ಮೈಸೂರು: ಸೂಯೆಜ್ ಫಾರಂನಲ್ಲಿ ಮೊಸಳೆ ಪ್ರತ್ಯಕ್ಷ. ಸ್ಥಳೀಯರಲ್ಲಿ ಆತಂಕ
Team Udayavani, Nov 23, 2021, 12:58 PM IST
ಮೈಸೂರು: ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಸೂಯೆಜ್ ಫಾರಂನಲ್ಲಿ ಭಾರಿ ಗ್ರಾತ್ರದ ಮೊಸಳೆಯೊಂದು ಪತ್ತೆಯಾಗಿದೆ.
ಮೊಸಳೆಯನ್ನು ಕಂಡು ಜನರಲ್ಲಿ ಆತಂಕ ಹೆಚ್ಚಾಗಿದ್ದು, ಜನ, ಜಾನುವಾರುಗಳ ಜೀವಕ್ಕೆ ಆಪತ್ತು ಎದುರಾಗಿದೆ. ಕೂಡಲೇ ಮೊಸಳೆ ಸೆರೆ ಹಿಡಿಯುವಂತೆ ಸ್ಥಳೀಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಫಾರಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿ, ಸದ್ಯದಲ್ಲಿಯೇ ಮೊಸಳೆ ಸೆರೆ ಹಿಡಿಯುವುದಾಗಿ ಭರವಸೆ ನೀಡಿರುವ ಅಧಿಕಾರಿಗಳು.