
AI News: ಮಲೇರಿಯಾ ಪತ್ತೆಗೆ ಮೈಕ್ರೋಸ್ಕೋಪ್
Team Udayavani, Sep 14, 2023, 8:46 PM IST

ಒಡಿಶಾದ ಮಾಲ್ಕನ್‌ಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಮೈಕ್ರೋಸ್ಕೋಪ್ ಅನ್ನು ಅಳವಡಿಸಲಾಗಿದೆ. ಅದರ ಸಹಾಯದಿಂದ ಮಲೇರಿಯಾವನ್ನು ಸಮರ್ಪಕವಾಗಿ ಪತ್ತೆ ಹಚ್ಚಲಾಗುತ್ತಿದೆ.
ಮುಂಬೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನೆರವಿನಿಂದ ಸ್ಥಾಪನೆಗೊಂಡಿರುವ ಸ್ಟಾರ್ಟ್‌ಅಪ್‌ನ ತಾಂತ್ರಿಕ ನೆರವಿನಿಂದ ಅದನ್ನು ಅಳವಡಿಸಲಾಗಿದೆ. ಪಿ. ಫಾಲ್ಸಿಪಾರಮ್, ಪಿ. ವಿವಾಕ್ಸ್ ಎಂಬ ಎರಡು ಮಲೇರಿಯಾ ವಿಧಗಳನ್ನು ಸೂಕ್ತವಾಗಿ ವರ್ಗೀಕರಿಸಿ, ಕಂಡುಹಿಡಿಯಲು ಇದು ನೆರವಾಗುತ್ತಿದೆ.
ಟಾಪ್ ನ್ಯೂಸ್
