MIT: ಮಾ.27ರಿಂದ 31ರವರೆಗೆ ಸೋಲಾರ್‌ ಎಲೆಕ್ಟ್ರಿಕ್‌ ವೆಹಿಕಲ್‌ ಚಾಂಪಿಯನ್‌ಶಿಪ್‌


Team Udayavani, Mar 27, 2024, 4:24 PM IST

MIT: ಮಾ.27ರಿಂದ 31ರವರೆಗೆ ಸೋಲಾರ್‌ ಎಲೆಕ್ಟ್ರಿಕ್‌ ವೆಹಿಕಲ್‌ ಚಾಂಪಿಯನ್‌ಶಿಪ್‌

ಉಡುಪಿ: ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯು (ಎಂಐಟಿ) ಕೊಯಮತ್ತೂರು ಸೊಸೈಟಿ ಆಫ್ ರೇಸಿಂಗ್‌ ಮೈಂಡ್ಸ್‌ (ಸಿಎಸ್‌ಆರ್‌ಎಂ) ಸಹಭಾಗಿತ್ವದೊಂದಿಗೆ ಸೌರ ವಿದ್ಯುತ್‌ ವಾಹನ ಚಾಂಪಿಯನ್‌ಶಿಪ್‌ – 2024 (ಎಸ್‌ ಇವಿಸಿ-2024) ಮಾ.27ರಿಂದ 31 ರವರೆಗೆ ನಡೆಯಲಿದೆ. ಮಾ.28ಕ್ಕೆ ಉದ್ಘಾಟನೆ ನಡೆಯಲಿದೆ ಎಂದು ಎಂಐಟಿ ನಿರ್ದೇಶಕ ಕೆ| ಡಾ| ಅನಿಲ್‌ ರಾಣ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಎಂಐಟಿಯ ವೈಮಾನಿಕ ಮತ್ತು ಮೋಟಾರು ತಂತ್ರಜ್ಞಾನ ಮತ್ತು ಯಂತ್ರ-ವಿದ್ಯುತ್‌ ವಿಭಾಗಗಳು ಈ ಚಾಂಪಿಯನ್‌ಶಿಪ್‌
ಅನ್ನು ಜಂಟಿಯಾಗಿ ಆಯೋಜಿಸುತ್ತಿವೆ. ಈ ಕಾರ್ಯಕ್ರಮವು ಸುಸ್ಥಿರ ಸಂಚಾರ ಕಾರ್ಯಯೋಜನೆಗೆ ಸಂಬಂಧಿಸಿ
ಪ್ರಮುಖ ಹೆಜ್ಜೆಗುರುತಾಗಿದೆ ಎಂದರು.

ಎಸ್‌ಇವಿಸಿ-2024 ಕಾರ್ಯಕ್ರಮವು ದೇಶಾದ್ಯಂತದ ಉತ್ಸಾಹಿ ಎಂಜಿನಿಯರ್‌ಗಳಿಗೆ, ನಾವೀನ್ಯದ ಸಂಶೋಧಕರಿಗೆ, ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ವಾಹನ ವಿನ್ಯಾಸ ವಿಭಾಗದಲ್ಲಿ ಕೌಶಲ ಪ್ರದರ್ಶನಕ್ಕೆ ಮತ್ತು ಸೌರಶಕ್ತಿ ಆಧಾರಿತ ವಿದ್ಯುತ್‌ ವಾಹನಗಳ ತಯಾರಿಗೆ ಅವಕಾಶ ನೀಡಲಿದೆ. ಮಣಿಪಾಲ ವಿ.ವಿ.ಆವರಣದಲ್ಲಿ ಸಂಶೋಧನ ನಿರತ ಎಂಜಿನಿಯರ್‌ಗಳ ಸೃಷ್ಟಿಶೀಲತೆ, ಪರಿಶ್ರಮಕ್ಕೆ ಈ ಮೂಲಕ ವೇದಿಕೆ ಲಭ್ಯವಾಗಲಿದೆ.

ಭಾರತದ ವಿವಿಧ ಕಡೆಗಳ ಸುಮಾರು 31 ತಂಡಗಳು ಭಾಗವಹಿಸಲು ಹೆಸರು ನೋಂದಣಿ ಮಾಡಿಸಿಕೊಂಡಿವೆ. ಅವುಗಳಲ್ಲಿ 14 ತಂಡಗಳು ಅಂತಿಮ ಬಹುನಿರೀಕ್ಷಿತ ಸುತ್ತಿನಲ್ಲಿ ಭಾಗಿಯಾಗುತ್ತಿವೆ. ರಾಷ್ಟ್ರಾದ್ಯಂತದ 450 ಉತ್ಸಾಹಿಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ ಎಂದರು.

