
ಸುರಕ್ಷಿತ ಸ್ಥಳಕ್ಕೆ ಹಾವು ಬಿಡುವುದು ಸವಾಲಿನ ಕೆಲಸ
Team Udayavani, Aug 3, 2021, 4:22 PM IST

ಕುದೂರು: ಹಾವು ಹಿಡಿಯುವುದು ಒಂದು ಅದ್ಭುತವಾದ ಕಲೆ. ಹಿಡಿದ ಹಾವನ್ನು ಜೋಪಾನವಾಗಿ ಸುರಕ್ಷಿತ ಸ್ಥಳಕ್ಕೆ ಬಿಡುವುದೂ
ಕೂಡ ಸವಾಲಿನ ಕೆಲಸವಾಗಿದೆ ಎಂದು ಉರಗ ತಜ್ಞ ಸುಗ್ಗನಹಳ್ಳಿ ಅರುಣ್‌ಕುಮಾರ್ ಹೇಳಿದರು.
ಡಾಬಸ್‌ಪೇಟೆಯ ತೋಟದ ಮನೆಯಲ್ಲಿ ಸೇರಿಕೊಂಡಿದ್ದ ಹೆಬ್ಟಾವನ್ನು ಹಿಡಿದು ಮಾಗಡಿ ತಾಲೂಕು ಕುದೂರು ಹೋಬಳಿಯ ಚೀಲೂರು ಬೆಟ್ಟಕ್ಕೆ ಬಿಡುವ ಸಂದರ್ಭದಲ್ಲಿ ಮಾತನಾಡಿ, ಹೆಬ್ಟಾವು ಅತ್ಯಂತ ಅಮಾಯಕ ಹಾವುಗಳಲ್ಲಿ ಒಂದು. ಒಮ್ಮೆ ಹೊಟ್ಟೆ ತುಂಬಾ ಆಹಾರ ಸಿಕ್ಕ ನಂತರ ಒಂದು ತಿಂಗಳು ಆಹಾರವಿಲ್ಲದೆ ಇರಬಲ್ಲದು. ಇದು ವಿಷಪೂರಿತ ಹಾವಲ್ಲ. ಆದರೆ, ಅದು ಕಡಿದರೆ ದೊಡ್ಡ ಗಾಯವಾಗುತ್ತದೆ.ಇದರಿಂದ ಎಚ್ಚರವಾಗಿರಬೇಕು ಎಂದು ತಿಳಿಸಿದರು.
ಸುರಕ್ಷಿತ ಸ್ಥಳಕ್ಕೆ ಬಿಡುವುದು ನಮ್ಮ ಜವಾಬ್ದಾರಿ: ಹೆಬ್ಟಾವನ್ನು ಹಿಡಿದು ಬೆಟ್ಟ-ಗುಡ್ಡಗಳಿಗೆ ಬಿಡುವಂತಿಲ್ಲ. ಈಗ ಹಿಡಿದಿರುವುದು ಗಂಡು ಹೆಬ್ಟಾವಾಗಿದೆ. ಅದರ ಸಂತಾನೋತ್ಪತ್ತಿಗೆ ಹಾಗೂ ಆಹಾರಕ್ಕೆ ಅನುಕೂಲವಾಗುವ ಕಾಡಿಗೆ ಬಿಡಬೇಕು. ಮಾಗಡಿ ತಾಲೂಕಿನ ಚೀಲೂರು ¸ಬೆಟ್ಟದಲ್ಲಿ ಹೆಬ್ಟಾವಿನ ಸಂಖ್ಯೆ ಹೆಚ್ಚಿದೆ .ಹೆಬ್ಟಾವುಗಳ ಸಂತತಿ ಇಲ್ಲದ ಕಡೆಗೆ ಇದನ್ನು ಬಿಟ್ಟರೆ ಆಹಾರಕ್ಕೂ ಪರದಾಡುತ್ತದೆ. ಆಗ ದನ-ಕರು, ಕುರಿ ಮೇಕೆಗಳನ್ನುಹಿಡಿದು ನುಂಗುತ್ತದೆ. ಜನರು ಇದನ್ನು ಗಮನಿಸಿದರೆ ಹಾವನ್ನು ಹೊಡೆದು ಹಾಕದೆ ಬಿಡಲಾರರು. ಅದಕ್ಕಾಗಿ
ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಅದನ್ನು ಬಿಡುವುದು ನಮ್ಮಜವಾಬ್ದಾರಿ ಎಂದು ತಿಳಿಸಿದರು.
ಹಾವನ್ನು ಕಂಡಾಗ ದಯವಿಟ್ಟು ಅದನ್ನು ಹೊಡೆದು ಕೊಲ್ಲಬೇಡಿ. ಪೋನಾಯಿಸಿದರೆ (ಮೊ.ನಂ: 9902252765) ಸಾಕು ಬಂದು ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಅವರ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಡುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿದ್ದರಾಮಯ್ಯ ಯುವಕರ ಹಣೆಗೆ ತುಪ್ಪ ಸವರಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು

Congress Guarantee ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ!

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ…: ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
