ಮಂಡ್ಯದಲ್ಲಿ ಮುದ್ದೇಬಿಹಾಳದ ವ್ಯಕ್ತಿ ಸಾವು
Team Udayavani, Jan 18, 2022, 11:24 AM IST
ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ವ್ಯಕ್ತಿಯೊಬ್ಬರು ಮಂಡ್ಯದಲ್ಲಿ ಅಸಜಹವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗದ್ದೆಪ್ಪ ಶಿವಬಸಪ್ಪ ಕೊಳ್ಳಿ (50) ಸಾವನ್ನಪ್ಪಿರುವ ವ್ಯಕ್ತಿ. ಈತ 2-3 ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಗುಳೇ ಹೋಗಿದ್ದ ಎನ್ನಲಾಗಿದೆ.
ಮಂಡ್ಯದ ಪೊಲೀಸರು ವಿಜಯಪುರದ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮೃತನ ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ. ಮೃತನ ಕುಟುಂಬದವರು ಮಂಡ್ಯಕ್ಕೆ ತೆರಳಿದ್ದು, ಮಂಡ್ಯ ಪೊಲೀಸ್ ಠಾಣೆಯಲ್ಲೇ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.