ಲಕ್ನೋ ತಂಡದ ಆಟಗಾರರ ಜರ್ಸಿಯಲ್ಲಿ ತಾಯಂದಿರ ಹೆಸರು
Team Udayavani, May 8, 2022, 7:00 AM IST
ಮುಂಬಯಿ: ಮೇ 8ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಸ್ಮರ ಣೀಯಗೊಳಿಸುವ ನಿಟ್ಟಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹೊಸ ಕ್ರಮಕ್ಕೆ ಮುಂದಾಗಿದೆ.
ಶನಿವಾರ ಲಕ್ನೋ ತಂಡವು ಕೋಲ್ಕತಾ ನೈಟ್ರೈಡರ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಆಟಗಾರರೆಲ್ಲರೂ ತಮ್ಮ ತಾಯಂದಿರ ಹೆಸರು ಇರುವ ಜರ್ಸಿ ಧರಿಸಿ ಆಡಿ ತಾಯಂದಿರ ಕೊಡುಗೆಯನ್ನು ಸ್ಮರಿಸಿದ್ದಾರೆ.
ಈ ಬಗ್ಗೆ ಅಧಿಕೃತ ಟ್ವಿಟರ್ನಲ್ಲಿ ವೀಡಿಯೋವೊಂದನ್ನು ಹರಿಯಬಿಡಲಾಗಿದೆ ಮಾತ್ರವಲ್ಲದೇ “ದಿಸ್ ವನ್ಸ್ ಫಾರ್ ಯು ಮಾ.’ ಎಂದು ಬರೆಯಲಾಗಿದೆ. ಇಲ್ಲಿರುವ ವೀಡಿಯೋದಲ್ಲಿ ತಾಯಂದಿರ ಹೆಸರು ಇರುವ ಜರ್ಸಿಯನ್ನು ತೋರಿಸಲಾಗಿದೆ.
ಈ ಋತುವಿನಲ್ಲಿ ಲಕ್ನೋ ಆಟಗಾರರು ತಿಳಿ ನೀಲಿ ಬಣ್ಣದ ಜರ್ಸಿಯನ್ನು ಧರಿಸುತ್ತಿದ್ದರು. ಆದರೆ ತಾಯಂದಿರ ದಿನದ ಹಿನ್ನೆಲೆಯಲ್ಲಿ ಅವರ ಜರ್ಸಿಯ ಬಣ್ಣ ಬದಲಾಗಿದೆ. ಕೆಕೆಆರ್ ವಿರುದ್ದದ ಪಂದ್ಯದ ವೇಳೆ ತಾಯಂದಿರ ಹೆಸರು ಇರುವ ಮತ್ತು ಕಿತ್ತಳೆ ಬಣ್ಣದಲ್ಲಿ ಸಂಖ್ಯೆ ನಮೂದಿಸಿರುವ ಬೂದು ಬಣ್ಣದ ಜರ್ಸಿಯಲ್ಲಿ ಆಟಗಾರರು ಕಾಣಿಸಿಕೊಂಡಿದ್ದಾರೆ.
“This one’s for you, Maa.”
Now THAT’s how you prepare for Mother’s Day – the #SuperGiant way! #AbApniBaariHai?#IPL2022 ? #bhaukaalmachadenge #lsg #LucknowSuperGiants #T20 #TataIPL #Lucknow #UttarPradesh #LSG2022 pic.twitter.com/H4CNkJZ6LF— Lucknow Super Giants (@LucknowIPL) May 7, 2022