Pak: ಶಾದಾಬ್ ಖಾನ್ ತಲೆಗೆ ಗಾಯ
Team Udayavani, Oct 28, 2023, 12:43 AM IST
ಚೆನ್ನೈ: ದಕ್ಷಿಣ ಆಫ್ರಿಕಾ ವಿರುದ್ದದ ವಿಶ್ವಕಪ್ ಪಂದ್ಯದ ವೇಳೆ ಪಾಕಿಸ್ಥಾನದ ಆಲ್ರೌಂಡರ್ ಶಾದಾಬ್ ಖಾನ್ ಅವರ ತಲೆಗೆ ಗಾಯವಾಯಿತು. ಅವರ ಬದಲಿಗೆ ಸ್ಪಿನ್ನರ್ ಉಸಾಮ ಮಿರ್ ಅವರನ್ನು ತಂಡಕ್ಕೆ ಸೇರಿಸಲಾಯಿತು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ನ ಮೊದಲ ಓವರ್ ವೇಳೆ ಈ ಘಟನೆ ಸಂಭವಿಸಿತು. ಕ್ವಿಂಟನ್ ಡಿ ಕಾಕ್ ಅವರನ್ನು ರನೌಟ್ ಮಾಡುವ ಉದ್ದೇಶದಿಂದ ಓಡಿದಾಗ ನೆಲಕ್ಕೆ ಕುಸಿದರು. ಅವರು ನೆಲದ ಮೇಲೆ ಚಲನೆಯಿಲ್ಲದೆ ಮಲಗಿದಾಗ ಸ್ಟ್ರೆಚರ್ ತಂದು ಡ್ರೆಸ್ಸಿಂಗ್
ರೂಮ್ಗೆ ಕೊಂಡೊಯ್ಯಲಾಯಿತು. ಅಲ್ಲಿ ತಂಡದ ವೈದ್ಯರು ತುರ್ತು ಚಿಕಿತ್ಸೆ ನೀಡಿದರು. ಕುತ್ತಿಗೆ ಉಳುಕಿದೆ ಎಂದು ವೈದ್ಯರು ಪರಿಗಣಿಸಿದರು.
ಗಾಯದ ತೀವ್ರತೆಯಿಂದಾಗಿ ಶಾದಾಬ್ ಈ ಪಂದ್ಯದಲ್ಲಿ ಆಡುವುದಿಲ್ಲ. ಅವರ ಬದಲಿಗೆ ಉಸಾಮ ಮಿರ್ ಅವರನ್ನು ತಂಡಕ್ಕೆ ಸೇರಿಸಲಾಯಿತು ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ಪ್ರಕಟನೆ ತಿಳಿಸಿದೆ.