ಎಸ್‌ಇವಿಸಿ-2024 ಪರಿಸರ ಸಹ್ಯವಾದ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಪೂರಕವಾದ ಸ್ಪರ್ಧೆ ಮಾತ್ರವಲ್ಲದೆ ಇದು ವಿದ್ಯಾರ್ಥಿಗಳು,
ಕೈಗಾರಿಕ ತಜ್ಞರು, ಶಿಕ್ಷಣತಜ್ಞರ ನಡುವೆ ಅನುಭವಗಳ ಜ್ಞಾನ ವಿನಿಮಯವನ್ನು ಉತ್ತೇಜಿಸಲಿದೆ. ನವೀಕರಿಸಬಹುದಾದ
ಇಂಧನ ಮತ್ತು ಸುಸ್ಥಿರ ಸಾರಿಗೆ ಕಾರ್ಯಯೋಜನೆಗಳನ್ನು ಉತ್ತೇಜಿಸಿರುವುದರ ಮೂಲಕ ಎಂಐಟಿಯು ಮುಂದಿನ ತಲೆಮಾರಿನ ತಂತ್ರಜ್ಞಾನಿಗಳು ಮತ್ತು ನವೀನ ಸಂಶೋಧಕರಲ್ಲಿ ಧನಾತ್ಮಕ ಪ್ರಭಾವ ಬೀರುವ ಆಶಯ ಹೊಂದಲಿದೆ ಎಂದರು. ಹಸುರು ಮತ್ತು ಹೆಚ್ಚು ಪರಿಸರ ಪ್ರಜ್ಞೆಯ ಭವಿಷ್ಯದತ್ತ ಪ್ರಗತಿಯನ್ನು ವೇಗವರ್ಧಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ಚೆಫ್ಸ್ ಟಚ್‌, ಅಂಪೇರ್‌, ಪ್ರಗ್ನಾ ಮೈಕ್ರೋಡಿಸೈನ್ಸ್‌ ಸಂಸ್ಥೆಗಳ‌ ಬೆಂಬಲದೊಂದಿಗೆ ಎಸ್‌ಇವಿಸಿ-2024ಯ ಆಯೋಜನೆ
ಸಾಧ್ಯವಾಗಲಿದೆ. ಹಸುರು, ಸ್ವತ್ಛ ಭವಿಷ್ಯಕ್ಕಾಗಿ ಆಯೋಜಿಸುತ್ತಿರುವ ಸೌರ ವಿದ್ಯುತ್‌ ವಾಹನ ಚಾಂಪಿಯನ್‌ಶಿಪ್‌-2024ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.

ವಿಭಿನ್ನ ರೈಡ್‌, ರ್ಯಾಲಿ
ನೀರಿನ ಹೊಂಡಗಳು, ಮಳೆಯ ನಡುವೆ, ಸೂರ್ಯನ ಬೆಳಕು ಇಲ್ಲದಾಗ, ಕಾರನ್ನು ಬೇರೆ ಬೇರೆ ಕಡೆಗೆ ತಿರುಗಿಸುವುದು, ಒಮ್ಮೆ ಚಾರ್ಜ್‌ ಮಾಡಿದ ಬಳಿಕ ಮುಗಿಯುವವರೆಗೆ ಸಂಚರಿಸುವುದು ಹೀಗೆ ಹಲವಾರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಎಂಐಟಿ ಕ್ರಿಕೆಟ್‌ ಮೈದಾನ, ಎಂಎಸ್‌ಎಪಿ ಪಾರ್ಕಿಂಗ್‌ ಪ್ರದೇಶ, ಐಆರ್‌ಸಿ ಮೈದಾನ, ಎಂಐಟಿ ಸ್ಟೂಡೆಂಟ್ಸ್‌ ಪ್ಲಾಝಾದಲ್ಲಿ ಸ್ಪರ್ಧೆಗಳು ನಡೆಯಲಿವೆ. ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಣಿಪಾಲದಿಂದ ಕರಾವಳಿ ಬೈಪಾಸ್‌ವರೆಗೆ ಎಲೆಕ್ಟ್ರಿಕ್‌ ವಾಹನಗಳ ರ್ಯಾಲಿಯು ಮಾ.31ರಂದು ಬೆಳಗ್ಗೆ 8ರಿಂದ 9ರವರೆಗೆ ನಡೆಯಲಿದೆ ಎಂದರು.

