Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

"ಶಾಂತನು ಶೆಟ್ಟಿ ಆರೋಗ್ಯ ಕಾರ್ಡ್‌' ಉದ್ಘಾಟನೆ

Team Udayavani, May 27, 2024, 12:26 AM IST

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

ಮಣಿಪಾಲ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಮೌಲ್ಯಯುತ ಕಾರ್ಯಗಳಿಗೆ ಮಾಹೆ ವಿಶ್ವವಿದ್ಯಾನಿಲಯ ನಿರಂತರ ಬೆಂಬಲ ನೀಡುತ್ತದೆ ಎಂದು ವಿ.ವಿ.ಯ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಹೇಳಿದರು.

ಮಣಿಪಾಲದ ಶಾಂತನು ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಹಾಗೂ ಮಾಹೆ ವಿ.ವಿ.ಯ ಜಂಟಿ ಆಶ್ರಯದಲ್ಲಿ ರವಿವಾರ ಪರೀಕ ಶ್ರೀ ಶ್ರೀನಿವಾಸ ಪ್ರಸನ್ನ, ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಜರಗಿದ ಆತ್ರಾಡಿ-ಪರೀಕ ಗ್ರಾಮಸ್ಥರಿಗೆ “ಶಾಂತನು ಶೆಟ್ಟಿ ಆರೋಗ್ಯ ಕಾರ್ಡ್‌’ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಮೌಲ್ಯ, ಅಶಕ್ತರಿಗೆ ನೆರವು, ಆರೋಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಸಹಕಾರ ಮನೋಭಾವ ಆಶಯವನ್ನಿಟ್ಟು ರೂಪುಗೊಂಡ ಶಾಂತನು ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಕಾರ್ಯ ಮಾದರಿಯಾಗಿದೆ. ಟ್ರಸ್ಟ್‌ ಮೂಲಕ ತಮ್ಮ ಊರಿನ ಜನರಿಗೆ ಆರೋಗ್ಯದ ನೆರವು ನೀಡುವ ಮೂಲಕ ಸೋಮನಾಥ್‌ ಶೆಟ್ಟಿ, ನಟರಾಜ್‌ ಹೆಗ್ಡೆ ನೇತೃತ್ವದ ಈ ಟ್ರಸ್ಟ್‌ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಇಲ್ಲಿನ ರೋಗಿಗಳಿಗೆ ಟ್ರಸ್ಟ್‌ ಮತ್ತು ಮಾಹೆ ಮ್ಯಾಚಿಂಗ್‌ ಗ್ರ್ಯಾಂಟ್‌ ಮೂಲಕ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರೆಯಲಿದೆ ಎಂದರು.

ಶಾಂತನು ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಸೋಮನಾಥ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್‌, ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ, ಚೀಫ್ ಆಪರೇಟಿಂಗ್‌ ಆಫಿಸರ್‌ ಡಾ| ಆನಂದ್‌ ವೇಣುಗೋಪಾಲ್‌, ಕೆಎಂಸಿ ಡೀನ್‌ ಡಾ| ಪದ್ಮರಾಜ ಹೆಗ್ಡೆ, ಉಡುಪಿ ಟಿಎಂಎ ಪೈ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ್‌ ಉಮಾಕಾಂತ್‌, ಪರೀಕ ಸೌಖ್ಯವನದ ವ್ಯವಸ್ಥಾಪಕ ಸೀತಾರಾಮ ತೋಳ್ಪಡಿತ್ತಾಯ, ಟ್ರಸ್ಟಿಗಳಾದ ಚಿತ್ರಾ ಸೋಮನಾಥ್‌ ಶೆಟ್ಟಿ, ಗೋಪಿನಾಥ್‌ ಶೆಟ್ಟಿ, ಅಶ್ವಿ‌ನ್‌ ಶೆಟ್ಟಿ, ರಾಜಾರಾಮ್‌ ಹೆಗ್ಡೆ ಉಪಸ್ಥಿತರಿದ್ದರು. ಜಿತೇಂದ್ರ ಹೆಗ್ಡೆ ವಂದಿಸಿ, ಶಿವಪ್ರಸಾದ್‌ ಶೆಟ್ಟಿ ನಿರೂಪಿಸಿದರು.

610 ಕುಟುಂಬಗಳಿಗೆ ನೆರವು
ಟ್ರಸ್ಟ್‌ನ ಕಾರ್ಯದರ್ಶಿ ನಟರಾಜ್‌ ಹೆಗ್ಡೆ ಪ್ರಸ್ತಾವನೆಗೈದು, ಆತ್ರಾಡಿ-ಪರೀಕ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ 610 ಕುಟುಂಬಗಳಿಗೆ “ಶಾಂತನು ಶೆಟ್ಟಿ ಆರೋಗ್ಯ ಕಾರ್ಡ್‌’ ನೀಡಲಾಗುತ್ತಿದೆ. ಟ್ರಸ್ಟ್‌ ವತಿಯಿಂದ 1 ಕೋ. ರೂ. ನೀಡಲಾಗಿದ್ದು, ಮಾಹೆ 1 ಕೋ.ರೂ. ಮ್ಯಾಚಿಂಗ್‌ ಗ್ರ್ಯಾಂಟ್‌ ಕಲ್ಪಿಸಿದೆ. ಈ 2 ಕೋ.ರೂ. ಮೊತ್ತದಿಂದ ಬರುವ ಬಡ್ಡಿಯನ್ನು ಕಾರ್ಡ್‌ ಹೊಂದಿರುವ ಕುಟುಂಬದ ಸದಸ್ಯರಿಗೆ ರಿಯಾಯಿತಿಯಲ್ಲಿ ಚಿಕಿತ್ಸೆ ನೀಡಲು ಬಳಸ‌ಲಾಗುತ್ತದೆ. ಮುಂದಿನ ಹಂತದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಸಲಾಗುವುದು ಎಂದರು.

