ಆಗ ಕಲ್ಲಲ್ಲಿ ದಾಳಿ ಮಾಡಿದರು; ಈಗ ಬಾಯಲ್ಲಿ ಹೇಳಿದ್ದಾರೆ
Team Udayavani, Feb 8, 2023, 12:05 AM IST
ಕಾರವಾರ: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕಾಲದಿಂದಲೇ ಕಲ್ಲಲ್ಲಿ ದಾಳಿ ಮಾಡುತ್ತಾ ಬಂದವರು, ಈಗ ಬಾಯಲ್ಲಿ ನೇರವಾಗಿ ಹೇಳಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಬ್ರಾಹ್ಮಣ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯವನ್ನು ಕೀಳಾಗಿ ನೋಡುವ, ಸಮುದಾಯಕ್ಕೆ ಅಪಮಾನ ಮಾಡುವ, ತುತ್ಛವಾಗಿ ಕಾಣುವುದು ಒಬ್ಬ ಮಾಜಿ ಮುಖ್ಯಮಂತ್ರಿಗೆ ಶೋಭೆಯಲ್ಲ ಎಂದರು.
ಮಾಜಿ ಮುಖ್ಯಮಂತ್ರಿಯಾದವರು ಜವಾಬ್ದಾರಿ ಯುತ ಹಾಗೂ ಎಚ್ಚರಿಕೆಯಿಂದ ಮಾತನಾಡಬೇಕು. ಸಮುದಾಯಗಳನ್ನು ಕೆರಳಿಸುವ, ಸಮಾಜಗಳನ್ನು ಹೀನಾಯವಾಗಿ ಕಾಣುವಂಥದ್ದು ಸರಿಯಲ್ಲ. ಗಾಂಧಿ ಕೊಲೆಯನ್ನು ಒಂದು ಸಮುದಾಯಕ್ಕೆ ಕಟ್ಟಿದ್ದಾರೆ. ಇವರ ಆಡಳಿತವೇ ಹಾಗೆ, ರಾಮಕೃಷ್ಣ ಹೆಗಡೆಯವರಿಗೆ ಹೊಡೆದವರು ಯಾರು? ಅವರ ರಕ್ತದಲ್ಲೇ ಬ್ರಾಹ್ಮಣ ವಿರೋಧವಿದೆ. ಅವರು ಮೂರು ಜಿಲ್ಲೆಗಳನ್ನಿಟ್ಟುಕೊಂಡು ಇಡೀ ರಾಜ್ಯ ಗೆಲ್ಲುವ ಕನಸು ಕಾಣುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಕಳೆದ ಬಾರಿಯಷ್ಟು ಸ್ಥಾನಗಳನ್ನು ಕೂಡ ಅವರು ಗೆಲ್ಲುವುದಿಲ್ಲ. ಕಳೆದ ಬಾರಿ ಬೇರೆಯವರ ಸಹಾಯದಿಂದ ಗೆದ್ದಿದ್ದಾರೆ. ಈ ಬಾರಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ ಎಂಬುದು ಸರ್ವೇ ರಿಪೋರ್ಟ್ ನಲ್ಲಿ ಅವರಿಗೆ ಗೊತ್ತಾಗಿದೆ. ಹೀಗಾಗಿ ಮಾನಸಿಕ ಚಂಚಲತೆಯಿಂದ ಮಾತನಾಡುತ್ತಿದ್ದಾರೆ ಎಂದರು.
ಚುನಾವಣೆಗಳು ಅಭಿವೃದ್ಧಿ ಮತ್ತು ಸಾಮಾಜಿಕ ಸಮಸ್ಯೆಗಳ ಮೇಲೆ ನಡೆಯಬೇಕು. ಹಾಗಾಗಿ ಅಭಿವೃದ್ಧಿ ನಾವು ಹೇಗೆ ಮಾಡಿದ್ದೇವೆ, ನೀವೇನು ಮಾಡಿದ್ದೀರಿ ಎಂದು ಚರ್ಚಿಸೋಣ, ಬರುತ್ತೀರಾ ಬರುತ್ತೀರಾ ಸಿದ್ದರಾಮಣ್ಣಾ, ದೇಶಪಾಂಡೆ ಅವರೇ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ
ಮಾಸ್ ಲುಕ್ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್ ರಾಜ್
ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ
ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ
ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್