ಎಂಐಟಿ ಜಂಟಿ ನಿರ್ದೇಶಕ ಸೋಮಶೇಖರ ಭಟ್‌, ಮೆಕಟ್ರಾನಿಕ್ಸ್‌ ವಿಭಾಗದ ಮುಖ್ಯಸ್ಥ ಡಾ| ಡಿ.ವಿ.ಕಾಮತ್‌, ಆರೋನಾಟಿಕಲ್‌
ಹಾಗೂ ಅಟೋಮೊಬೈಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ| ದಯಾನಂದ ಪೈ, ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಸಹ ಪ್ರಧ್ಯಾಪಕ ಡಾ| ಬಾಲಕೃಷ್ಣ ಮಧ್ದೋಡಿ, ಮಾಹೆಯ ಪಿಆರ್‌ ಆ್ಯಂಡ್‌ ಮೀಡಿಯಾ ವಿಭಾಗದ ಮಿಥುನ್‌ ರಾಜ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Ad

ಟಾಪ್ ನ್ಯೂಸ್

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

SOMANNA 2

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ*ತ್ತು ಹೋಗಿದೆ: ಸಚಿವ ಸೋಮಣ್ಣ ವಾಗ್ದಾಳಿ

fadnavis

Maharashtra; ಧಾರ್ಮಿಕ ಸ್ಥಳಗಳಿಂದ 3,367 ಧ್ವನಿವರ್ಧಕಗಳ ತೆರವು : ಸಿಎಂ ಫಡ್ನವಿಸ್

ಎಲ್‌ಐಸಿಯ ಮತ್ತಷ್ಟು ಷೇರುಗಳ ಮಾರಾಟಕ್ಕೆ ಮುಂದಾದ ಕೇಂದ್ರ?

ಎಲ್‌ಐಸಿಯ ಮತ್ತಷ್ಟು ಷೇರುಗಳ ಮಾರಾಟಕ್ಕೆ ಮುಂದಾದ ಕೇಂದ್ರ?

ತಿರುಪತಿ ದೇಗುಲದ 1000 ಹಿಂದೂಯೇತರ ಸಿಬಂದಿ ಕೆಲಸ: ಕೇಂದ್ರ ಸಚಿವ

ತಿರುಪತಿ ದೇಗುಲದಲ್ಲಿ 1000 ಹಿಂದೂಯೇತರ ಸಿಬಂದಿಗಳಿಂದ ಕೆಲಸ: ಬಂಡಿ ಸಂಜಯ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಚ್‌ಪಿ ಲೇಸರ್ ಎಂ300 ಸರಣಿಯ ಪ್ರಿಂಟರ್‌ಗಳು ಭಾರತದಲ್ಲಿ ಬಿಡುಗಡೆ

ಎಚ್‌ಪಿ ಲೇಸರ್ ಎಂ300 ಸರಣಿಯ ಪ್ರಿಂಟರ್‌ಗಳು ಭಾರತದಲ್ಲಿ ಬಿಡುಗಡೆ

14-tech

OnePlus Nord CE5, Nord 5 ಮತ್ತು Buds 4 ಖರೀದಿಗೆ ಲಭ್ಯ

Block CEO Jack Dorsey Developing of an app that sends messages without the Internet!

Jack Dorsey: ಇಂಟರ್ನೆಟ್‌ ಇಲ್ಲದೇ ಮೆಸೆಜ್‌ ಕಳುಹಿಸುವ ಆ್ಯಪ್‌ ಅಭಿವೃದ್ಧಿ!

Microsoft: ಮತ್ತೆ 9000 ಉದ್ಯೋಗಿಗಳ ವಜಾಕ್ಕೆ ಮುಂದಾದ ಟೆಕ್‌ ದೈತ್ಯ ಮೈಕ್ರೋಸಾಫ್ಟ್‌

Microsoft: ಮತ್ತೆ 9000 ಉದ್ಯೋಗಿಗಳ ವಜಾಕ್ಕೆ ಮುಂದಾದ ಟೆಕ್‌ ದೈತ್ಯ ಮೈಕ್ರೋಸಾಫ್ಟ್‌

Jio: 5ಜಿ ಸ್ಪೀಡ್ ಚಾರ್ಟ್‌ನಲ್ಲಿ ಜಿಯೋಗೆ ಅಗ್ರಸ್ಥಾನ… ಟ್ರಾಯ್ ಡ್ರೈವ್ ಟೆಸ್ಟ್ ರಿಪೋರ್ಟ್

Jio: 5ಜಿ ಸ್ಪೀಡ್ ಚಾರ್ಟ್‌ನಲ್ಲಿ ಜಿಯೋಗೆ ಅಗ್ರಸ್ಥಾನ… ಟ್ರಾಯ್ ಡ್ರೈವ್ ಟೆಸ್ಟ್ ರಿಪೋರ್ಟ್

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

POLICE-5

Brahmavar: ಮದ್ಯ ಅಕ್ರಮ ಮಾರಾಟ; ಪ್ರಕರಣ ದಾಖಲು

1

Hiriydaka: ಆನ್‌ಲೈನ್‌ ವಂಚನೆ; 3.60 ಲಕ್ಷ ರೂ. ಕಳೆದುಕೊಂಡ ಯುವತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.