Mangaluru: ಮಳಿಗೆಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ. ನಷ್ಟ
Team Udayavani, May 16, 2023, 7:29 AM IST
ಮಂಗಳೂರು: ಮಳಿಗೆಯೊಂದು ಬೆಂಕಿಗಾಹುತಿಯಾದ ಘಟನೆ ನಗರದ ಬೆಂಗ್ರೆಯಲ್ಲಿ ಮೇ.15ರ ರಾತ್ರಿ ಸುಮಾರು 2 ಗಂಟೆಗೆ ಸಂಭವಿಸಿದೆ.
ಗೀತಾ ಎಂಬವರಿಗೆ ಸೇರಿದ ನಗರದ ಮೊಗವೀರ ಸ್ಟೋರ್ ಬೆಂಕಿಗಾಹುತಿಯಾಗಿ ಸುಮಾರು 8 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಅಗ್ನಿಶಾಮಕ ದಳದ ಸಹಾಯದಿಂದ ಬೆಂಕಿ ನಂದಿಸಲಾಗಿದೆ.