಚಿಕೊಳ್ಳುವ ಚಾಚಿಕೆಗಳು ಪಾಲಿಪ್‌ಗ್ಳು. ಇವು 50 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಲ್ಲಿ ಉಂಟಾಗುವುದು ಹೆಚ್ಚು. ಬಹುತೇಕ ಪಾಲಿಪ್‌ಗ್ಳು ಕ್ಯಾನ್ಸರೇತರವಾಗಿರುತ್ತವೆ. ಬಹುತೇಕ ಕೊಲೊರೆಕ್ಟಲ್‌ ಕ್ಯಾನ್ಸರ್‌ ಗಳು ಕೆಲವು ನಿರ್ದಿಷ್ಟ ಪಾಲಿಪ್ಸ್‌ಗಳಲ್ಲಿ ಬೆಳವಣಿಗೆ ಕಾಣುತ್ತವೆ ಎಂಬುದಾಗಿ ತಜ್ಞರು ಹೇಳುತ್ತಾರೆ. ಈ ಬೆಳವಣಿಗೆಗಳನ್ನು ಗುರುತಿಸಿ ತೆಗೆದುಹಾಕುವುದು ಕೊಲೊರೆಕ್ಟಲ್‌ ಕ್ಯಾನ್ಸರ್‌ ತಡೆಯಲು ಸಹಾಯ ಮಾಡಬಹುದಾಗಿದೆ.

ಕೌಟುಂಬಿಕ ಇತಿಹಾಸ: ಹೆತ್ತವರು, ಸಹೋದರರು, ಮಕ್ಕಳು – ಹೀಗೆ ಕೊಲೊರೆಕ್ಟಲ್‌ ಕ್ಯಾನ್ಸರ್‌ಗೆ ತುತ್ತಾದ ನಿಕಟ ಸಂಬಂಧಿಗಳನ್ನು ಹೊಂದಿರುವವರಿಗೆ ಈ ಕ್ಯಾನ್ಸರ್‌ ಬಾಧಿಸುವ ಸಾಧ್ಯತೆಗಳು ಅಧಿಕ.

ವೈಯಕ್ತಿಕ ಇತಿಹಾಸ: ಗರ್ಭಕೋಶ, ಮೂತ್ರಾಂಗ ಅಥವಾ ಸ್ತನ ಕ್ಯಾನ್ಸರ್‌ಗೆ ತುತ್ತಾಗಿರುವ ಕೆಲವು ಮಹಿಳೆಯರಿಗೆ ಕೊಲೊರೆಕ್ಟಲ್‌ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆ ಇದೆ ಎಂಬುದಾಗಿ ಸಂಶೋಧನೆಗಳು ಹೇಳಿವೆ.

ಪಥ್ಯಾಹಾರ: ಹೆಚ್ಚು ಕೊಬ್ಬು, ಕೆಂಪು ಮಾಂಸ, ಕ್ಯಾಲೊರಿ ಹಾಗೂ ಕಡಿಮೆ ನಾರಿನಂಶ, ಹಣ್ಣುಗಳು ಮತ್ತು ತರಕಾರಿಗಳಿರುವ ಆಹಾರಪದ್ಧತಿಗೂ ಕೊಲೊರೆಕ್ಟಲ್‌ ಕ್ಯಾನ್ಸರ್‌ ಉಂಟಾಗುವುದಕ್ಕೂ ಸಂಬಂಧ ಇದೆ ಎಂದು ಅಧ್ಯಯನಗಳು ಹೇಳುತ್ತವೆ.

ಕೊಲೊರೆಕ್ಟಲ್‌ ಕ್ಯಾನ್ಸರ್‌ನ್ನು ಬೇಗನೆ ಪತ್ತೆ ಹಚ್ಚಬಹುದೇ?

