ಹೆಚ್ಚಾಗುತ್ತಿದೆ ಲೈವ್ ಟ್ರೆಂಡ್
Team Udayavani, Jan 20, 2021, 4:12 PM IST
ಒಂದು ಸಮಯವಿತ್ತು, ಸಿನಿಮಾ ಮಂದಿ ತಮ್ಮ ಏನೇ ಅಪ್ ಡೇಟ್ಸ್ ಇದ್ದರೂ ನೇರವಾಗಿ ಮಾಧ್ಯಮದ ಮುಂದೆ ಬಂದು ಹಂಚಿಕೊಳ್ಳುತ್ತಿದ್ದರು. ಮುಖಾಮುಖೀ ಮಾತುಕತೆ ಮೂಲಕ ಹೆಚ್ಚೆಚ್ಚು ಆತ್ಮೀಯರಾಗುತ್ತಿದ್ದರು. ಆದರೆ, ಈಗ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಅದು ಸೋಶಿಯಲ್ ಮೀಡಿಯಾ ಲೈವ್.
ಬಹುತೇಕ ಸಿನಿಮಾದ ನಟ-ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ. ಜೊತೆಗೆ ತಮ್ಮ ಸಿನಿಮಾ ಅಪ್‌ಡೇಟ್ಸ್ ಗಳನ್ನು ಕೂಡಾ ಲೈವ್ ಮೂಲಕ ಹೇಳುವ ಅಭ್ಯಾಸ
ಬೆಳೆಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೊರೊನಾ ನಂತರ ಲೈವ್ ಅಪ್‌ಡೇಟ್ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡುವ ನಟರ ಸಂಖ್ಯೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಇತ್ತೀಚೆಗೆ ನಟ ದರ್ಶನ್, ಯಶ್, ಉಪೇಂದ್ರ, ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ ಹಾಗೂ ಧ್ರುವ ಸರ್ಜಾ ಸೋಶಿಯಲ್ ಮೀಡಿಯಾ ಮೂಲಕ ಲೈವ್ ಬಂದು ತಮ್ಮ ಸಿನಿಮಾ ಕುರಿತು ಮಾತನಾಡಿದರು. ಈಗ ಪ್ರಜ್ವಲ್ ದೇವರಾಜ್ ಅಂಡ್ ಟೀಂ ಸರದಿ.
ಹೌದು, ಪ್ರಜ್ವಲ್ ದೇವರಾಜ್ ಅಭಿನಯದ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರತಂಡ ತನ್ನ ಬಿಡುಗಡೆ ಕುರಿತಾದ ಅಪ್‌ಡೇಟ್ ನೀಡಲು ಇಂದು ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬರುತ್ತಿದೆ. ಎಲ್ಲಾ ಓಕೆ, ಈ ಲೈವ್ ಟ್ರೆಂಡ್ ಎಷ್ಟು ಪ್ಲಸ್ ಎಂದು ಕೇಳಬಹುದು. ಮುಖ್ಯವಾಗಿ ಇಲ್ಲಿ ಅಭಿಮಾನಿಗಳಿಗೆ ನೇರ ದರ್ಶನಕ್ಕೆ ಅವಕಾಶವಿರುವ ಜೊತೆಗೆ ಅಭಿಮಾನಿಗಳಿಗೆ ಪ್ರಶ್ನೋತ್ತರಕ್ಕೂ ಅವಕಾಶವಿರುತ್ತದೆ. ಇದು ಅಭಿಮಾನಿಗಳಿಗೂ ಖುಷಿ ಕೊಡುತ್ತದೆ. ಆ ಕಾರಣದಿಂದಲೇ ನಟರು ಹೆಚ್ಚೆಚ್ಚು ಲೈವ್ ಮೊರೆ ಹೋಗುತ್ತಾರೆ. ಲೈವ್ ಬರೋದನ್ನು ಮೊದಲೇ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳ ಕಾತರಕ್ಕೆ ಕಾರಣವಾಗುತ್ತಿದ್ದಾರೆ.
ಅಂದಹಾಗೆ, ಸೋಶಿಯಲ್ ಮೀಡಿಯಾದಲ್ಲಿ ಜೈಕಾರ ಹಾಕುವ ಮಂದಿಯೆಲ್ಲಾ ಸಿನಿಮಾಕ್ಕೆ ಬರುತ್ತಾರೆ ಎಂದು ಹೇಳುವಂತಿಲ್ಲ. ನಿಜವಾದ ಸಿನಿಮಾ ಪ್ರೇಮಿಗಳಷ್ಟೇ ಸಿನಿಮಾಗಳಿಗೆ ಬೆನ್ನೆಲುಬಾಗಿರುತ್ತಾರೆ ಎಂಬುದನ್ನು ಮರೆಯುವಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಜೂನಿಯರ್ ಮೇಲೆ ರ್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು
ಕಾರುಗಳ ಢಿಕ್ಕಿ : ಗುದ್ದಿದ ರಭಸಕ್ಕೆ ಕಳಚಿಹೋದ ಚಕ್ರ
ಮಂಗಳೂರು : ಗಡ್ಡ, ಮೀಸೆ ಬೋಳಿಸುವಂತೆ ರ್ಯಾಗಿಂಗ್ : ಆರೋಪಿಗಳ ಬಂಧನ
ಅಮೆರಿಕಾದ ಮೇಲೆ ಭಾರತೀಯ ಅಮೆರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್ | Udayavani
ಹೊಸ ಸೇರ್ಪಡೆ
ದಿನೇಶ್ ಕಲ್ಲಹಳ್ಳಿ ದಿಢೀರ್ ಠಾಣೆಗೆ ಹಾಜರು : ವಿಚಾರಣೆ ವೇಳೆ ಸಂತ್ರಸ್ತೆಯ ಪರಿಚಯವಿಲ್ಲವೆಂದ
ಪಂಚ ಸಮರಕ್ಕೆ ಕಳೆ : ಪ. ಬಂಗಾಲದಲ್ಲಿ ಟಿಎಂಸಿಯಿಂದ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಅಮೆರಿಕದಲ್ಲಿ ಭಾರತೀಯರ ಪಾರಮ್ಯ! ಅಧ್ಯಕ್ಷ ಜೋ ಬೈಡೆನ್ ಶ್ಲಾಘನೆ
ಬಾಲಚಂದ್ರ ಜಾರಕಿಹೊಳಿ ಪರ 20 ಶಾಸಕರು
ಗ್ರೇಟ್ ಗಾವಸ್ಕರ್ ಟೆಸ್ಟ್ 50 :Little Master ಟೆಸ್ಟ್ ಪ್ರವೇಶಕ್ಕೆ ತುಂಬಿತು 50 ವರ್ಷ