ಟಾಪ್ ನ್ಯೂಸ್

crime (2)

Loan ವ್ಯಾಜ್ಯ: ತೆಲಂಗಾಣದಲ್ಲಿ ಆದಿವಾಸಿ ಮಹಿಳೆ ಮೇಲೆ ಹಲ್ಲೆ

1-saddsad

Ram Setu ಚಿತ್ರ ಸೆರೆಹಿಡಿದ ಯುರೋಪಿಯನ್‌ ಉಪಗ್ರಹ

pinarayi

Kerala ಹೆಸರು ಕೇರಳಂ ಎಂದು ಬದಲಾಯಿಸಲು ವಿಧಾನಸಭೆ ಸಮ್ಮತಿ

ಕನ್ನಡದ ಶಾಲು ಧರಿಸಿ ಗಮನ ಸೆಳೆದ ಕೋಟ ಶ್ರೀನಿವಾಸ ಪೂಜಾರಿ

ಕನ್ನಡದ ಶಾಲು ಧರಿಸಿ ಗಮನ ಸೆಳೆದ ಕೋಟ ಶ್ರೀನಿವಾಸ ಪೂಜಾರಿ

tree

Belthangady ರಸ್ತೆಗೆ ಬಿದ್ದ ಮರ; ವಾಹನಗಳಿಗೆ ಹಾನಿ

ಓವರ್‌ ಡ್ರಾಫ್ಟ್‌ ಗುರಿ ಸಾಧನೆಯಲ್ಲಿ ಹಿನ್ನಡೆ: ಜಿ.ಪಂ.ಸಿಇಒ ಅಸಮಾಧಾನ

ಓವರ್‌ ಡ್ರಾಫ್ಟ್‌ ಗುರಿ ಸಾಧನೆಯಲ್ಲಿ ಹಿನ್ನಡೆ: ಜಿ.ಪಂ.ಸಿಇಒ ಅಸಮಾಧಾನ

ರಾಜ್ಯ ಧಾರ್ಮಿಕ ಪರಿಷತ್‌ ಸಭೆ: ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ರಚನೆಗೆ ನಿರ್ಧಾರರಾಜ್ಯ ಧಾರ್ಮಿಕ ಪರಿಷತ್‌ ಸಭೆ: ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ರಚನೆಗೆ ನಿರ್ಧಾರ

ರಾಜ್ಯ ಧಾರ್ಮಿಕ ಪರಿಷತ್‌ ಸಭೆ: ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ರಚನೆಗೆ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡದ ಶಾಲು ಧರಿಸಿ ಗಮನ ಸೆಳೆದ ಕೋಟ ಶ್ರೀನಿವಾಸ ಪೂಜಾರಿ

ಕನ್ನಡದ ಶಾಲು ಧರಿಸಿ ಗಮನ ಸೆಳೆದ ಕೋಟ ಶ್ರೀನಿವಾಸ ಪೂಜಾರಿ

ಅಂಬಾಗಿಲು-ಪೆರಂಪಳ್ಳಿ ಕಮರಿಗೆ ಉರುಳಿದ ಕಾರು; ತಪ್ಪಿದ ಭಾರೀ ಅನಾಹುತ

Manipal ಅಂಬಾಗಿಲು-ಪೆರಂಪಳ್ಳಿ ಕಮರಿಗೆ ಉರುಳಿದ ಕಾರು; ತಪ್ಪಿದ ಭಾರೀ ಅನಾಹುತ

Frog ಶಬ್ದ ಗ್ರಹಿಸಲು ಎಐ ಬಳಕೆ: ಕಾರ್ಕಳ ಪಶ್ಚಿಮಘಟ್ಟ ತಪ್ಪಲಿನಲ್ಲಿ ಕಪ್ಪೆ ಸಂಶೋಧನೆ

Frog ಶಬ್ದ ಗ್ರಹಿಸಲು ಎಐ ಬಳಕೆ: ಕಾರ್ಕಳ ಪಶ್ಚಿಮಘಟ್ಟ ತಪ್ಪಲಿನಲ್ಲಿ ಕಪ್ಪೆ ಸಂಶೋಧನೆ

Udupi ಮಲ್ಪೆಗೆ ಹೊರರಾಜ್ಯದ ಮೀನು ಆವಕ : ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

Udupi ಮಲ್ಪೆಗೆ ಹೊರರಾಜ್ಯದ ಮೀನು ಆವಕ : ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

Mumbai ಪೊಲೀಸ್‌ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

Mumbai ಪೊಲೀಸ್‌ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

crime (2)

Loan ವ್ಯಾಜ್ಯ: ತೆಲಂಗಾಣದಲ್ಲಿ ಆದಿವಾಸಿ ಮಹಿಳೆ ಮೇಲೆ ಹಲ್ಲೆ

1-saddsad

Ram Setu ಚಿತ್ರ ಸೆರೆಹಿಡಿದ ಯುರೋಪಿಯನ್‌ ಉಪಗ್ರಹ

police USA

Russia; ಚರ್ಚ್‌ಗೆ ದಾಳಿ: 19 ಜನ ಸಾವು, 5 ಉಗ್ರರ ಹತ್ಯೆ

robbers

ಪ್ರವಾದಿ ನಿಂದನೆ: ಪಾಕ್‌ನಲ್ಲಿ ವ್ಯಕ್ತಿಯ ಕೊಂದ ಬಾಲಕ!

congress

ತೆಲಂಗಾಣ; ಬಿಆರ್‌ಎಸ್‌ನ 5ನೇ ಶಾಸಕ ಕಾಂಗ್ರೆಸ್‌ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.