ಹೌದು! ಅನಾರೋಗ್ಯದ ಚಿಹ್ನೆಗಳು ಮತ್ತು ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಮುನ್ನವೇ ಅದನ್ನು ಪತ್ತೆಹಚ್ಚುವುದಕ್ಕಾಗಿ ತಪಾಸಣೆಯನ್ನು ನಡೆಸುತ್ತಾರೆ. ಪಾಲಿಪ್ಸ್‌ಗಳು ಕ್ಯಾನ್ಸರ್‌ ಆಗಿ ಬದಲಾಗಬಲ್ಲವೇ ಎಂಬುದನ್ನು ತಪಾಸಣೆಯಿಂದ ಕಂಡುಕೊಳ್ಳಬಹುದು.

ಕೊಲೊರೆಕ್ಟಲ್‌ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಸಾಧ್ಯತೆಗಳುಳ್ಳ ಮಹಿಳೆಯರು ಮತ್ತು ಪುರುಷರು 45 ವರ್ಷ ವಯಸ್ಸಿನ ಬಳಿಕ ಈ ಕೆಳಗಿನಂತೆ ತಪಾಸಣೆಯ ವೇಳಾಪಟ್ಟಿ ಹಾಕಿಕೊಳ್ಳಬೇಕು: ­

  • ಪ್ರತೀ 10 ವರ್ಷಗಳಿಗೆ ಒಮ್ಮೆ ಕೊಲೊನೊಸ್ಕೊಪಿ
  • ಪ್ರತೀ 5 ವರ್ಷಗಳಿಗೆ ಒಮ್ಮೆ ಫ್ಲೆಕ್ಸಿಬಲ್‌ ಸಿಗ್ಮಾಯ್ಡೊಸ್ಕೊಪಿ
  • ಪ್ರತೀ 5 ವರ್ಷಗಳಿಗೆ ಒಮ್ಮೆ ಸಿಟಿ ಕೊಲೊನೊಸ್ಕೊಪಿ (ವರ್ಚುವಲ್‌ ಕೊಲೊನೊಸ್ಕೊಪಿ)

ಕೊಲೊರೆಕ್ಟಲ್‌ ಕ್ಯಾನ್ಸರ್‌ನ ಚಿಹ್ನೆಗಳು ಮತ್ತು ಲಕ್ಷಣಗಳೇನು? ­

  • ಗುದನಾಳದಿಂದ ರಕ್ತಸ್ರಾವ
  • ಮಲವಿಸರ್ಜನೆಯ ಬಳಿಕ ಮಲದಲ್ಲಿ ಅಥವಾ ಶೌಚಾಲಯದಲ್ಲಿ ರಕ್ತದ ಅಂಶ ಕಂಡುಬರುವುದು
  • ಬೇಧಿ ಅಥವಾ ಮಲಬದ್ಧತೆಯಂತಹ ಮಲವಿಸರ್ಜನೆಯಲ್ಲಿ ಬದಲಾವಣೆಗಳು
  • ಮಲವಿಸರ್ಜನೆ ಆದ ಮೇಲೂ ಇನ್ನೂ ಸರಿಯಾಗಿ ಆಗಿಲ್ಲ ಎಂಬ ಅನುಭವ
  • ಇತರ ಯಾವುದೇ ನಿರ್ದಿಷ್ಟ ಕಾರಣಗಳು ಇಲ್ಲದೆ ರಕ್ತಹೀನತೆ

ಕೊಲೊನೊಸ್ಕೊಪಿ ಎಂದರೇನು?

ದೊಡ್ಡ ಕರುಳಿನ ಒಳಭಾಗವನ್ನು ಉದ್ದನೆಯ ನಮ್ಯ ಕೊಳವೆಯೊಂದನ್ನು ತೂರಿಸಿ ದರ್ಶಿಸುವ ವೈದ್ಯಕೀಯ ಪ್ರಕ್ರಿಯೆಗೆ ಕೊಲೊನೊಸ್ಕೊಪಿ ಎಂದು ಹೆಸರು. ದೊಡ್ಡ ಕರುಳಿನ ಒಳಭಾಗವನ್ನು ದರ್ಶಿಸಲು ಉಪಯೋಗಿಸುವ ಉಪಕರಣದ ಹೆಸರು ಕೊಲೊನೊಸ್ಕೋಪ್‌.

