
Boult: ಬೌಲ್ಟ್‌ನಿಂದ ಬಜೆಟ್ ದರದಲ್ಲಿ 3 ಇಯರ್‌ಬಡ್‌ಗಳ ಬಿಡುಗಡೆ
Team Udayavani, Sep 25, 2023, 10:45 PM IST

ನವದೆಹಲಿ: ಸ್ವದೇಶಿ ಬ್ರಾಂಡ್ ಬೌಲ್ಟ್, ವೈ1 ಪ್ರೊ, ಡಬ್ಲೂ 50 ಮತ್ತು ಡಬ್ಲೂ 20 ಹೆಸರಿನ ಮೂರು ಬಜೆಟ್ ದರದ ಟ್ರೂ ವಯರ್ಲೆಸ್ ಇಯರ್ಬಡ್ ಗಳನ್ನು ಬಿಡುಗಡೆ ಮಾಡಿದೆ.
ವೈ1 ಪ್ರೊ ಬೆಲೆ 1099 ರೂ. ಇದ್ದು, ಇದು 60 ಗಂಟೆಗಳ ಬ್ಯಾಟರಿ ಹೊಂದಿದೆ. ಡಬ್ಲೂ 50 ಮಾದರಿ 50 ಗಂಟೆಗಳ ಬ್ಯಾಟರಿ ಒಳಗೊಂಡಿದ್ದು, 999 ರೂ. ದರವಿದೆ. ಇನ್ನು ಡಬ್ಲೂ 20 ಬೆಲೆ 899 ರೂ. ಇದ್ದು, ಇದು 32 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ.
ಬೌಲ್ಟ್ ವೈ1 ಪ್ರೊ ಯುಎಸ್ಬಿ ಟೈಪ್ ಸಿ ವೇಗದ ಚಾರ್ಜಿಂಗ್ ಹೊಂದಿದ್ದು, ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 120 ನಿಮಿಷಗಳ ಸಂಗೀತ ಆಲಿಸಬಹುದಾಗಿದೆ. 45ಮಿಲಿಸೆಕೆಂಡ್ ಲೇಟೆನ್ಸಿ ಹೊಂದಿದೆ. ಕರೆ ಮಾಡಲು ತಲಾ ಎರಡು ಇಎನ್ಸಿ ತಂತ್ರಜ್ಞಾನದ ಮೈಕ್ಗಳನ್ನು ಅಳವಡಿಸಲಾಗಿದೆ. 13 ಎಂಎಂ ಡ್ರೈವರ್ಗಳನ್ನು ಹೊಂದಿದೆ. ಐಪಿಎಕ್ಸ್ 5 ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಹೊಂದಿದೆ.
ಬೌಲ್ಟ್ ಡಬ್ಲೂ 50 ಮತ್ತು ಡಬ್ಲೂ 20 ಸಹ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಸೌಭ್ಯ ಹೊಂದಿವೆ. ಇವೂ ಸಹ 45ಎಂಎಸ್ ಲೇಟೆನ್ಸಿ ಹೊಂದಿದ್ದು, ಗೇಮಿಂಗ್ಗೂ ಸೂಕ್ತವಾಗಿದೆ. 13 ಎಂಎಂ ಡ್ರೈವರ್ ಹೊಂದಿವೆ. 5.3 ಬ್ಲೂಟೂತ್ ಇದ್ದು, ಅತ್ಯಂತ ಕ್ಷಿಪ್ರವಾಗಿ ಫೋನ್ ಜೊತೆ ಪೇರಿಂಗ್ ಆಗುತ್ತವೆ.
ಈ ಮೂರೂ ಇಯರ್‌ಬಡ್‌ಗಳು http://boultaudio.com ಮತ್ತು ಅಮೆಜಾನ್.ಇನ್ ನಲ್ಲಿ ಲಭ್ಯ.
ಟಾಪ್ ನ್ಯೂಸ್
