ಸುಮಲತಾ ಬಿಜೆಪಿಗೆ ಬಂದರೆ ಲಾಭ: ಸಚಿವ ಸುಧಾಕರ್
Team Udayavani, Jan 31, 2023, 8:50 PM IST
ಚಿಕ್ಕಬಳ್ಳಾಪುರ: ಮಂಡ್ಯ ಸಂಸದೆ ಹಾಗೂ ನಟ ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಬಿಜೆಪಿಗೆ ಬರುವುದಾದರೆ ಮಂಡ್ಯದಲ್ಲಿ ಪಕ್ಷಕ್ಕೆ ಬಲ ಬರಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಬರುವುದರಿಂದ ಸುಮಲತಾ ಅವರಿಗೂ ಒಳ್ಳೆಯದಾಗಲಿದೆ.
ಹಿರಿಯ ನಾಯಕರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಆರ್.ಅಶೋಕ್ ಅವರು ಸುಮಲತಾ ಅವರೊಂದಿಗೆ ಸಂಪರ್ಕದಲ್ಲಿ ಇರಬಹುದು ಎಂದು ಹೇಳಿದರು.