ಕೊಲೊನೊಸ್ಕೋಪ್‌ ಉಪಕರಣವು ಉದ್ದನೆಯದಾಗಿದ್ದು, ಮೃದು ಮತ್ತು ನಮ್ಯವಾಗಿರುತ್ತದೆ; ಇದರ ಒಂದು ತುದಿಯಲ್ಲಿ ವೀಡಿಯೋ ಕೆಮರಾ ಮತ್ತು ದೀಪ ಇರುತ್ತದೆ. ಕೊಲೊನೋಸ್ಕೋಪ್‌ನ ವಿವಿಧ ನಿಯಂತ್ರಣಗಳ ಮೂಲಕ ಗ್ಯಾಸ್ಟ್ರೊಎಂಟರಾಲಜಿಸ್ಟ್‌ ಅದನ್ನು ಎಚ್ಚರಿಕೆಯಿಂದ ದೊಡ್ಡ ಕರುಳಿನ ಒಳಗೆ ಯಾವುದೇ ದಿಕ್ಕಿಗೆ ಕಳುಹಿಸಬಹುದು ಮತ್ತದು ದೊಡ್ಡ ಕರುಳಿನ ಒಳಭಾಗವನ್ನು ವೀಕ್ಷಿಸಬಹುದಾಗಿದೆ.

-ಶಿರನ್‌ ಶೆಟ್ಟಿ, ಪ್ರೊಫೆಸರ್‌ ಮತ್ತು ಹೆಡ್‌, ಗ್ಯಾಸ್ಟ್ರೊಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗ ಕೆಎಂಸಿ, ಮಾಹೆ, ಮಣಿಪಾಲ

-ಸಿದ್ಧೀಶ್‌ ರಾಜಪುರೋಹಿತ್‌, ಪಿಎಚ್‌ಡಿ ಸ್ಕಾಲರ್‌

(ಈ ಲೇಖನದ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

 

ಟಾಪ್ ನ್ಯೂಸ್

New Parliament Inauguration; ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗರ್ಭಕಂಠದ ಕ್ಯಾನ್ಸರ್‌: ಕಾರಣಗಳು,ರೋಗಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ

ಗರ್ಭಕಂಠದ ಕ್ಯಾನ್ಸರ್‌: ಕಾರಣಗಳು,ರೋಗಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ

ಸಮತೋಲನದ ತೊಂದರೆ, ತಲೆ ಸುತ್ತುವಿಕೆ ಅನುಭವಿಸುತ್ತಿದ್ದೀರಾ?

ಸಮತೋಲನದ ತೊಂದರೆ, ತಲೆ ಸುತ್ತುವಿಕೆ ಅನುಭವಿಸುತ್ತಿದ್ದೀರಾ?

ಗರ್ಭಧಾರಣೆಯ ಸಂದರ್ಭದಲ್ಲಿ ಸ್ತ್ರೀ ಜನನಾಂಗದ ಕ್ಯಾಂಡಿಡಿಯಾಸಿಸ್‌

ಗರ್ಭಧಾರಣೆಯ ಸಂದರ್ಭದಲ್ಲಿ ಸ್ತ್ರೀ ಜನನಾಂಗದ ಕ್ಯಾಂಡಿಡಿಯಾಸಿಸ್‌

ನೋವಿನ ಮಾತ್ರೆ ತಂದಿಟ್ಟ ನೋವು!

ನೋವಿನ ಮಾತ್ರೆ ತಂದಿಟ್ಟ ನೋವು!

Arthroscopic surgery ಹಾಗೆಂದರೇನು?

Arthroscopic surgery ಹಾಗೆಂದರೇನು?

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

New Parliament Inauguration; ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು