78 ಸಾವಿರ ಆಸ್ತಿ ಮಾಲೀಕರಿಗೆ ನೋಟಿಸ್‌?

1,021 ಮಂದಿಗೆ ಸದ್ಯಕ್ಕೆ ನೋಟಿಸ್‌ ; ಲಾಕ್‌ಡೌನ್‌ನಿಂದ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಸಂಕಷ್ಟ

Team Udayavani, Aug 19, 2021, 2:08 PM IST

78 ಸಾವಿರ ಆಸ್ತಿ ಮಾಲೀಕರಿಗೆ ನೋಟಿಸ್‌?

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ನಿಂದ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ತೀವ್ರ ಆರ್ಥಿಕ ಸಂಕಷ್ಟ…ಮತ್ತೊಂದೆಡೆ, ಪಾಲಿಕೆ ನೀಡುತ್ತಿರುವ ಆಸ್ತಿ ತೆರಿಗೆ ಬಾಕಿ ವಸೂಲಿ ಹಾಗೂ ದಂಡದ ಬಡ್ಡಿ ಪಾವತಿ ನೋಟಿಸ್‌ನಿಂದ ಸಾಲದ ಸುಳಿಗೆ ಸಿಲುಕುವ ಭೀತಿ!

ಇದು, ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಪ್ರಸ್ತುತ ಎದುರಿಸುತ್ತಿರುವ ಸಂಕಷ್ಟಗಳು. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ವಲಯ
ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡ ಆಸ್ತಿ ಮಾಲೀಕರು, ದಂಡ ಮತ್ತು ದಂಡದ ಬಡ್ಡಿ ಪಾವತಿಸುವ ಸುಳಿಗೆ ಸಿಲುಕಿದ್ದಾರೆ. ಈ ನಡುವೆ
ಸರ್ಕಾರದಿಂದ ದಂಡ ವಸೂಲಾತಿ ತಗ್ಗಿಸುವ ಹಾಗೂ ರದ್ದುಗೊಳಿಸುವ ವಿನಾಯಿತಿ ಸಿಗುಬಹುದೇ ಎಂದು ದಿನ ಎಣಿಸುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ತಪ್ಪಾಗಿ ವಲಯ ವರ್ಗೀಕರಣ ಘೋಷಿಸಿಕೊಂಡ 78 ಸಾವಿರ ಆಸ್ತಿ ಮಾಲೀಕರಿಗೆ ಪಾಲಿಕೆಯಿಂದ ನೋಟಿಸ್‌ ನೀಡಲು ನಿರ್ಧರಿಸಲಾಗಿದೆ.

ಮಾರ್ಚ್‌ ತಿಂಗಳಲ್ಲೇ ಇಷ್ಟು ನೋಟಿಸ್‌ಗಳು ಜನರೇಟ್‌ ಆದರೂ, ಪಾಲಿಕೆ ಕಂದಾಯ ಅಧಿಕಾರಿಗಳು ಈವರೆಗೂ ವಲಯ ವರ್ಗೀಕರಣದಡಿ ತಪ್ಪಾಗಿ ಆಸ್ತಿ ತೆರಿಗೆ ಘೋಷಿಸಿಕೊಂಡ ಕೇವಲ 1,021 ಆಸ್ತಿ ಮಾಲೀಕರಿಗೆ ಮಾತ್ರ ದಂಡ ಹಾಗೂ ದಂಡದ ಬಡ್ಡಿ ಮೊತ್ತವನ್ನು
ಪಾವತಿಸುವಂತೆ ನೋಟಿಸ್‌ ನೀಡಿದ್ದಾರೆ. ಮತ್ತೊಂದೆಡೆ, ಪಾಲಿಕೆ ವ್ಯಾಪ್ತಿಯಲ್ಲಿನ 481 ಆಸ್ತಿ ಮಾಲೀಕರು, ಸ್ವಯಂಪ್ರೇರಿತವಾಗಿ ಆನ್‌ಲೈನ್‌ನಲ್ಲಿ
ಪರಿಶೀಲನೆ ನಡೆಸಿ ತಾವೇ ಖುದ್ದಾಗಿ ಬಡ್ಡಿ ಹಾಗೂ ದುಪ್ಪಟ್ಟು ದಂಡದ ಮೊತ್ತದೊಂದಿಗೆ ವ್ಯತ್ಯಾಸದ ಹಣವನ್ನೂ ಪಾವತಿ ಮಾಡಿದ್ದಾರೆ. ಜೂ.2ರ ವೇಳೆಗೆ ತಪ್ಪಾಗಿ ವಲಯ ವರ್ಗೀಕರಣಘೋಷಿಸಿಕೊಂಡ ಒಟ್ಟು 1,502 ಆಸ್ತಿ ಮಾಲೀಕರು ಒಟ್ಟು 3.57 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿ ಮಾಡಿದ್ದಾರೆ ಎಂದು ಪಾಲಿಕೆಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ : ಬಿಜೆಪಿಗೆ ಸಾಧ್ಯವಾದೀತೆ ಮಿಷನ್‌-60?

ಪಾಲಿಕೆಗೆ 116 ಕೋಟಿ ರೂ. ನಷ್ಟ: ನಗರದಲ್ಲಿ ಒಟ್ಟು 22 ಲಕ್ಷ ಆಸ್ತಿಗಳಿದ್ದು, ಈ ಪೈಕಿ 78 ಸಾವಿರ ಆಸ್ತಿ ಮಾಲೀಕರು ತಮ್ಮ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿ ಕೊಂಡಿದ್ದಾರೆ. ಅಂದರೆ, “ಎ’ ವಲಯದಲ್ಲಿ ಆಸ್ತಿ ಇದ್ದವರು ಆಸ್ತಿ ತೆರಿಗೆ ಪಾವತಿ ವೇಳೆ “ಬಿ’ ವಲಯವನ್ನು ನಮೂದಿಸಿ ಅದಕ್ಕನುಗುಣವಾಗಿ ಕಡಿಮೆ ತೆರಿಗೆ ಪಾವತಿಸಿದ್ದಾರೆ. ಅನೇಕ ಆಸ್ತಿ ಮಾಲೀಕರು, ಬದಲಾದ ವ್ಯವಸ್ಥೆಯ ಅರಿವಿಲ್ಲದೆ ಆಕಸ್ಮಿಕವಾಗಿ ತಪ್ಪು ವಲಯ ನಮೂದಿಸಿದ್ದಾರೆ. ಮತ್ತೊಂದೆಡೆ, ಹಲವು ವಾಣಿಜ್ಯ ಆಸ್ತಿಗಳ ಮಾಲೀಕರು ಕಡಿಮೆ ಆಸ್ತಿ ತೆರಿಗೆ ಪಾವತಿಸಲು ಉದ್ದೇಶ ಪೂರ್ವಕವಾಗಿ ತಪ್ಪು ವಲಯ ಘೋಷಿಸಿದ್ದಾರೆ. ಇದರಿಂದ ಪಾಲಿಕೆಗೆ 116 ಕೋಟಿ ರೂ. ಆದಾಯ ನಷ್ಟವಾಗಲಿದೆ ಎಂದು ಮಾಹಿತಿ
ನೀಡಿದ್ದಾರೆ.

ವಲಯ ವರ್ಗೀಕರಣ ಹೇಗೆ?: ಪಾಲಿಕೆ ಆಸ್ತಿ ತೆರಿಗೆ ಪಾವತಿಸಲು ಇದ್ದ ವ್ಯವಸ್ಥೆಯನ್ನು 2016ರಲ್ಲಿ ಬದಲಾವಣೆ ಮಾಡಿತ್ತು. “ಎ’ ಎಂದರೆ ಅತಿ ಹೆಚ್ಚು ತೆರಿಗೆ ವಿಧಿಸುವ ಹಾಗೂ “ಎಫ್’ ಎಂದರೆ ಕಡಿಮೆ ತೆರಿಗೆ ಪಾವತಿಸುವ ವಲಯಗಳಾಗಿ ವಿಂಗಡಿಸಲಾಯಿತು. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯಾ ಪ್ರದೇಶದ ವ್ಯಾಪ್ತಿಯಲ್ಲಿ ನಿಗದಿಪಡಿಸಿರುವ ಆಸ್ತಿಯ ಮಾರ್ಗಸೂಚಿ ದರದ ಆಧಾರದ ಮೇಲೆ “ಎ’ ವಲಯದಿಂದ “ಎಫ್’ ವಲಯದ ತನಕ ಆರು (ಎ, ಬಿ, ಸಿ, ಡಿ, ಇ, ಎಫ್) ರೀತಿಯ ವಲಯ ವರ್ಗೀಕರಣ ಮಾಡಿದೆ. ಇದನ್ನು ಆಧಾರವಾಗಿಟ್ಟುಕೊಂಡು ಆಯಾ ವಲಯ ವರ್ಗೀಕರಣದ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರು, ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಯಡಿ ತಮ್ಮ ಆಸ್ತಿಗಳ ತೆರಿಗೆಯನ್ನು ಲೆಕ್ಕ ಹಾಕಿ ಪಾಲಿಕೆಗೆ ತೆರಿಗೆ ಪಾವತಿಸಬೇಕು. ಆದರೆ, ಅತಿಹೆಚ್ಚು ಮಾರ್ಗಸೂಚಿ ದರವಿರುವ “ಎ’ ವಲಯ ವ್ಯಾಪ್ತಿಯ ಆಸ್ತಿ ಮಾಲೀಕರು”ಬಿ’ಅಥವಾ”ಸಿ’ ವಲಯದಲ್ಲಿರುವ ಆಸ್ತಿಗಳನ್ನು ಘೋಷಿಸಿಕೊಂಡಿದ್ದಾರೆ. ಆ ಮೂಲಕ ಪಾಲಿಕೆಗೆ ಕಡಿಮೆ ಆಸ್ತಿ ತೆರಿಗೆ ಕಟ್ಟಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಬಡ್ಡಿ, ದಂಡಕ್ಕೆ ಸಿಗುವುದೇ ವಿನಾಯಿತಿ?
ನಗರದಲ್ಲಿ ಒಟ್ಟು 22 ಲಕ್ಷ ಆಸ್ತಿಗಳಿದ್ದು, 78,000 ಆಸ್ತಿಗಳ ಮಾಲೀಕರು 2016ರಲ್ಲಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿ ಕೊಂಡಿದ್ದಾರೆ. ಇದರಿಂದಾಗಿ ಪಾಲಿಕೆಗೆ ಸುಮಾರು 116 ಕೋಟಿ ರೂ.ಆದಾಯ ಖೋತಾ ಆಗಿದೆ.ಈ ವಿಷಯವನ್ನು ಯೋಜನೆ ಜಾರಿ ಮಾಡಿದಾಗಲೇ ಆಸ್ತಿ ಮಾಲೀಕರಿಗೆ ಮನವರಿಕೆ ಮಾಡಬೇಕಿತ್ತು. ಅದರೆ, ಹಾಗೆ ಮಾಡದೇ 2016ರಿಂದ ಅನ್ವಯವಾಗುಂತೆ ಇದರ ಮೇಲೆ 89 ಕೋಟಿ ರೂ. ಬಡ್ಡಿ ಮತ್ತು ಮಾಡಿದ ತಪ್ಪಿಗೆ 232 ಕೋಟಿ ರೂ. ದಂಡ ವಿಧಿಸಲು ಮುಂದಾಗಿದೆ. ಇದರ ಬದಲು ಬಡ್ಡಿ ಮತ್ತು ದಂಡ ಪಾವತಿಗೆ ವಿನಾಯಿತಿ ನೀಡಬೇಕು. ಅಲ್ಲದೆ,ಆಸ್ತಿತೆರಿಗೆಯನ್ನುಮಾತ್ರಕಟ್ಟಿಸಿಕೊಳ್ಳಬೇಕು ಎಂದು ಆಸ್ತಿ ತೆರಿಗೆ ಮಾಲೀಕರು, ಪಾಲಿಕೆಗೆ ಅವಲೊತ್ತು ಕೊಂಡಿದ್ದಾರೆ

ತಪ್ಪು ವಲಯ ವರ್ಗೀಕರಣಕ್ಕೆ ದುಪ್ಪಟ್ಟು ದಂಡ, ಬಡ್ಡಿ
ವಲಯ ವರ್ಗೀಕರಣದ ನಿಯಮಾವಳಿ ಅನ್ವಯ ತಪ್ಪಾಗಿ ಆಸ್ತಿ ವರ್ಗೀಕರಣ ಮಾಡಿಕೊಂಡು ಆಸ್ತಿ ತೆರಿಗೆ (ಪ್ರಾಪರ್ಟಿ ಟ್ಯಾಕ್ಸ್‌) ಕಟ್ಟಿದ ಆಸ್ತಿಗಳ ವಿವರವನ್ನು ಪಾಲಿಕೆಯ ಆಸ್ತಿ ತಂತ್ರಾಂಶದ ಮೂಲಕ ಪತ್ತೆ ಮಾಡಲಾಗಿದೆ. ಆ ಮೂಲಕ 78,524 ನೋಟಿಸ್‌ಗಳ ಆಸ್ತಿ ಮಾಲೀಕರಿಗೆ ಕಂದಾಯ ವಿಭಾಗದವರು ವ್ಯತ್ಯಾಸ ಆಸ್ತಿ ತೆರಿಗೆ ಮೊತ್ತದೊಂದಿಗೆ ದಂಡ ಹಾಗೂ ದಂಡದ ಬಡ್ಡಿಯನ್ನು ಸೇರಿಸಿ ನೋಟಿಸ್‌(ಡಿಮ್ಯಾಂಡ್‌ ನೋಟಿಸ್‌) ನೀಡಿದ್ದಾರೆ. ಅದರಂತೆ, ವಲಯ ವರ್ಗೀಕರಣದಲ್ಲಿ 100 ರೂ. ವ್ಯತ್ಯಾಸದ ಆಸ್ತಿ ತೆರಿಗೆಕಂಡು ಬಂದರೆ ಆಸ್ತಿ ಮಾಲೀಕರು, ವ್ಯತ್ಯಾಸ
ಮೊತ್ತ ಹಾಗೂ ಅದಕ್ಕೆ ಎರಡು ಪಟ್ಟು ದಂಡವಾದ 200 ರೂ. ಹಾಗೂ ಬಡ್ಡಿಯೊಂದಿಗೆ ತೆರಿಗೆ ಪಾವತಿಸ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡ ಆಸ್ತಿ ಮಾಲೀಕರಿಗೆ ದಂಡ ಮತ್ತು ದಂಡದ ಬಡ್ಡಿ ಪಾವತಿಗೆ ನೀಡಿರುವ ನೋಟಿಸ್‌ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬಳಿಕ, ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ.
-ರಾಕೇಶ್‌ ಸಿಂಗ್‌,
ಬಿಬಿಎಂಪಿ ಆಡಳಿತಾಧಿಕಾರಿ

ತಪ್ಪಾಗಿ ವಲಯ ವರ್ಗೀಕರಣವನ್ನು ಘೋಷಿಸಿಕೊಂಡ ಆಸ್ತಿ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ದಂಡ ಪಾವತಿ ತಗ್ಗಿಸಲು, ರದ್ದು ಗೊಳಿಸುವಂತೆ ಆಸ್ತಿಮಾಲೀಕರು ಮನವಿ ಸಲ್ಲಿಸಿದ್ದು ಪರಿಶೀಲನೆ ನಡೆಸಿ, ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು.
-ಡಾ.ಎಸ್‌.ಬಸವರಾಜ್‌,
ಪಾಲಿಕೆ ವಿಶೇಷ ಆಯುಕ್ತ(ಕಂದಾಯ)

– ವಿಕಾಸ್‌ ಆರ್‌. ಪಿಟ್ಲಾಲಿ

ಟಾಪ್ ನ್ಯೂಸ್

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ಅತಿಥಿ ಉಪನ್ಯಾಸಕರ ನೇಮಕ : 27 ರಿಂದ ಆನ್ ಲೈನ್ ಕೌನ್ಸೆಲಿಂಗ್

ಅತಿಥಿ ಉಪನ್ಯಾಸಕರ ನೇಮಕ : 27 ರಿಂದ ಆನ್ ಲೈನ್ ಕೌನ್ಸೆಲಿಂಗ್

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ೆಹರಜಹೆದ

ಚುನಾವಣೆಗಳ ಘನತೆ ಎತ್ತಿ ಹಿಡಿಯಿರಿ: ಇರ್ಫಾನ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.