
ಲಷ್ಕರ್-ಎ-ತೊಯ್ಬಾದ ಮಕ್ಕಿ ಜಾಗತಿಕ ಉಗ್ರ: ಭಾರತ
Team Udayavani, Feb 2, 2023, 7:15 AM IST

ನವದೆಹಲಿ : ಪಾಕಿಸ್ತಾನ ಪ್ರೇರಿತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ವಿಶ್ವಸಂಸ್ಥೆಯ ಘೋಷಿತ ಜಾಗತಿಕ ಉಗ್ರನೆಂದು ಭಾರತ ಬುಧವಾರ ಪರಿಗಣಿಸಿದೆ.
ಇತ್ತೀಚೆಗಷ್ಟೇ ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯಲ್ಲಿ ಮಕ್ಕಿಯನ್ನು ಜಾಗತಿಕ ಉಗ್ರನೆಂದು ಘೋಷಿಸಲಾಗಿತ್ತು. ಈ ನಿರ್ಣಯವನ್ನು ಭಾರತ ಸ್ವಾಗತಿಸಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂಧಮ್ ಬಗಿc ಪ್ರತಿಕ್ರಿಯಿಸಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಯು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಅಂಥ ಕೃತ್ಯಗಳಿಗೆ ಕಡಿವಾಣ ಹಾಕಲು ಯುಎನ್‌ಎಸ್‌ಸಿ ನಿರ್ಣಯಗಳು ಸಹಕಾರಿಯಾಗಿದೆ. ಮಕ್ಕಿಯ ತಂದೆ ಹಫೀಜ್ ಅಬ್ದುಲ್ ಬಹುವಾಲ್‌ಪುರಿಯನ್ನು ಕೂಡ ಇತ್ತೀಚೆಗೆ ಜಾಗತಿಕ ಉಗ್ರನ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು.
ಟಾಪ್ ನ್ಯೂಸ್
