
NICE: ನೈಸ್ ಸಂತ್ರಸ್ತರಿಗೆ ಭೂಮಿ ಮರಳಿಸಲು ಬೃಹತ್ ಹೋರಾಟ:ಕುಮಾರಸ್ವಾಮಿ
Team Udayavani, Sep 27, 2023, 10:52 PM IST

ಬೆಂಗಳೂರು: ನೈಸ್ ಯೋಜನೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಬೃಹತ್ ಹೋರಾಟ ನಡೆಸುವ ಅಗತ್ಯವಿದ್ದು, ಒಂದು ಲಕ್ಷಕ್ಕಿಂತ ಹೆಚ್ಚು ಜನರನ್ನು ಸೇರಿಸಿ ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿ ನೀಡಿರುವ ವರದಿಯನ್ನು ಜಾರಿಗೊಳಿಸಲು ಸರಕಾರಕ್ಕೆ ಗಡುವು ನೀಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ (ಕೆಪಿಆರ್‌ಎಸ್) ಮತ್ತು ನೈಸ್ ಸಂತ್ರಸ್ಥ ರೈತರ ಹೋರಾಟ ಸಮಿತಿಯು ನೈಸ್ ಕಂಪೆನಿ ದೌರ್ಜನ್ಯ, ಭ್ರಷ್ಟಾಚಾರದ ವಿರುದ್ಧ ಹಾಗೂ ರೈತರ ಭೂಮಿಯನ್ನು ಉಳಿಸಲು ಆಗ್ರಹಿಸಿ ಆಯೋಜಿಸಿದ್ದ ರಾಜ್ಯಮಟ್ಟದ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನೈಸ್ ಅಕ್ರಮದ ವಿರುದ್ಧ ದೊಡ್ಡ ಮಟ್ಟದ ಪಕ್ಷಾತೀತ ಹೋರಾಟ ನಡೆಯುವ ಅಗತ್ಯವಿದೆ. ಇಂತಹ ಹೋರಾಟವನ್ನು ಜೆಡಿಎಸ್ ಸಂಪೂರ್ಣವಾಗಿ ಬೆಂಬಲಿಸಲಿದೆ. ನೈಸ್ ಯೋಜನೆಗಾಗಿ ಅಕ್ರಮವಾಗಿ ಭೂಮಿ ಕಳೆದುಕೊಂಡ ರೈತರ ಜಮೀನನ್ನು ಮತ್ತೆ ಅವರಿಗೆ ಹಿಂತಿರುಗಿಸುವ ತನಕ ಹೋರಾಟ ಮುಂದುವರಿಯಬೇಕು. ಸದ್ಯ ಕಾವೇರಿ ವಿವಾದದ ಬಿಸಿ ಇದ್ದು ಈ ವಿವಾದ ತಣ್ಣಗಾದ ಬಳಿಕ ದೊಡ್ಡದೊಂದು ಹೋರಾಟ ರೂಪಿಸೋಣ ಎಂದು ಕುಮಾರಸ್ವಾಮಿ ಹೇಳಿದರು.
ಅಕ್ರಮದ ಕಡತಗಳಿವೆ
ನಾನು 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನೈಸ್ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದೆ. ಆದರೆ ಆಗ ನಮ್ಮೊಂದಿಗಿದ್ದ ಮೈತ್ರಿ ಪಕ್ಷ ಅದನ್ನು ವಿರೋಧಿಸಿ, ಸಚಿವ ಸಂಪುಟ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದಿತ್ತು. 2018ರಲ್ಲಿ ನಾನು ಮತ್ತೆ ಮುಖ್ಯಮಂತ್ರಿಯಾಗಿದ್ದರೂ ನನ್ನನ್ನು ಕ್ಲರ್ಕ್‌ನಂತೆ ಇಟ್ಟುಕೊಂಡಿದ್ದರು. ಇದರಿಂದಾಗಿ ನೈಸ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ನೈಸ್ ಅಕ್ರಮದ ಬಗ್ಗೆ ಮಾತನಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ಸಮಯ ಸಿಗಲಿಲ್ಲ. ನನ್ನ ಬಳಿ ನೈಸ್ ಅಕ್ರಮದ ಕಡತಗಳಿವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಪ್ರಾಣವನ್ನು ಒತ್ತೆಯಿಟ್ಟಾದರೂ ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡವರಿಗೆ ಭೂಮಿ ಮರಳಿಸಿ ಕೊಡುವುದಾಗಿ ಈಗಾಗಲೇ ಪ್ರಕಟಿಸಿದ್ದು ಅದರಂತೆ ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದರು.
ನೈಸ್ ಅಕ್ರಮ: ಪ್ರಧಾನಿಗೆ ದೂರು
ನೈಸ್ ಅಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ದಾಖಲೆಗಳನ್ನು ನೀಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈಗಾಗಲೇ ಗೃಹ ಸಚಿವ ಅಮಿತ್ ಶಾ ಅವರ ಜತೆ ನೈಸ್ ಅಕ್ರಮದ ಬಗ್ಗೆ ಚರ್ಚೆ ಮಾಡಿದ್ದೇನೆ. ದಾಖಲೆಗಳನ್ನು ಕೊಡುವಂತೆ ಅವರು ಹೇಳಿದ್ದಾರೆ. ನೈಸ್ ವರದಿ ಜಾರಿ ಮಾಡಿದರೆ ಸರರಕ್ಕೆ 2ರಿಂದ 3 ಲಕ್ಷ ಕೋಟಿ ರೂ. ಹಣ ಸಿಗಲಿದೆ. ಗ್ಯಾರಂಟಿ ಯೋಜನೆಗೆ ಹಣ ಬೇರೆ ಕಡೆ ಸಂಗ್ರಹ ಮಾಡೋ ಅವಶ್ಯಕತೆ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ISIS ನಂಟಿರುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ: ಯತ್ನಾಳ್ ಆರೋಪ

RSS ವಿರುದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪ: ಸ್ಪಷ್ಟನೆ ನೀಡಿದ ಸಂಘ

BSY: ಅಲ್ಪಸಂಖ್ಯಾತರ ಓಲೈಕೆಯಿಂದ ಗೆಲ್ಲಬಹುದೆಂಬ ಕಾಂಗ್ರೆಸ್ ಲೆಕ್ಕಾಚಾರ ಕೈಗೂಡದು: ಬಿಎಸ್ ವೈ

Elephants: 60 ವರ್ಷ ಮೀರಿದ ಆನೆಗಳನ್ನು ಕಾರ್ಯಾಚರಣೆಗೆ ಬಳಸಬೇಡಿ

Elephnat Arjuna: ಅರ್ಜುನ ಆನೆ ಮುಂದೆ ಕಾವಾಡಿಗರ ಕಣ್ಣೀರು