Madrid: ಕ್ಲಬ್ನಲ್ಲಿ ಬೆಂಕಿ: 13 ಸಾವು
Team Udayavani, Oct 1, 2023, 10:11 PM IST
ಮ್ಯಾಡ್ರಿಡ್: ಹುಟ್ಟುಹಬ್ಬದ ಆಚರಣೆಗೆಂದು ತೆರಳಿದ್ದವರು ಬೆಂಕಿಗೆ ಆಹುತಿಯಾಗಿರುವ ದುರಂತ ಘಟನೆ ಸ್ಪೇನ್ನ ಮುರ್ಸಿಯಾ ನಗರದಲ್ಲಿ ವರದಿಯಾಗಿದ್ದು, ಅವಘಡದಲ್ಲಿ 13 ಮಂದಿ ಮೃತಪಟ್ಟಿದ್ದಾರೆಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. “ಥಿಯೇಟರ್’ ಹೆಸರಿನ 2 ಅಂತಸ್ತಿನ ನೈಟ್ಕ್ಲಬ್ನಲ್ಲಿ ಶನಿವಾರ ತಡರಾತ್ರಿ ಬರ್ತ್ ಡೇ ಪಾರ್ಟಿ ಇತ್ತು.
ಭಾನುವಾರದ ಬೆಳಗ್ಗೆವರೆಗೂ ಪಾರ್ಟಿ ಮುಂದುವರಿದಿದೆ. ಇದೇ ವೇಳೆ ಭಾನುವಾರ ಬೆಳಗ್ಗೆ 6 ಗಂಟೆಗೆ ಅಚಾನಕ್ ಬೆಂಕಿ ಕಾಣಿಸಿಕೊಂಡು, ಇಡೀ ಕಟ್ಟಡ ವ್ಯಾಪಿಸಿ ಹೊತ್ತಿ ಉರಿದಿದೆ. ಘಟನೆಯಲ್ಲಿ 13 ಮಂದಿ ಮೃತಪಟ್ಟು, 4 ಮಂದಿ ಗಾಯಗೊಂಡಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕದಳಗಳು ಸತತ ಪ್ರಯತ್ನ ಪಟ್ಟು ಬಳಿಕ ಉಳಿದವರನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ.