ಮೊಹಮ್ಮದ್ ಕೈಫ್ ಆಯ್ಕೆಯ ಐಪಿಎಲ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕ
Team Udayavani, Apr 30, 2022, 5:15 AM IST
ಮುಂಬಯಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಮ್ಮ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ. ಇದಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದಾರೆ.
ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮ ಆರಂಭಿಕರಾಗಿದ್ದು, ವಿರಾಟ್ ಕೊಹ್ಲಿ ಒನ್ಡೌನ್ನಲ್ಲಿ ಕಾಣಿಸಿಕೊಂಡಿದ್ದಾರೆ. “ಧೋನಿ ಭಾರತದಲ್ಲಿ ಟಿ20 ಕ್ರಿಕೆಟಿಗೆ ಬುನಾದಿ ಹಾಕಿದ ಆಟಗಾರ.
ಭಾರತಕ್ಕೆ 2007ರ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ತಂದೊಪ್ಪಿಸುವ ಜತೆಗೆ 4 ಐಪಿಎಲ್ ಟ್ರೋಫಿಗಳನ್ನು ಗೆದ್ದ ನಾಯಕನೂ ಆಗಿದ್ದಾರೆ’ ಎಂಬುದಾಗಿ ಕೈಫ್ ಹೇಳಿದ್ದಾರೆ. ಈ ಮೂಲಕ ತಮ್ಮ ತಂಡದ ಕಪ್ತಾನನ ಆಯ್ಕೆಯನ್ನು ಸಮರ್ಥಿಸಿದ್ದಾರೆ.
ಕೈಫ್ ಐಪಿಎಲ್ ತಂಡ: ಕ್ರಿಸ್ ಗೇಲ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಎಬಿ ಡಿ ವಿಲಿಯರ್, ಮಹೇಂದ್ರ ಸಿಂಗ್ ಧೋನಿ (ನಾಯಕ/ವಿ.ಕೀ.), ಆ್ಯಂಡ್ರೆ ರಸೆಲ್, ರಶೀದ್ ಖಾನ್, ಸುನೀಲ್ ನಾರಾಯಣ್, ಜಸ್ಪ್ರೀತ್ ಬುಮ್ರಾ, ಲಸಿತ ಮಾಲಿಂಗ.