ಮುಹೂರ್ತ ನಡೆಸಿದ ಅಮೃತ ಶಿಲೆಯ ಮಾಹಿತಿ ಫಲಕಕ್ಕೆ ಬೆಳ್ಳಿ ಹಬ್ಬ! ಸೇತುವೆ ?

ಮಣಿಪುರ ಪೊಸಮಠದ ಬಳಿ ಪಾಪನಾಶಿನಿ ಹೊಳೆಗೆ ಸೇತುವೆ...ಸಾರ್ವಜನಿಕರ ಆಕ್ರೋಶ

Team Udayavani, Mar 11, 2023, 3:07 PM IST

bridge …

ಕಟಪಾಡಿ: ಮಣಿಪುರ ಗ್ರಾ.ಪಂ. ವ್ಯಾಪ್ತಿಯಲ್ಲಿನ ಪೊಸಮಠದ ಬಳಿ ಪಾಪನಾಶಿನಿ ಹೊಳೆಗೆ ಸೇತುವೆ ನಿರ್ಮಿಸಲು 1997ರ ನ.2ರಂದು ಮುಹೂರ್ತ ನಡೆಸಿದ ಅಮೃತ ಶಿಲೆಯ ಮಾಹಿತಿ ಫಲಕವು ಕಂಡು ಬಂದಿದ್ದು, ಈ ಅಮೃತ ಫಲಕ ಮಾತ್ರ ಬೆಳ್ಳಿಹಬ್ಬ ಆಚರಿಸುವಂತಾಗಿದೆ. ಪಾಪನಾಶಿನಿ ತೀರ್ಥ ಕ್ಷೇತ್ರ ದೇವರಗಿರಿ ಪ್ರದೇಶದಲ್ಲಿ ಇಂದಿಗೂ ಸೇತುವೆ ನಿರ್ಮಾಣಗೊಂಡಿಲ್ಲ. ಫ‌ಲಕದಲ್ಲಿ ಅಂದಿನ ಬಂದರು, ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ. ಜಯಪ್ರಕಾಶ್‌ ಹೆಗ್ಡೆ, ಶಾಸಕರಾಗಿದ್ದ ಯು.ಆರ್‌ ಸಭಾಪತಿ, ವಸಂತ ವಿ. ಸಾಲಿಯಾನ್‌ ಅವರ ಹೆಸರುಗಳಿವೆ. ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿರುವರೆಂದೂ, ಅಮೃತ ಶಿಲೆಯ ಕೊಡುಗೆ ಕೆ. ವಾಮನ ಬಾಳಿಗ (ಹೊಟೇಲ್‌ ದ್ವಾದಶಿ ಕಲ್ಸಂಕ) ಎಂದೂ ಇದೆ.

ಮಣಿಪುರದ ಪೊಸಮಠ ಹಾಗೂ ಕುಂಜಾರುಗಿರಿಗೆ ಈ ಸಂಪರ್ಕ ಸೇತುವೆಯ ಮೂಲಕ ನೇರ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಲಿದೆ. ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದ ಕುಂಜಾರಮ್ಮನ ಜಳಕಕ್ಕೆ ಬರುವ ಸಂದರ್ಭ ಇಂದಿಗೂ ಒಂದು ಕಿ.ಮೀ. ನಷ್ಟು ದೂರವನ್ನು ದೋಣಿ ಬಳಸಿಯೇ ಪಾಪನಾಶಿನಿ ಹೊಳೆಯನ್ನು ದಾಟಿ ಪೊಸಮಠಕ್ಕೆ ದೇವರು ಬರುವ ಸಂಪ್ರದಾಯ ಚಾಲ್ತಿಯಲ್ಲಿದೆ. ದೇವರ ಸೇವೆಗೆ ದೆಂದೂರು, ಮಣಿಪುರ ಭಾಗದ ಸುಮಾರು 400ಕ್ಕೂ ಅಧಿಕ ಭಕ್ತರು ಇಂದಿಗೂ ಇಲ್ಲಿ ಜಮಾಯಿಸುತ್ತಾರೆ. 25 ವರ್ಷಗಳ ಹಿಂದೆಯೇ ಇಲ್ಲಿ ಸೇತುವೆಯು ನಿರ್ಮಾಣಗೊಂಡಿದ್ದಲ್ಲಿ ಮಣಿಪುರ ಮತ್ತು ಕುರ್ಕಾಲು ಉಭಯ ಗ್ರಾಮಗಳಲ್ಲಿ ಮತ್ತಷ್ಟು ಅಭಿವೃದ್ಧಿಯು ಕಾಣಲು ಸಾಧ್ಯವಾಗುತ್ತಿತ್ತು.

ಆದರೆ ಸೇತುವೆ ನಿರ್ಮಾಣಗೊಳ್ಳದೆ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಈ ಭಾಗದಲ್ಲಿ ಸುಸಜ್ಜಿತ ಸಂಪರ್ಕ ಸೇತುವೆಯನ್ನು ನಿರ್ಮಿಸಿ ಶಾಲೆಯ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ದೇವರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲತೆಯನ್ನು ಕಲ್ಪಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಕೈ ಜೋಡಿಸುವಂತೆ ನಾಗರಿಕರು ಆಗ್ರಹಿಸುತ್ತಿದ್ದಾರೆ.

ಈ ಸೇತುವೆಯಿಂದ ಕುರ್ಕಾಲು ಗ್ರಾಮದ ಕುಂಜಾರುಗಿರಿಗೆ ನೇರ ಸಂಪರ್ಕ ಸಾಧ್ಯವಾಗಲಿದ್ದು ಆನಂದತೀರ್ಥ ವಿದ್ಯಾಲಯಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹತ್ತಿರದ ದಾರಿಯಾಗಲಿದೆ. ಕುಂಜಾರುಗಿರಿಯಿಂದ ಸುತ್ತು ಬಳಸಿ ಉಡುಪಿ, ಮಣಿಪಾಲಕ್ಕೆ ಸಾಗುವ ಬದಲಿಗೆ ಬಹಳಷ್ಟು ಹತ್ತಿರದ ಸಂಪರ್ಕ ಸೇತುವೆಯಾಗಲಿದೆ.
-ಸಂತೋಷ್‌ ಶೆಟ್ಟಿ,ಸದಸ್ಯರು, ಮಣಿಪುರ ಗ್ರಾ.ಪಂ

ವೆಂಟೆಡ್‌ ಡ್ಯಾಂ ನಿರ್ಮಾಣ ಆಗಬೇಕೆಂಬ ಜನರ ಬೇಡಿಕೆ ಇದ್ದಲ್ಲಿ ಸಣ್ಣ ನೀರಾವರಿ ಇಲಾಖೆಯು ಹೊಸ ಪ್ರಸ್ತಾವನೆ ಮೂಲಕ ಯೋಜನೆಯನ್ನು ರೂಪಿಸಲಾಗುತ್ತದೆ.
-ಮಮತಾ, ಎ.ಇ., ಸಣ್ಣ ನೀರಾವರಿ ಇಲಾಖೆ

ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಲ್ಲಿ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಆದ್ಯತೆಯ ಮೇರೆಗೆ ಶಾಸಕರ ಶಿಫಾರಸ್ಸಿನಂತೆ ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಮುಂದಾಗಲಿದ್ದೇವೆ.

-ಸವಿತಾ, ಎ.ಇ. ಲೋಕೋಪಯೋಗಿ ಇಲಾಖೆ

~ವಿಜಯ್‌ ಆಚಾರ್ಯ ಉಚ್ಚಿಲ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.