
ಪ್ರಧಾನಿ ಮೋದಿ ಬೆಂಗಾವಲು ಭದ್ರತೆಗೆ ಮಂಗಳೂರು ಮೂಲದ ಕಶ್ಯಪ್ ಅಧಿಕಾರಿ
Team Udayavani, Jan 29, 2023, 11:50 AM IST

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಮಂಗಳೂರಿನ ಮಾಜಿ ಮೇಯರ್ ಒಬ್ಬರ ಪುತ್ರ ಬೆಂಗಾವಲು ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಅವರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು..ಪ್ರಧಾನಿ ಮೋದಿ ಅವರ ಬೆಂಗಾವಲು ಅಧಿಕಾರಿಯಾಗಿ ಮಂಗಳೂರು ಮೂಲದ ಕಾರ್ತಿಕ್ ಕಶ್ಯಪ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಶ್ಯಪ್ ಪ್ರಧಾನಿಯವರ ಭದ್ರತೆಯ ಹೊಣೆ ಹೊತ್ತಿದ್ದರು.
ಕಾರ್ತಿಕ್ ಕಶ್ಯಪ್ ಅವರು ಮಂಗಳೂರು ಮಾಜಿ ಮೇಯರ್ ಶಂಕರ್ ಭಟ್ ಅವರ ಪುತ್ರ. ಇವರು ಮಂಗಳೂರಿನ ಚಿನ್ಮಯ್ ಶಾಲೆ, ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದು, ನಂತರ ನಿಟ್ಟೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ದೆಹಲಿಯಲ್ಲಿ ಯುಪಿಎಸ್ಸಿ ತರಬೇತಿ ಪಡೆದಿದ್ದರು.
ಯುಪಿಎಸ್ಸಿಯಲ್ಲಿ ಯಶಸ್ಸು ಕಂಡ ಕಶ್ಯಪ್ ಅವರು ಐಪಿಎಸ್ ಆಗಿ. ಗುಜರಾತ್ ನಲ್ಲಿ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ತಮ್ಮ ಬ್ಯಾಚ್ ಮೇಟ್ ಆಗಿದ್ದ ಪ್ರಿಯಾಂಕ್ ಅವರನ್ನು ವರಿಸಿದ್ದರು. ಕಶ್ಯಪ್ ಮತ್ತು ಪ್ರಿಯಾಂಕಾ ದಂಪತಿ ಗೋವಾದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

45 Years Together; ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಐಪಿಎಲ್ ಫೈನಲ್ ಗೂ ಮೊದಲೇ ಚೆನ್ನೈ ಅಭಿಮಾನಿಗಳಿಗೆ ಶಾಕ್: ನಿವೃತ್ತಿ ಘೋಷಿಸಿದ ರಾಯುಡು

New Parliament ಅಗತ್ಯವೇನು?: ಕುಸ್ತಿಪಟುಗಳ ವಿಚಾರದಲ್ಲಿ ಸಿದ್ದರಾಮಯ್ಯ ಆಕ್ರೋಶ

IPL 2023: ಫೈನಲ್ ಗೆದ್ದ ತಂಡಕ್ಕೆ ಸಿಗುವ ಬಹುಮಾನ ಮೊತ್ತ ಎಷ್ಟು ಗೊತ್ತಾ?

Didi ಆರೋಪ ಹೊರಿಸುವಲ್ಲಿ ‘ಮಾಸ್ಟರ್’: ಕಾಂಗ್ರೆಸ್ ತಿರುಗೇಟು