Alcohol: ಮಗುವಿಗೆ ಮದ್ಯ ಕುಡಿಸಿದ ತಾಯಿ ಬಂಧನ!
Team Udayavani, Aug 9, 2023, 8:09 PM IST
ಕ್ಯಾಲಿಫೋರ್ನಿಯಾ: ತನ್ನ ಅಳುತ್ತಿದ್ದ ಮಗುವನ್ನು ಸುಮ್ಮನಿರಿಸಲು ತಾಯಿಯೊಬ್ಬಳು ಮಗುವಿಗೆ ಮದ್ಯ ನೀಡಿದ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಬನ್ಯಾಡಿಯೊ ಕೌಂಟಿಯಲ್ಲಿ ವರದಿಯಾಗಿದೆ.
ಹಾನೆಸ್ಟಿ ಡಿ ಲಾ ಟೊರ್ರೆ (37) ಎಂಬ ಮಹಿಳೆ ತನ್ನ ಮಗುವಿನೊಂದಿಗೆ ಕಾರಿನಲ್ಲಿ ರಿಯಾಲ್ಟೊ ಮಾರ್ಗವಾಗಿ ಪ್ರಯಾಣಿಸುತ್ತಿದ್ದಳು. ಮಗು ಒಂದೇ ಸಮನೆ ಅಳುತ್ತಿತ್ತು. ಅಳು ನಿಲ್ಲಿಸಲು ಆಕೆ ಮಗುವಿಗೆ ಮದ್ಯದ ಬಾಟಲಿಯನ್ನು ನೀಡಿದ್ದಾಳೆ.
ಮಗು ಮದ್ಯ ಸೇವಿಸಿ ಪ್ರಜ್ಞೆ ತಪ್ಪಿದೆ. ಸದ್ಯ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆಯುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ತಾಯಿಯನ್ನು ಬಂಧಿಸಿದ್ದಾರೆ. ಮತ್ತೂಂದು ಘಟನೆಯಲ್ಲಿ, ಒಹಿಯೋದಲ್ಲಿ ತಾಯಿಯೊಬ್ಬಳು ತನ್ನ 16 ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು 10 ದಿನಗಳು ಜಾಲಿ ರೈಡ್ಗೆಂದು ಪೊರ್ಟೊರಿಕೊ ಮತ್ತು ಡೆಟ್ರಾಯಿಟ್ ಟ್ರಿಪ್ಗೆ ಹೋಗಿದ್ದಾಳೆ.
ಮನೆಯಲ್ಲಿ ಒಂಟಿಯಾದ ಮಗು, ಹಸಿವಿವಿಂದ ಒದ್ದಾಡಿ ಪ್ರಾಣ ಕಳೆದುಕೊಂಡಿದೆ. ಘಟನೆ ಹಿನ್ನೆಲೆಯಲ್ಲಿ ತಾಯಿ ಕ್ರಿಸ್ಟೆಲ್ ಕ್ಯಾಂಡಾಲಾರಿಯೊ(31)ಳನ್ನು ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